Site icon Vistara News

Muslim Quota: ಗೃಹ ಸಚಿವ ಅಮಿತ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದ್ದೇಕೆ?

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾದ ಮೀಸಲಾತಿ (Muslim Quota) ರದ್ದು ಕುರಿತ ವಿಚಾರಣೆಯು ನ್ಯಾಯಾಲಯದ ಮುಂದಿರುವಾಗ ಜವಾಬ್ದಾರಿ ಹುದ್ದೆಯಲ್ಲಿರುವಂಥ ಗೃಹ ಸಚಿವರು ಮೀಸಲಾತಿ ರದ್ದಾಗಿದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ (Supreme Court) ತೀವ್ರ ಕೆಂಡ ಕಾರಿದೆ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗ ಕರ್ನಾಟಕ ಮುಸ್ಲಿಮ್ ಒಬಿಸಿ ಮೀಸಲು ಕುರಿತು ಸಾರ್ವಜನಿಕ ಸಭೆಗಳಲ್ಲಿ ಪ್ರಸ್ತಾಪಿಸಿದ್ದಕ್ಕೆ ಸುಪ್ರೀಂ ಕೋರ್ಟ್ ತನ್ನ ಅಸಮ್ಮತಿ ಸೂಚಿಸಿದೆ.

ಜಸ್ಟೀಸ್ ಕೆ ಎಂ ಜೋಸೆಫ್, ಜಸ್ಟೀಸ್ ಬಿ ವಿ ನಾಗರತ್ನ ಮತ್ತು ಜಸ್ಟೀಸ್ ಅಹಸಾನುದ್ದೀನ್ ಅಮನುಲ್ಲಾ ಅವರಿದ್ದ ಪೀಠವು ಮುಸ್ಲಿಮ್ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ, ನಡೆಸಿತು. ಅಲ್ಲದೆ ಮುಂದಿನ ವಿಚಾರಣೆಯನ್ನು ಜುಲೈ 25ಕ್ಕೆ ನಿಗದಿ ಮಾಡಿತು. ಮುಂದಿನ ವಿಚಾರಣೆವರೆಗೂ ಮುಸ್ಲಿಮ್ ಮೀಸಲು ರದ್ದು ಜಾರಿ ಮಾಡುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಚಾರಣೆ ವೇಳೆ, ಅರ್ಜಿದಾರ ಪರ ವಕೀಲ ದುಷ್ಯಂತ್ ದವೆ ಅವರು, ಕರ್ನಾಟಕ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮ್ ಮೀಸಲು ರದ್ದು ಕುರಿತು ಕೇಂದ್ರ ಗೃಹ ಸಚಿವರ ಮಾತನಾಡಿರುವುದನ್ನು ಪೀಠದ ಗಮನಕ್ಕೆತಂದರು.

ಹಿರಿಯ ನ್ಯಾಯವಾದಿ ದವೆ ಹೇಳಿದ್ದೇನು?

ಕರ್ನಾಟಕದ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮ್ ಮೀಸಲಾತಿಯನ್ನು ನಾವು ರದ್ದು ಮಾಡಿದ್ದೇವೆ ಎಂದು ಸ್ವತಃ ಕೇಂದ್ರ ಗೃಹ ಸಚಿವರೇ ಹೇಳಿದ್ದಾರೆ ಎಂದು ಪೀಠದ ಗಮನಕ್ಕೆ ವಕೀಲ ದುಷ್ಯಂತ್ ದವೆ ತಂದರು. ಅಲ್ಲದೇ, ಈಗಾಗಲೇ ಸಾಲಿಸಿಟರ್ ಜನರಲ್ ಅವರು, ಮೀಸಲು ರದ್ದು ಆದೇಶವನ್ನು ಜಾರಿ ಮಾಡುತ್ತಿಲ್ಲ ಎಂದು ಕೋರ್ಟ್‌ಗೆ ಹೇಳಿದ್ದಾಗ್ಯೂ, ಸಾರ್ವಜನಿಕವಾಗಿ ಹೇಳಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವಾಗಲೇ ಅವರು ಸಾರ್ವಜನಿಕವಾಗಿ ಮಾತನಾಡಿದ್ದು, ನ್ಯಾಯಾಂಗ ನಿಂದನೆಯಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದು, ಅದೇ ಸರ್ಕಾರವನ್ನೂ ಅವರು ಪ್ರತಿನಿಧಿಸುತ್ತಾರೆಂದು ದವೆ ಹೇಳಿದರು.

