Site icon Vistara News

BJP-JDS Padayatra: ಬಂಡೆ ರೀತಿ ನಿಲ್ತೀನಿ ಎಂದು ನನ್ನ ಮೇಲೂ ಬಂಡೆ ಹಾಕಿದ್ರು: ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

ಮೈಸೂರು: ಸಿಎಂ ಸಿದ್ದರಾಮಯ್ಯ ಜತೆ ಬಂಡೆ ರೀತಿ ನಿಲ್ಲುತ್ತೇನೆ ಅಂತ ಡಿಕೆಶಿ ಹೇಳಿದ್ದಾರೆ. ಆದರೆ, 2018ರಲ್ಲಿ ನನಗೂ ಇದೇ ರೀತಿ ಹೇಲಿ ನನ್ನ ಮೇಲೆ ಬಂಡೆ ಹಾಕಿದ್ದರು. ಈಗ ಸಿದ್ದರಾಮಯ್ಯನ ಕತೆ ಸಹ ಮುಗಿಯಿತು. ನನ್ನ ವಿರುದ್ಧ 50 ಡಿನೋಟಿಫಿಕೇಷನ್ ಪ್ರಕರಣ ಇವೆ, ತನಿಖೆ ಮಾಡುಸುವೆ ಎಂದಿದ್ದಾರೆ. ಮಿಸ್ಟರ್ ಡಿ.ಕೆ. ಶಿವಕುಮಾರ್, ಯಾವ ತನಿಖೆ ಮಾಡಿಸುತ್ತಿಯಾ ಮಾಡ್ಸಪ್ಪ ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (BJP-JDS Padayatra) ಸವಾಲು ಹಾಕಿದರು.

ನಗರದಲ್ಲಿ ನಡೆದ ಬೆಂಗಳೂರು-ಮೈಸೂರು ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿದ್ದೇನೆಂದು ಹೇಳಿದ್ದಾರೆ. ನಾನು 19 ಸ್ಥಾನ ಅಷ್ಟೇ ಗೆಲ್ಲೋದಕ್ಕೆ ಸಾಧ್ಯವಾಗಿದ್ದು ಅಂತ ಹೇಳಿದ್ದಾರೆ. ಮತ್ತೆ ಲೋಕಸಭೆಯಲ್ಲಿ ಯಾಕೆ ಕಡಿಮೆ ಗೆದ್ರಿ? ರಾಜಕೀಯದಲ್ಲಿ ಏಳುಬೀಳು ಇದ್ದಿದ್ದೆ ಎಂದು ಕಿಡಿಕಾರಿದರು.

ಸಿಎಂ ವಿರುದ್ಧ ಮುಗಿಬಿದ್ದ ಅವರು, ಕಪ್ಪು ಚುಕ್ಕೆ ಇಲ್ಲ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪು ಚುಕ್ಕೆ ಮಾಡಿಕೊಂಡಿದ್ದಾರೆ. ನಾನು ಸಾಲ ಮಾಡಿ ಚುನಾವಣೆ ಮಾಡಿದ್ದೇನೆ. ಮನೆ ಮಾರಿಕೊಂಡು ಚುನಾವಣೆ ಮಾಡಿದ್ದೇನೆಂದು ಹೇಳಿದ್ದಾರೆ. ನಮಗೆ ನಿಮ್ಮ ಪತ್ನಿ ಮೇಲೆ ಗೌರವವಿದೆ, ನೀವು ಈ ರಾಜ್ಯದ ಮುಖ್ಯಮಂತ್ರಿ. ನೀವು ಹಿಂದುಳಿದ ವರ್ಗಗಳಿಗೆ ಅಷ್ಟೇ ಅಲ್ಲ, ಆರೂವರೆ ಕೋಟಿ ಕನ್ನಡಿಗರಿಗೆ ಸಿಎಂ. ದಾನ ಮಾಡುವುದು ತಪ್ಪಲ್ಲ, ಕಾನೂನಿನ ಪ್ರಕಾರ ದಾನ ಮಾಡಿದ್ದರೆ ನಮ್ಮ ಆಕ್ಷೇಪ ಇಲ್ಲ. ಆ ಭೂಮಿ, ಸರ್ಕಾರದ ಭೂಮಿ. ನಿಮ್ಮ ಮೂಗಿನ ನೇರದಲ್ಲಿ ಎಲ್ಲ ನಡೆದಿವೆ. ಈಗ ನಿವೇಶನ ವಾಪಸು ಕೊಡ್ತೀನಿ ಅಂತ ಹೇಳಿದ್ದೀರಿ. ತಪ್ಪು ಮಾಡಿ ವಾಪಸು ಕೊಟ್ರೆ ಕಾನೂನು ಬಾಹಿರ ಚಟುವಟಿಕೆ ಮುಚ್ಚಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | BJP-JDS Padayatra: ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲಲ್ಲ: ಸಿಎಂ, ಡಿಸಿಎಂ ವಿರುದ್ಧ ಬಿಎಸ್‌ವೈ ಗುಡುಗು

ಯತೀಂದ್ರನಿಗೆ ಕಮಿಟಿಗೆ ಸದಸ್ಯ ಮಾಡಿದರು. ಜನಸಂಪರ್ಕ ಸಭೆಯಲ್ಲಿ ಅಪ್ಪಯ್ಯ ಅಪ್ಪಯ್ಯ ನಾನೇ ಕೊಟ್ಟಿದ್ದು ಐದೇ ಅಂತ ಯತೀಂದ್ರ ಹೇಳಿದರು. ಆ ಮೇಲೆ ಎರಡು ಗಂಟೆ ಮಾಧ್ಯಮಗಳ ಮುಂದೆ ಬರಲಿಲ್ಲ. ಆ ಮೇಲೆ ಅದು ಸಿಎಸ್ಆರ್ ಫಂಡ್ ಅಂತ ನಮ್ಮ ಶಿವಮೊಗ್ಗ ಸ್ನೇಹಿತರು ಹೇಳಿದರು. ನನ್ನ ಪುತ್ರನನ್ನ ರಾಜಕೀಯವಾಗಿ ಬೆಳೆಸಲು ರೇವಣ್ಣ ಪುತ್ರನನ್ನು ಜೈಲಿಗೆ ಕಳುಹಿಸಿದರು ಅಂತ ಹೇಳಿದ್ದೀರಿ ಎಂದು ಕಿಡಿಕಾರಿದರು.

