Site icon Vistara News

Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ

Myosre Dasara

Countdown For Mysore Dasara: Puja Rituals Started In Cultural City

ಮೈಸೂರು: ಐತಿಹಾಸಿಕ 416ನೇ ಮೈಸೂರು ದಸರಾ (Mysore dasara) ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ಅಕ್ಟೋಬರ್‌ 15) ನಾಡಹಬ್ಬಕ್ಕೆ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಚಾಮುಂಡಿ ಬೆಟ್ಟ, ಅರಮನೆ ಅಂಗಳದಲ್ಲಿ ವೇದಿಕೆ ಬೃಹತ್ ವೇದಿಕೆಗಳು ನಿರ್ಮಾಣವಾಗಿವೆ.

ವಿಜಯನಗರ ಸಾಮ್ರಾಜ್ಯ (Vijayanagara Empire), ಮೈಸೂರು ಸಾಮ್ರಾಜ್ಯದ (Mysore Empire) ಪರಂಪರೆ ಹೊಂದಿರುವ ದಸರಾ ಮಹೋತ್ಸವ ಈಗ, ನಾಡಹಬ್ಬವಾಗಿ ಆಚರಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) 3 ದಿನಗಳ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ 10.15ಕ್ಕೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ (Devi Chamundeshwari) ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸಲಾಗುತ್ತಿದ್ದು, ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: Mysore dasara : ದಸರಾ ಎಂಬ ನಾಡಹಬ್ಬದಲಿ ಚಿನ್ನದ ಅಂಬಾರಿ, ಜಂಬೂ ಸವಾರಿ; ನೋಡ ಬನ್ನಿ ಮೈಸೂರು ನಗರಿ!

ಆನೆಗಳಿಗೆ ಇಂದು ಅಮಾವಾಸ್ಯೆ ರೆಸ್ಟ್

ಆನೆಗಳಿಗೆ ಇಂದು ಅಮಾವಾಸ್ಯೆ ರೆಸ್ಟ್ ಕೊಡಲಾಗಿತ್ತು. ಇಂದು‌ ಮಹಾಲಯ ಅಮಾವಾಸ್ಯೆ‌ಯಾಗಿದ್ದರಿಂದ ಆನೆಗಳಿಗೆ ಯಾವುದೇ ದಿನಚರಿಯನ್ನು ನೀಡಲಿಲ್ಲ. ಅಮಾವಾಸ್ಯೆಯ ದಿನಗಳಂದು ಆನೆಗಳಿಗೆ ತಾಲೀಮು ನಡೆಸದೇ ವಿಶ್ರಾಂತಿ ನೀಡುವುದು ವಾಡಿಕೆ. ಈ ಹಿಂದಿನಿಂದ ನಡೆದುಕೊಂಡ ಬಂದ ಪದ್ಧತಿಯಂತೆ ಅವುಗಳಿಗೆ ವಿಶ್ರಾಂತಿಯನ್ನು ನೀಡಲಾಯಿತು. ಇದೇ ಕಾರಣದಿಂದ ದಸರಾ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ರದ್ದುಪಡಿಸಲಾಗಿತ್ತು.

ಕುಟುಂಬ ಸಮೇತ ಮೈಸೂರಿಗೆ ಬಂದಿರುವ ಹಂಸಲೇಖ

ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ದಸರಾ ಉದ್ಘಾಟಕ ಹಂಸಲೇಖ ಭೇಟಿ ನೀಡಿದರು. ಪತ್ನಿ, ಮಕ್ಕಳು, ಅಳಿಯಂದಿರ ಜತೆ ಬಂದ ಅವರನ್ನು ಜೆಎಸ್‌ಎಸ್ ಶಾಲಾ ಮಕ್ಕಳು ಸ್ವಾಗತಿಸಿದರು. ಪೂರ್ಣಕುಂಭ, ವಾದ್ಯಗೋಷ್ಠಿ ಮೂಲಕ ಬರ ಮಾಡಿಕೊಳ್ಳಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಹಂಸಲೇಖ ಅವರು, ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು.

