ಮೈಸೂರು: ಗೂಗಲ್ ಮೀಟ್, ಫೇಸ್ ಬುಕ್‌ನಲ್ಲಿ ಯುವತಿಯರಿಗೆ ಗಾಳ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಹಣ ಕೀಳುತ್ತಿದ್ದ ದುಷ್ಕರ್ಮಿಯೊಬ್ಬನನ್ನು ಮೈಸೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಗುರುಸಿದ್ದಪ್ಪ ಪುತ್ರ ಬಿ.ಜಿ. ಶಿವಪ್ರಕಾಶ್ ಬಂಧಿತ ಆರೋಪಿ. ಈತ ವಿಕೃತ ಕಾಮುಕನಾಗಿದ್ದು, ಗೂಗಲ್ ಮೀಟ್, ಫೇಸ್ ಬುಕ್ ನಲ್ಲಿ ಯುವತಿಯರಿಗೆ ಗಾಳ ಹಾಕುತ್ತಿದ್ದ. ಯುವತಿಯರನ್ನು ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದ. ಬಲೆಗೆ ಬೀಳುವ ಹೆಣ್ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು, ವಿಡಿಯೊ ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮೂಲಕ ಹಣ ಕೀಳುತ್ತಿದ್ದ ಎಂದು ಆರೋಪಿಸಲಾಗಿದೆ.
ತನ್ನ ಜತೆ ಶಿವಪ್ರಕಾಶ್ ಸ್ನೇಹ, ಪ್ರೀತಿ, ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡು ₹20 ಲಕ್ಷದವರೆಗೆ ಹಣ ಪಡೆದಿದ್ದ ಎಂದು ಮೈಸೂರು ಮೂಲದ ಯುವತಿ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಶಿವಪ್ರಕಾಶ್‌ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಮುಸ್ಲಿಂ ಯುವತಿಯ ಜತೆ ಮದುವೆ: ಹಿಂದೂ ಯುವಕನ ಕೊಲೆ