ಈ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೇಳುತ್ತೇನೆ, ನನ್ನ ಕುಟುಂಬದ ವಿರುದ್ಧ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದ ಅವರು, ಸಿದ್ದರಾಮಯ್ಯ ಅವರೇ ಯಡಿಯೂರಪ್ಪ ಅವರ ಫೋಟೊ ಹಾಕಿಕೊಂಡು ನೀವು ಪೂಜೆ ಮಾಡಬೇಕು. ಬಿಜೆಪಿ, ಕೆಜೆಪಿ, ಜೆಡಿಎಸ್ ನಡುವೆ ವೋಟ್ ಡಿವೈಡ್ ಆಗಿದ್ದರಿಂದ ನೀವು ಸಿಎಂ ಆಗಲು ಸಾಧ್ಯವಾಯಿತು.
1983ರಲ್ಲಿ ನಾನು ಡೆಪಾಸಿಟ್ ಕಟ್ಟೊಕೆ ದುಡ್ಡಿಲ್ಲ ಎಂದಿದ್ದಾರೆ, ಆದರೆ ಆ ದುಡ್ಡು ಕಟ್ಟಿದ್ದು ಜಿ.ಟಿ. ದೇವೇಗೌಡ. ಹೋಗಲಿ ಜನತಾ ಪರಿವಾರದಿಂದ ಒಬ್ಬರ ಹೆಸರು ಆದರೂ ಹೇಳಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

20 ತಿಂಗಳ ಬಳಿಕ ನಾನು ಸಿಎಂ ಸ್ಥಾನ ಬಿಟ್ಟು ಕೊಡಬೇಕು ಎಂದು ನಿರ್ಧಾರ ಮಾಡಿದ್ದೆ, ಆದರೆ ಕಾರಣಾಂತರಗಳಿಂದ ಆಗಲಿಲ್ಲ. ಇದನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಂತುಕೊಂಡು ಹೇಳ್ತಿದ್ದೇನೆ. ಯಡಿಯೂರಪ್ಪ ಅವರು ಜತೆ ಹೋದಾಗ ನನಗೆ ಸಮಸ್ಯೆ ಆಗಲಿಲ್ಲ, ಆದರೆ ನೀವು ಹೆಜ್ಜೆ ಹೆಜ್ಜೆಗೂ ಸಮಸ್ಯೆ ಕೊಟ್ಟಿದ್ದೀರಿ. ಮೋದಿ ಕರೆದು ನೀವು ಸಿಎಂ ಆಗಿ ಎಂದಿದ್ದರು. ಆದರೆ, ನಾನು ಸರ್ಕಾರ ತೆಗೆಯಲ್ಲ ನೀವೇ ತೆಗೆಯಬೇಕು ಅಂತ ಹೇಳಿದ್ದೆ ಎಂದು ತಿಳಿಸಿದರು.

ನಾನು ಏನು ತಪ್ಪು ಮಾಡಿದ್ದೇನೆ ಅಂತ ರಾಜೀನಾಮೆ ಕೊಡಲಿ? ನನ್ನ ಮತ್ತು ಯಡಿಯೂರಪ್ಪ ವಿರುದ್ಧ ನಡೆದ ರಾಜಕೀಯ ಸಂಘರ್ಷದಲ್ಲಿ ಕೇಸ್ ಆಗಿವೆ. ನಾನು ಸಹಿ ಹಾಕಿಲ್ಲ, ಯಾವುದೋ ಅಧಿಕಾರಿ ಹಾಕಿದ್ದು. ಸಿದ್ದರಾಮಯ್ಯ ನಿಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಹೇಳಿದ್ದೀರಿ, ರೀಡೂ ಕೇಸ್ ತೆಗೆಯಿರಿ, ಕೆಂಪಣ್ಣ ರಿಪೋರ್ಟ್ ಟೇಬಲ್ ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ | CM Siddaramaiah: ನಮಗೆ ಮನೇಲಿ ತಂಗಳು ಇರ್ತಿತ್ತು, ಇಡ್ಲಿ-ದೋಸೆ ಇರ್ತಿಲಿಲ್ಲ ಎಂದ ಸಿಎಂ

ಈ ಸರ್ಕಾರ ತೆಗೆಯಲು ಎರಡು ಪಕ್ಷಗಳ ಕಾರ್ಯಕರ್ತರ ಸಹಕಾರ ಅಗತ್ಯ. ನಾವು ಒಗ್ಗಟ್ಟಾಗಿ ಹೋಗಬೇಕು. ಈ ಸರ್ಕಾರ ತೆಗೆಯುವವರೆಗೂ ನನ್ನ ಹೋರಾಟ ಮುಂದುವರೆಯುತ್ತೆ ಎಂದು ಹೇಳಿದರು.

Exit mobile version