Site icon Vistara News

Mysore Dasara | ನಗರ ಸಶಸ್ತ್ರ ಪಡೆಯಿಂದ ಕುಶಾಲು ತೋಪು ತಾಲೀಮು

mysore kushalatopu 2

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ (Mysore Dasara) ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು, ಗಜಪಡೆಗಳೂ ಜಂಬೂ ಸವಾರಿಗೆ ತಯಾರಿ ನಡೆಸುತ್ತಿವೆ. ಇತ್ತ ನಗರ ಸಶಸ್ತ್ರ ಪಡೆ ಸಿಬ್ಬಂದಿ ಶನಿವಾರ ಕುಶಾಲು ತೋಪು ತಾಲೀಮು ಕೈಗೊಂಡಿದ್ದಾರೆ.

ನಗರ ಸಶಸ್ತ್ರ ಪಡೆ ಸಿಬ್ಬಂದಿ ಅರಮನೆ ಅಂಗಳದಲ್ಲಿ ಮದ್ದು ಗುಂಡುಗಳನ್ನು ಬಳಸದೆ ತಾಲೀಮು ನಡೆಸಿದ್ದು, 6 ಫಿರಂಗಿ ಗಾಡಿಗಳನ್ನು ಬಳಸಿಕೊಂಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಸಿಎಆರ್ ಸಿಬ್ಬಂದಿ ಭಾಗಿಯಾಗಿದ್ದರು.

ಜಂಬೂ ಸವಾರಿಯಂದು ಕುಶಾಲು ತೋಪು ಸಿಡಿಸಲು ತಯಾರಿ ನಡೆಸಲಾಗುತ್ತಿದೆ. ಮುಖ್ಯಮಂತ್ರಿಯವರು ಅಂಬಾರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಮೊಳಗಲಿದ್ದು, ಈ ವೇಳೆ ಐತಿಹಾಸಿಕ ಫಿರಂಗಿ ಗಾಡಿಗಳನ್ನು ಬಳಸಿಕೊಂಡು 21 ಸುತ್ತು ಕುಶಾಲು ತೋಪು ಸಿಡಿಸುವುದು ವಾಡಿಕೆಯಾಗಿದೆ. ಹೀಗಾಗಿ ಆ ಸಮಯದಲ್ಲಿ ಇರಬೇಕಾದ ಚುರುಕುತನ, ಪ್ರಕ್ರಿಯೆ, ಸಮಯಪಾಲನೆ ಸೇರಿದಂತೆ ಇನ್ನಿತರ ವಿಷಯಗಳನ್ನೊಳಗೊಂಡು ಸಶಸ್ತ್ರ ಪಡೆ ಸಿಬ್ಬಂದಿ ತಾಲೀಮು ನಡೆಸಿದ್ದಾರೆ.

ಇದನ್ನೂ ಓದಿ | ಈ ಬಾರಿ ಅದ್ಧೂರಿ ಮೈಸೂರು ದಸರಾ; 50 ಕೋಟಿ ರೂ. ವೆಚ್ಚಕ್ಕೆ ನಿರ್ಧಾರ!

Exit mobile version