Site icon Vistara News

Mysore dasara : ಸಿಡಿಮದ್ದು ತಾಲೀಮಿನಲ್ಲಿ ಅವಘಡ; ಸಿಬ್ಬಂದಿಗೆ ಗಾಯ

Mysore dasara Fireworks drill breaks out at Kushalatoptu Staff injured

ಮೈಸೂರು: ವಿಶ್ವವಿಖ್ಯಾತ ದಸರಾ (Mysore dasara) ಮಹೋತ್ಸವ ಹಿನ್ನೆಲೆಯಲ್ಲಿ ಕುಶಾಲತೋಪು (Kushalatoptu) ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ವೇಳೆ ಅವಘಡ ಸಂಭವಿಸಿದ್ದು, ಸಿಬ್ಬಂದಿಯೊಬ್ಬರಿಗೆ ಗಾಯಗಳಾಗಿವೆ. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಾನುವಾರ ಸಂಜೆ ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ರಿಹರ್ಸಲ್ ವೇಳೆ ಈ ಘಟನೆ ಸಂಭವಿಸಿದೆ. ಅರಮನೆಯಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಸುವ ವೇಳೆ ಸಿಡಿಮದ್ದನ್ನು ಸಿಡಿಸಲಾಗುತ್ತದೆ. ಇದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿತ್ತು.

Mysore dasara Fireworks drill breaks out at Kushalatoptu Staff injured

ಒಬ್ಬೊರಾದ ಮೇಲೆ ಒಬ್ಬರಂತೆ ಪಂಜು ಹಿಡಿದು ಕುಶಾಲತೋಪಿನಿಂದ ಸಿಡಿಮದ್ದುಗಳನ್ನು ಸಿಡಿಸುತ್ತಾ ಬಂದಿದ್ದಾರೆ. ಒಬ್ಬರು ಸಿಡಿಮದ್ದು ಸಿಡಿಸುತ್ತಿದ್ದಂತೆ ಉಳಿದವರು ಅವುಗಳನ್ನು ಅಷ್ಟೇ ವೇಗವಾಗಿ ತೆರವುಗೊಳಿಸಿ ಮತ್ತೆ ಸಿಡಿಮದ್ದನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದರು.

ಈ ವೇಳೆ ಸಿಡಿಮದ್ದು ಸಿಡಿಸಿದ ನಂತರ ಪುನಃ ಅಲ್ಲಿಗೆ ಹೋದ ಸಂದರ್ಭದಲ್ಲಿ ಒಳಗೆ ಉಳಿದಿದ್ದ ಬೆಂಕಿ ಅಂಶದಿಂದ ಮತ್ತೆ ಸಿಡಿದಿದೆ. ಇದರಿಂದ ತೀರಾ ಸಮೀಪಕ್ಕೆ ಹೋಗಿದ್ದ ಸಿಬ್ಬಂದಿಯೊಬ್ಬರ ಮೈಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಅವರ ಬಲಗೈ ಬಹುತೇಕ ಸುಟ್ಟಿದೆ. ಅಲ್ಲದೆ, ಮುಖ – ಮೈಗೆ ಸಹ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿವೆ.

ಅ.24ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ; ಟೈಂ ಟೇಬಲ್‌ ಹೀಗಿದೆ

Exit mobile version