ಮೈಸೂರು: ಇಂದು(ಜುಲೈ 1) ಆಷಾಢ ಮಾಸದ ಮೊದಲ ಶುಕ್ರವಾರ. ಈ ದಿನ ಭಕ್ತಾದಿಗಳು ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ತಾಯಿಗೆ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಬಗೆಬಗೆಯ ಹೂಗಳಿಂದ ಇಡೀ ದೇವಾಲಯವನ್ನು ಶೃಂಗಾರಗೊಳಿಸಿದ್ದರು. ಕಮಲ, ಸೇವಂತಿ, ಮಲ್ಲಿಗೆ, ಗುಲಾಬಿ ಇತ್ಯಾದಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಬೆಳಗಿನ ಜಾವ 3.30ರಿಂದಲೇ ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ಆರಂಭವಾಗಿದ್ದವು. ಭಕ್ತರು ದಿವ್ಯದರ್ಶನಕ್ಕಾಗಿ ಸೇರಿದ್ದರು. ಭಕ್ತರ ನೂಕುನುಗ್ಗಲು ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ: Horoscope Today | ಆಷಾಢ ಮಾಸದ ಮೊದಲ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