ಆಗ ಆಶ್ಚರ್ಯ ವ್ಯಕ್ತಪಡಿಸಿದ ಜಸ್ಟೀಸ್ ನಾಗರತ್ನ ಅವರು, ನೀವು ಏನು ಹೇಳುತ್ತಿದ್ದೀರಿ, ಅದು ಸತ್ಯವೇ ಆಗಿದ್ದರೆ, ನ್ಯಾಯಾಂಗದ ಮುಂದೆ ವಿಚಾರಣೆ ಬಾಕಿ ಇರುವಾಗ ಯಾರಾದರೂ ಆ ಬಗ್ಗೆ ಮಾತನಾಡಬಹುದೇ ಎಂದು ಪ್ರಶ್ನಿಸಿದರು. ಆಗ ಮತ್ತೆ ಪ್ರತಿಕ್ರಿಯಿಸಿದ ದವೆ, ಅವರು ಬಹಳ ಹೆಮ್ಮೆಯಿಂದ ಮೀಸಲು ರದ್ದು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆಗ ಮಧ್ಯಪ್ರವೇಶಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪೀಠಕ್ಕೆ ಹೇಳಿಕೆಯ ವಿಷಯ ಮತ್ತ ಸಂದರ್ಭದ ಮಾಹಿತಿಯನ್ನು ಒದಗಿಸಿಲ್ಲ ಎಂದು ಆಕ್ಷೇಪಿಸಿದರು.

ನಾನು ಇಲ್ಲಿ ರಾಜಕೀಯ ಮಾಡಲು ಇಷ್ಟಪಡುವುದಿಲ್ಲ. ಅವರು ತಮ್ಮ ಅರ್ಜಿಯನ್ನು ದಾಖಲಿಸಬಹುದು. ಅವರು ಯಾವ ಹೇಳಿಕೆಯ ಬಗ್ಗೆ ಮಾತನಾಡುತ್ತಿದ್ದಾರೆಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದರು. ಆಗ ದವೆ ಅವರು, ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲು ಅಸಾಂವಿಧಾನಕವಾಗಿದೆ. ಅದನ್ನು ನಾವು ತೆಗೆದು ಹಾಕಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆಂದು ಹೇಳಿದರು. ಆಗ ಉತ್ತರಿಸಿದ ಮೆಹ್ತಾ ಅವರು, ಒಂದು ವೇಳೆ ಯಾರಾದರೂ ಧರ್ಮಾಧರಿತ ಮೀಸಲಾತಿ ವಿರುದ್ಧ ವಿರುದ್ಧ ಇದ್ದೇನೆ ಎಂದು ಹೇಳಿದರು. ಅದರಲ್ಲೇನೂ ತಪ್ಪಿಲ್ಲ. ಅದು ನ್ಯಾಯಬದ್ಧ ಹೇಳಿಕೆ ಎಂದರು.

ಇದನ್ನೂ ಓದಿ: Muslim quota issue: ಮುಸ್ಲಿಂ ಮೀಸಲು ರದ್ದು ಪ್ರಕರಣ ರಾಜಕೀಯ ಬಳಕೆ; ಬಿಜೆಪಿ ನಡೆಗೆ ಸುಪ್ರೀಂ ಆಕ್ಷೇಪ

ಪಶ್ಚಿಮ ಬಂಗಾಳ ಸಿಎಂ ಬಂಧನವಾಗಿತ್ತು ಎಂದ ಸುಪ್ರೀಂ ಕೋರ್ಟ್

ಜಸ್ಟೀಸ್ ಕೆ ಎಂ ಜೋಸೆಫ್ ಅವರು, ರೇಷಿನಿಂಗ್ ಆರ್ಡರ್ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆದೇಶವನ್ನು ಬೆಂಬಲಿಸಿ ಪತ್ರಿಕಾಗೋಷ್ಠಿ ಮಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯನ್ನು ನ್ಯಾಯಾಂಗ ನಿಂದನೆಯಡಿಯಲ್ಲಿ ಬಂಧಿಸಲಾಗಿತ್ತು ಎಂದು 1971ರ ಘಟನೆಯನ್ನು ನೆನಪಿಸಿದರು.

Exit mobile version