ನಡೆಯುತ್ತಿದೆ ಅಂತಿಮ ಹಂತದ ಸಿದ್ಧತೆ

ಭಾನುವಾರದಿಂದ ಆರಂಭವಾಗಲಿರುವ ಕಾರ್ಯಕ್ರಮಗಳಿಗೆ ಮೈಸೂರಿನಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಸಾಂಸ್ಕೃತಿಕ ಚಟುವಟಿಕೆಗೂ ಚಾಲನೆ ಸಿಗಲಿದೆ. ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಮೀಪದಲ್ಲೇ ರನ್‌ಪ್ರೂಫ್ ವೇದಿಕೆ ಕೂಡ ಹಾಕಲಾಗಿದೆ.

ಪ್ರತಿ ವರ್ಷ ಪೊಲೀಸ್ ಬ್ಯಾಂಡ್ ದಸರಾ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದು‌. ಪಾಶ್ಚಾತ್ಯ, ಕರ್ನಾಟಕ ಸಂಗೀತ ಬ್ಯಾಂಡ್‌ ಸಿಬ್ಬಂದಿ ಪೊಲೀಸ್ ಬ್ಯಾಂಡ್ ಪ್ರದರ್ಶನಕ್ಕೆ ರಿಹರ್ಸಲ್ ಮಾಡಿದರು. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಇದಕ್ಕಾಗಿ ಚಾಮುಂಡೇಶ್ವರಿ ಸನ್ನಿಧಿಯಲ್ಲೂ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ‌.

ಈ ಬಾರಿಯ ದಸರಾ ಟೈಂಟೇಬಲ್‌ ಹೀಗಿದೆ!

15-10-2023 ಭಾನುವಾರ ಶರನ್ನವರಾತ್ರಿ ಪ್ರಾರಂಭ: ಬೆಳಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ನಡೆಯಲಿದೆ. ಇನ್ನು ಅಂದು ಸಂಜೆ 6.30 ರಿಂದ 7.15ರ ಶುಭಮೇಷ ಲಗ್ನದಲ್ಲಿ ಅರಮನೆಯಲ್ಲಿ ಪೂಜೆಗಳು ಆರಂಭವಾಗಲಿವೆ.

ಶುಕ್ರವಾರ (20-10-2023): ಕಾತ್ಯಾಯಿನೀ – ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಆರಂಭವಾಗುತ್ತದೆ. ಶ್ರವಣ ನಕ್ಷತ್ರದ ದಿನ ಅಂದರೆ 24-10-2023ರ ಮಂಗಳವಾರ ವಿಸರ್ಜನೆ ನಡೆಯಲಿದೆ.

21-10-2023 ಶನಿವಾರ: ಕಾಳರಾತ್ರಿ, ಮಹಿಷಾಸುರ ಸಂಹಾರ ನಡೆಯಲಿದೆ.

23-10-2023 ಸೋಮವಾರ: ಆಯುಧ ಪೂಜೆ ನಡೆಯಲಿದೆ.

ಇದನ್ನೂ ಓದಿ: Mysore Dasara : ದಸರಾ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ

ವಿಜಯದಶಮಿ ವಿಶೇಷ

24-10-2023ರ ಮಂಗಳವಾರದಂದು ವಿಜಯದಶಮಿ ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಂದಿ ಧ್ವಜ ಪೂಜೆ ನಡೆಯಲಿದೆ. ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಯಿಂದ ಮತ್ತು ಗಣ್ಯರಿಂದ ಅಂಬಾರಿಯಲ್ಲಿರುವ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ನಡೆಯಲಿದೆ. ನಂತರ ಜಂಬೂ ಸವಾರಿ ಪ್ರಾರಂಭವಾಗಲಿದೆ. ಭಾನುವಾರ (ಅಕ್ಟೋಬರ್‌ 26) ಚಾಮುಂಡಿ ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.

Exit mobile version