Site icon Vistara News

Mysore Election Result 2024: ಮೈಸೂರು-ಕೊಡಗು ಲೋಕಸಭಾ ಚುನಾವಣೆ; ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

Mysore election results 2024

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ (Mysore Election Result 2024) ಬಿಜೆಪಿಯ ಅಭ್ಯರ್ಥಿ ಯದುವೀರ್​ ಒಡೆಯರ್ (Yaduveer Wadiyar) ಅವರು 7,95,503 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ರಾಜ್ಯ ವಕ್ತಾರ ಲಕ್ಷ್ಮಣ್ ವಿರುದ್ಧ 1,39,262 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಇದರಿಂದ ಅಭ್ಯರ್ಥಿ ಬದಲಾದರೂ ಜನರ ಒಲವು ಬಿಜೆಪಿ ಕಡೆಗೇ ಇರುವುದು ಕಂಡುಬಂದಿದೆ. ಇನ್ನು ಇಲ್ಲಿನ ವಿಧಾನಸಭಾ ಕ್ಷೇತ್ರವಾರು ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಬಂದಿವೆ ಎಂಬ ಮಾಹಿತಿ ಇಲ್ಲಿದೆ.

ಕ್ಷೇತ್ರದಲ್ಲಿ ಎರಡು ಬಾರಿಯ ಸಂಸದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ತಪ್ಪಿತ್ತು. ಅವರ ಬದಲಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭ್ಯರ್ಥಿಯಾಗಿದ್ದರು. ಆದರೆ, ಅಭ್ಯರ್ಥಿ ಬದಲಾದರೂ ಕ್ಷೇತ್ರದಲ್ಲಿ ಬಿಜೆಪಿಗೇ ಅತಿ ಹೆಚ್ಚಿನ ಜನಬೆಂಬಲ ವ್ಯಕ್ತವಾಗಿದೆ.

ಲೋಕಸಭಾ ಕ್ಷೇತ್ರ ಚುನಾವಣೆ ಫಲಿತಾಂಶದ ವಿವರ

1) ಮಡಿಕೇರಿ ವಿಧಾನ ಸಭಾ ಕ್ಷೇತ್ರ
ಬಿಜೆಪಿ : 92949
ಕಾಂಗ್ರೆಸ್ : 56490
ಬಿಜೆಪಿ ಲೀಡ್: 36459

2) ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ
ಬಿಜೆಪಿ : 87310
ಕಾಂಗ್ರೆಸ್ : 59932
ಬಿಜೆಪಿ ಲಿಡ್: 27378

3) ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ
ಬಿಜೆಪಿ : 71237
ಕಾಂಗ್ರೆಸ್ : 82981
ಕಾಂಗ್ರೆಸ್ ಲೀಡ್: 11744

04) ಹುಣಸೂರು ವಿಧಾನ ಸಭಾ ಕ್ಷೇತ್ರ
ಬಿಜೆಪಿ : 84436
ಕಾಂಗ್ರೆಸ್ : 80340
ಕಾಂಗ್ರೆಸ್ ಲೀಡ್: 4096

5) ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ
ಬಿಜೆಪಿ : 103112
ಕಾಂಗ್ರೆಸ್ :- 64968
ಬಿಜೆಪಿ ಲೀಡ್ 38144

6) ಕೃಷ್ಣರಾಜ ವಿಧಾನಸಭಾ ಕ್ಷೇತ್ರ
ಬಿಜೆಪಿ :-92449
ಕಾಂಗ್ರೆಸ್ :-45703
ಬಿಜೆಪಿ ಲೀಡ್ 46746

7) ಚಾಮರಾಜ ವಿಧಾನ ಸಭಾ ಕ್ಷೇತ್ರ
ಬಿಜೆಪಿ : 101166
ಕಾಂಗ್ರೆಸ್ : 47434
ಬಿಜೆಪಿ ಲೀಡ್: 53732

8) ನರಸಿಂಹರಾಜ ವಿಧಾನ ಸಭಾ ಕ್ಷೇತ್ರ
ಬಿಜೆಪಿ :- 40784
ಕಾಂಗ್ರೆಸ್ :-121739
ಕಾಂಗ್ರೆಸ್ ಲೀಡ್ 80955

ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸುಮಾರು 1,39,262 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್​​ನ ಸಿ.ಎಚ್.ವಿಜಯಶಂಕರ್ ಅವರನ್ನು 1,38,647 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.52.27ರಷ್ಟು ಮತಗಳನ್ನು ಪಡೆದಿತ್ತು.

ಇದನ್ನೂ ಓದಿ: Mandya Election Result 2024 : ಮಂಡ್ಯದಲ್ಲಿ ಕುಮಾರ ಸ್ವಾಮಿಗೆ ಭರ್ಜರಿ ಗೆಲುವು

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್​ನ ಅಡಗೂರು ಎಚ್.ವಿಶ್ವನಾಥ್ ಅವರನ್ನು 31,608 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.43.46ರಷ್ಟು ಮತಗಳನ್ನು ಗಳಿಸಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅಡಗೂರು ಎಚ್.ವಿಶ್ವನಾಥ್ ಅವರು ಬಿಜೆಪಿಯ ಸಿ.ಎಚ್.ವಿಜಯಶಂಕರ್ ಅವರನ್ನು 7,691 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 36.42% ಮತಗಳನ್ನು ಪಡೆದಿತ್ತು.

Exit mobile version