ವಿಜಯಪುರ: ಇತಿಹಾಸ ಪುರುಷರನ್ನು ಸುಮ್ಮಸುಮ್ಮನೆ ಅಪಮಾನಿಸುವ ದುಷ್ಕೃತ್ಯಗಳು ಮುಂದುವರಿಸಿದೆ. ವಿಜಯಪುರ ಜಿಲ್ಲೆ ಚಡಚಣ ತಾ. ದೇವರನಿಂಬರಗಿ ಗ್ರಾಮದ ಮುಸ್ಲಿಂ ಯುವಕನೊಬ್ಬ ದೇಶವೇ ಗೌರವಿಸುವ ಶಿವಾಜಿ ಮಹಾರಾಜರ (Shivaji Maharaj) ಬಗ್ಗೆ ತುಂಬ ಕೆಟ್ಟದಾಗಿ ನಿಂದಿಸಿ ಪೋಸ್ಟ್ ಹಾಕಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ದೇವರನಿಂಬರಗಿ ಗ್ರಾಮದ ಅಮೀನ್ ಬಾಂದರಕವಟೆ ಎಂಬಾತನೇ ಈ ರೀತಿ ಉದ್ಧಟತನ ಮೆರೆದ ಯುವಕನಾಗಿದ್ದು, ಆತನ ಅಶ್ಲೀಲ ನಿಂದನೆಯ ಪೋಸ್ಟ್ ವೈರಲ್ ಆಗಿದೆ.
ಶಿವಾಜಿ ಮಹಾರಾಜರನ್ನು ಹಿಜಡಾ ಎಂದು ನಿಂದಿಸಿದ್ದಲ್ಲದೆ ಅಶ್ಲೀಲ ಪದಗಳನ್ನು ಬಳಸಿದ್ದಾನೆ. ಸೋಮವಾರ ತಡರಾತ್ರಿ ಹಾಕಿರುವ ಈ ಪೋಸ್ಟ್ ಬೆಳಗಿನ ಹೊತ್ತಿಗೆ ಕಿಡಿಯಾಗಿ ಬೆಂಕಿಯಂತಾಗಿದೆ.
ಪ್ರಚೋದನಕಾರಿಯಾಗಿ ಬರಹಗಳನ್ನು ಬರೆದು ಪೋಸ್ಟ್ ಮಾಡಿದ ಅಮೀನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಮೀನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಚಡಚಣ ಪಟ್ಟಣದ ಶಿವಾಜಿ ವೃತ್ತದ ಬಳಿ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ ೧೦ ಗಂಟೆಗೆ ನಡೆಯುವ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಇನ್ನೊಂದು ಪೋಸ್ಟ್ ಹಾಕಲಾಗಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ತುತ್ತು ಅನ್ನಕ್ಕಿದೆ ಕೋಟಿ ಮೌಲ್ಯ: ಅರಿತು ಬಳಸೋಣ, ಅದನ್ನು ಎಸೆಯದೆ ಹಂಚಿ ತಿನ್ನೋಣ