Site icon Vistara News

Muslims OBC Quota: ಎಲ್ಲ ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ಸಿದ್ದರಾಮಯ್ಯ ಸರ್ಕಾರ; ರಾಷ್ಟ್ರೀಯ ಆಯೋಗ ಕೆಂಡ!

Muslims OBC Quota

Muslims included in list of OBCs for reservation in employment, educational institutions In Karnataka

ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲಿಯೇ ಕರ್ನಾಟಕ ಸರ್ಕಾರವು (Karnataka Government) ಮಹತ್ವದ ತೀರ್ಮಾನವೊಂದು ತೆಗೆದುಕೊಂಡಿದೆ. ಹೌದು, ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರವು ಮುಸ್ಲಿಮರನ್ನು ಇತರೆ ಹಿಂದುಳಿದ ವರ್ಗಗಳ (Muslims OBC Quota) ಕೆಟಗರಿಗೆ ಸೇರಿದೆ. ಆದರೆ, ಇದಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು (NCBC) ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕ ಸರ್ಕಾರವು ಮುಸ್ಲಿಮರಿಗೆ ಮೀಸಲಾತಿ ನೀಡುವ ದಿಸೆಯಲ್ಲಿ ಆ ಧರ್ಮದ ಎಲ್ಲರನ್ನೂ ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯೇ ಮಾಹಿತಿ ನೀಡಿದೆ. “ಮೀಸಲಾತಿ ನೀಡಲು ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿ ಕೆಟಗರಿಗೆ ಸೇರಿಸಿದೆ. ಇದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಒಬಿಸಿ ಮೀಸಲಾತಿ ನೀಡಬೇಕೇ ಹೊರತು, ಇಡೀ ಧರ್ಮವನ್ನೇ ಒಬಿಸಿಗೆ ಸೇರಿಸಿರುವುದು ಸರಿಯಲ್ಲ” ಎಂದು ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯು ದಾಖಲೆಗಳನ್ನೂ ನೀಡಿದೆ. ಮಾಹಿತಿ ಪ್ರಕಾರ, “ಕರ್ನಾಟಕಲ್ಲಿ ಮುಸ್ಲಿಮರ ಸಂಖ್ಯೆ ಶೇ.12.92ರಷ್ಟಿದೆ. ಕೆಟಗರಿ II-B ಅನ್ವಯ ಕರ್ನಾಟಕದಲ್ಲಿರುವ ಎಲ್ಲ ಮುಸ್ಲಿಮರು ಒಬಿಸಿ ಕೆಟಗರಿ ವ್ಯಾಪ್ತಿಗೆ ಸೇರುತ್ತಾರೆ. ಕೆಟಗರಿ 1ರಲ್ಲಿ 17 ಮುಸ್ಲಿಂ ಸಮುದಾಯಗಳು, 2ಎ ಕೆಟಗರಿಯಲ್ಲಿ 19 ಮುಸ್ಲಿಂ ಸಮುದಾಯಗಳು ಬರುತ್ತವೆ. ಇದು ಸಾಮಾಜಿಕ ನ್ಯಾಯ ತತ್ವದ ವಿರುದ್ಧದ ತೀರ್ಮಾನವಾಗಿದೆ” ಎಂಬುದಾಗಿ ಎನ್‌ಸಿಬಿಸಿ ತಿಳಿಸಿದೆ.

“ಹಿಂದುಗಳು, ಮುಸ್ಲಿಮರು ಸೇರಿ ಎಲ್ಲ ಧರ್ಮಗಳಲ್ಲಿಯೇ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರಿಗೆ ಮಾತ್ರ ಒಬಿಸಿ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಒಂದಿಡೀ ಧರ್ಮಕ್ಕೇ ಒಬಿಸಿ ಮೀಸಲಾತಿ ನೀಡುವುದು ಆ ಮೀಸಲಾತಿಯ ತತ್ವಕ್ಕೆ ವಿರುದ್ಧವಾಗಿದೆ. ಆದರೆ, ಎಲ್ಲ ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರ್ಪಡೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಬಿಸಿ ಕೆಟಗರಿ ವ್ಯಾಪ್ತಿಯ ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗೆಯೇ, ಮೀಸಲಾತಿ ನೀಡಿರುವ ಕುರಿತು ಯಾವುದೇ ಮಾಹಿತಿಯನ್ನೂ ರಾಜ್ಯ ಸರ್ಕಾರ ಒದಗಿಸಿಲ್ಲ” ಎಂಬುದಾಗಿ ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೆಂಗಾಲಿ ಮುಸ್ಲಿಮರು ಬಹುಪತ್ನಿತ್ವ ತ್ಯಜಿಸಬೇಕು; ಹಿಮಂತ ಬಿಸ್ವಾ ಶರ್ಮಾ ಕಂಡಿಷನ್ಸ್‌ ಹೀಗಿವೆ

Exit mobile version