Site icon Vistara News

Assembly Session: ಸಾಬರಿಗೆ ಕಾಂಗ್ರೆಸ್‌ ಸರ್ಕಾರದಲ್ಲೂ ರಕ್ಷಣೆ ಇಲ್ಲ: ಹುದ್ದೆ ನೀಡುವಲ್ಲಿ ಮೋಸ ಎಂದ ಎಚ್‌.ಡಿ. ರೇವಣ್ಣ

HD Revanna

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಹಿಂದುಗಳಿಗೆ ರಕ್ಷಣೆಯಿಲ್ಲ, ಬರ್ಬರವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಮುಸ್ಲಿಮರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಹೊಳೆನರಸಿಪುರ ಶಾಸಕ ಎಚ್‌.ಡಿ. ರೇವಣ್ಣ ವಿಧಾನಸಭೆಯಲ್ಲಿ (Assembly Session) ಹೇಳಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಕುರಿತು ಮಾತು ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಎಚ್‌.ಡಿ. ರೇವಣ್ಣ, ಈ ಸರ್ಕಾರ‌ ಬಂದ‌ ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ. ಹಾಸನ ಆರ್ಟ್ಸ್ ಕಾಲೇಜಿನಲ್ಲಿ‌ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ.

ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ. ಸಾಬ್ರು ಇಷ್ಟೆಲ್ಲ ನಿಮಗೆ ಓಟ್ ಹಾಕಿದ್ದಾರೆ, ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಅದನ್ನು ಸರಿಪಡಿಸಿ. ಸಚಿವರಿಗೆ ಸೂಚನೆ‌ ನೀಡಬೇಕು ಎಂದು ಎಚ್.ಡಿ. ರೇವಣ್ಣ ಆಗ್ರಹಿಸಿದರು.

Exit mobile version