ಮೈಸೂರು: ಸದ್ಯ ಮುಜರಾಯಿ ಆಯುಕ್ತೆಯಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅತಿಥಿಗೃಹದಿಂದ ಹೊರಡುವಾಗ ಅಲ್ಲಿದ್ದ 23 ಬಗೆಯ 48 ವಸ್ತುಗಳನ್ನು ಸಿಂಧೂರಿ ಅವರ ಸಿಬ್ಬಂದಿ ಹೊತ್ತೊಯ್ದಿದ್ದಾರೆ, 8 ವಸ್ತುಗಳು ಹಾನಿಯಾಗಿವೆ ಎಂಬ ದೂರು ಕೇಳಿಬಂದಿದೆ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ 2020ರ ಅಕ್ಟೋಬರ್ 2ರಿಂದ ನವೆಂಬರ್ 14ರವರೆಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅತಿಥಿ ಗೃಹವನ್ನು ಖಾಲಿ ಮಾಡುವ ಸಂದರ್ಭದಲ್ಲಿ ಅವರ ಸಿಬ್ಬಂದಿಯು, ಸಿಂಧೂರಿ ಅವರಿಗೆ ಸಂಬಂಧಿಸಿದ ವಸ್ತುಗಳ ಜತೆಗೆ ಅತಿಥಿ ಗೃಹದ ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ವಸತಿ ಗೃಹ ತಿಳಿಸಿದೆ.
ಹುಣಸೂರು ರಸ್ತೆಯಲ್ಲಿ ಜಿಲ್ಲಾಧಿಕಾರಿಗಳ ನಿವಾಸ ಇದೆ. ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ಮೈಸೂರಿಗೆ ಬಂದಾಗ ಹಿಂದಿನ ಜಿಲ್ಲಾಧಿಕಾರಿ ಶರತ್ ಅವರು ಆ ಮನೆಯಲ್ಲಿ ವಾಸವಿದ್ದರು. ತಾತ್ಕಾಲಿಕವಾಗಿ ವಾಸಕ್ಕೆ ಅವಕಾಶ ಪಡೆದ ರೋಹಿಣಿ ಸಿಂಧೂರಿ, ಅತಿಥಿ ಗೃಹ ಖಾಲಿ ಮಾಡುವಾಗ ಅಲ್ಲಿದ್ದ ವಸ್ತುಗಳನ್ನೆಲ್ಲ ಹೊತ್ತೊಯ್ದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ತೆಗೆದುಕೊಂಡು ಹೋದ ವಸ್ತುಗಳು
- ಟೆಲಿಫೋನ್ ಟೇಬಲ್: 2
- ಕೋಟ್ ಹ್ಯಾಂಗರ್: 2
- ಬೆತ್ತದ ಚೇರ್: 2
- ಬ್ಲಾಂಕೆಟ್: 2
- ಟೆಲಿಫೋನ್ ಸ್ಟೂಲ್: 2
- ಟೀಪಾಯ್: 2
- ಮೈಕ್ರೋ ವೆವನ್: 1
- ರಿಸೆಪ್ಷನ್ ಟೆಲಿಫೋನ್ ಸ್ಟೂಲ್: 1
- ಮಂಚ: 1
- ಹಾಸಿಗೆ: 1
- ಪಿಲ್ಲೋ: 4
- ಕಂಪ್ಯೂಟರ್ ಮೌಸ್: 1
- ಬಾತ್ ರೂಂ ಸ್ಟೂಲ್: 2
- ಯೋಗ ಮ್ಯಾಟ್: 2
- ಪ್ಲೇಟ್: 3(ಡ್ಯಾಮೇಜ್)
- ವಾಟರ್ ಗ್ಲಾಸ್: 6(ಡ್ಯಾಮೇಜ್)
- ಸ್ಟೀಲ್ ವಾಟರ್ ಜಗ್: 2
- ಬಿಗ್ ಟವಲ್: 5
- ಹ್ಯಾಂಡ್ ಟವಲ್: 8
- ಟೀ ಕಪ್: 5 (ಡ್ಯಾಮೇಜ್)
- ಪಿಲ್ಲೋ ಕವರ್: 4
- ಬ್ಲಾಂಕೆಟ್ ಕವರ್ಸ್: 2
- ಟ್ರೇ: 2
ಈ ವಸ್ತುಗಳನ್ನು ರೋಹಿಣಿ ಸಿಂಧೂರಿ ತಮ್ಮ ನಿವಾಸಕ್ಕೆ ಕೊಂಡೊಯ್ದಿರುವ ಸಾಧ್ಯತೆ ಕಡಿಮೆ. ಎಟಿಎ ಅತಿಥಿ ಗೃಹದಿಂದ ಜಿಲ್ಲಾಧಿಕಾರಿ ಕಚೇರಿಗೆ ವಸ್ತುಗಳು ಶಿಫ್ಟ್ ಆಗಿರಬಹುದು. ಸಿಬ್ಬಂದಿ ಮಾಡಿದ ತಪ್ಪಿಗೆ ರೋಹಿಣಿ ಸಿಂಧೂರಿಗೆ ಬರೋಬ್ಬರಿ ಮೂರು ಬಾರಿ ಪತ್ರ ಬರೆಯಲಾಗಿದೆ. ಆದರೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗಲೇ ಎರಡು ಪತ್ರ ಬರೆದಿದ್ದ ಎಟಿಐ, ಇದೀಗ ಮುಜರಾಯಿ ಆಯುಕ್ತರಾದ ನಂತರ ಮತ್ತೊಂದು ಪತ್ರ ಬರೆದಿದೆ. ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ಮಾಡಿರುವುದರ ಕುರಿತು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಜಮೀನು ಕಬಳಿಸಲು ಪತಿಗೆ ಸಹಾಯ: IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್ ಗಾಯಕ ಗಂಭೀರ ಆರೋಪ