ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara 2022) ಅದ್ಧೂರಿತನಕ್ಕೆ ಸಾಕ್ಷಿಯಾಗಲಿದ್ದು, ಯುವ ದಸರಾ ಉದ್ಘಾಟನೆಗೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ.
ಸೆ. 27ರಿಂದ ಅ.3ರವರೆಗೆ ನಡೆಯಲಿರುವ ಯುವ ದಸರಾ ಸಂಬಂಧ ವೇಳಾಪಟ್ಟಿಯನ್ನು ಹೊರಡಿಸಿದ್ದು, ಕಲಾವಿದರ ಪಟ್ಟಿಯನ್ನು ವಿಶೇಷಾಧಿಕಾರಿ ಆರ್.ಚೇತನ್ ಬಿಡುಗಡೆ ಮಾಡಿದ್ದಾರೆ. ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಭಾಗಿಯಾದರೆ, ಬಹುಭಾಷಾ ಗಾಯಕ ವಿಜಯ ಪ್ರಕಾಶ್, ಬಾಲಿವುಡ್ ಗಾಯಕರಾದ ಅಮಿತ್ ತ್ರಿವೇದಿ, ಸುನಿಧಿ ಚೌಹಾನ್, ಮಂಗ್ಲಿ ಗಾಯಕವು ಆಕರ್ಷಣೆಯಾಗಿರಲಿದೆ.
7ದಿನಗಳ ಯುವ ದಸರಾದಲ್ಲಿ ಏನೆಲ್ಲ ಇರಲಿದೆ?
೧. ಕಿಚ್ಚ ಸುದೀಪ್ ಯುವದಸರಾ ಉದ್ಘಾಟನೆ ಮಾಡಲಿದ್ದು, ಶ್ರೀಧರ್ ಜೈನ್ ನೃತ್ಯ ಹಾಗೂ ರಘು ದೀಕ್ಷಿತ್, ಮಂಗ್ಲಿ ಗಾಯನ ಇರಲಿದೆ.
೨. ಅಪ್ಪು ನಮನ- ಗುರುಕಿರಣ್, ವಿಜಯ ಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನ
೩. ಲೇಸರ್ ಶೋ, ಸಿಗ್ನೇಚರ್ ಗ್ರೂಪ್ ಡ್ಯಾನ್ಸ್
೪. ಸ್ಯಾಂಡಲ್‌ವುಡ್ ನೈಟ್ಸ್: ಕನ್ನಡ ಚಲನಚಿತ್ರ ನಟ- ನಟಿಯರು ಭಾಗಿ
೫. ಶಮಿತಾ ಮಲ್ನಾಡ್, ನೃತ್ಯ ರೂಪಕ
೬. ಪವನ್ ಡ್ಯಾನ್ಸರ್, ಹರ್ಷಿಕಾ ಪೂಣಚ್ಚ ಮತ್ತು ವಿಜಯ ರಾಘವೇಂದ್ರ ಯುವ ದಸರಾದಲ್ಲಿ ಭಾಗಿಯಾಗಲಿದ್ದು, ಅಮಿತ್ ತ್ರಿವೇದಿ ಗಾಯನ ಇರಲಿದೆ.
೭.ಮಹಿಳಾ ಬ್ಯಾಂಡ್, ಫ್ಯಾಶನ್ ಶೋ, ಸುನಿಧಿ ಚೌಹಾನ್ ಗಾಯನವೂ ಇರಲಿದೆ.
ಗೊಂಬೆ ಮನೆಯಲ್ಲಿ ಗೊಂಬೆ ಖರೀದಿ
ಕೋವಿಡ್ ಛಾಯೆ ಮಾಯವಾದ ಹಿನ್ನೆಲೆ ಮನೆಮನೆಯಲ್ಲಿ ಗೊಂಬೆ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಜರ್‌ಬಾದ್‌ನ ಗೊಂಬೆ ಮನೆಯಲ್ಲಿ ಬೊಂಬೆಗಳ ಖರೀದಿ ಬಲು ಜೋರಾಗಿದೆ. ಈ ಬಾರಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿ 12 ರಾಜ್ಯಗಳಿಂದ ಗೊಂಬೆಗಳು ಬಂದಿದ್ದು, ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಇದನ್ನೂ ಓದಿ | Mysore Dasara 2022 | ಮೈಸೂರು ಫಲಪುಷ್ಪ ಪ್ರದರ್ಶನ; ಗುಲಾಬಿ ರಂಗಲ್ಲಿ ಕಂಗೊಳಿಸಲಿದೆ ರಾಷ್ಟ್ರಪತಿ ಭವನ