ಬೆಂಗಳೂರು: ವಿಶ್ವವಿಖ್ಯಾತ ಮೈಸೂರು (Mysore dasara) ದಸರಾ ಮಹೋತ್ಸವ ಆರಂಭಗೊಂಡಿದೆ. ಇನ್ನು ನವರಾತ್ರಿ ಕಳೆದು ಮರುದಿನ ನಡೆಯುವ ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿ (Jumboo Savari) ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ. ರಾಜ ಗಾಂಭೀರ್ಯದಿಂದ ಗಜಪಡೆಗಳು ಸಾಗುತ್ತಿದ್ದರೆ ಅವುಗಳನ್ನು ನೋಡುವುದೇ ಒಂದು ಸೊಗಸು. ಕ್ಯಾಪ್ಟನ್ ಅಭಿಮನ್ಯು (Captain Abhimanyu) 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದರೆ, ಅವನ ಜತೆಗೆ ನಿಶಾನೆ ಆನೆ ಅರ್ಜುನ, ನೌಫತ್ ಆನೆ ಧನಂಜಯನ ಸಹಿತ ಉಳಿದ 11 ಆನೆಗಳು ಹೆಜ್ಜೆ ಹಾಕಲಿವೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಈ ಎಲ್ಲ 14 ಆನೆಗಳಿಗೂ ಜೀವ ವಿಮೆಯನ್ನು (Life Insurance) ಮಾಡಿಸಲಾಗಿದೆ. ಆನೆಗಳಿಗೆ ಮಾತ್ರವಲ್ಲ, ಇವುಗಳ ಜತೆಗಿರುವ ಸಿಬ್ಬಂದಿ, ಉಸ್ತುವಾರಿ ಅಧಿಕಾರಿಗಳಿಗೂ ವಿಮೆಯನ್ನು ಮಾಡಿಸಲಾಗುತ್ತದೆ. ಅಲ್ಲದೆ, ಆಸ್ತಿ-ಪಾಸ್ತಿಗಳ ನಷ್ಟ ಮತ್ತು ಜೀವ ಹಾನಿಗೂ ಇನ್ಶುರೆನ್ಸ್ ಮಾಡಿಸಲಾಗಿದೆ.
ಇಲ್ಲಿ ಹೆಣ್ಣಾನೆ ಹಾಗೂ ಗಂಡಾನೆಗಳಿಗೆ ಪ್ರತ್ಯೇಕ ದರದಲ್ಲಿ ವಿಮೆಯನ್ನು ಮಾಡಿಸಲಾಗಿದೆ. ಅಲ್ಲದೆ, ಆಸ್ತಿ – ಪಾಸ್ತಿ ನಷ್ಟ ಮತ್ತು ಜೀವಹಾನಿಗೆ ಹೆಚ್ಚಿನ ಮಿಮೆ ಮಾಡಿಸಲಾಗಿದೆ. ಯಾವುದಕ್ಕೆ ಎಷ್ಟೆಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.
ಇದನ್ನೂ ಓದಿ: Mysore Dasara : ರಾಜ್ಯದಲ್ಲಿನ ಅಂತಾರಾಜ್ಯದವರಿಗೆ ಕನ್ನಡ ಕಲಿಸಿ; ಆರ್‌ಟಿಸಿ ಮಾದರಿ ʼಕನ್ನಡ ಪಟ್ಟʼ ಕೊಡಿ ಎಂದ ಹಂಸಲೇಖ
ಜೀವ ವಿಮೆ ವಿವರ
- ಗಂಡಾನೆಗಳಿಗೆ – 5 ಲಕ್ಷ ರೂ.
- ಹೆಣ್ಣಾನೆಗಳಿಗೆ – 4.50 ಲಕ್ಷ ರೂ.
- ಆನೆ ಸಿಬ್ಬಂದಿ, ಉಸ್ತುವಾರಿ ಅಧಿಕಾರಿ/ಸಿಬ್ಬಂದಿ: ತಲಾ 2 ಲಕ್ಷ ರೂ.
- ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮತ್ತು ಜೀವ ಹಾನಿ- 50 ಲಕ್ಷ ರೂ.
ಆನೆಗಳ ಆಹಾರ ಏನು?
ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳು ಮೈಸೂರು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವಷ್ಟು ದಿನಗಳವರೆಗೆ ಗೋಣಿ, ಆಲದಂತಹ ಸೊಪ್ಪು, ಭತ್ತದ ಹುಲ್ಲು, ಹಸಿರು ಹುಲ್ಲು ಹಾಗೂ ಕಬ್ಬು ಜತೆಗೆ ವಿಶೇಷ ಆಹಾರ ಪದಾರ್ಥಗಳಾದ ಅಕ್ಕಿ, ಭತ್ತ, ಬೆಲ್ಲ, ಉದ್ದಿನ ಕಾಳು, ಹಸಿರು ಕಾಳು, ಗೋದಿ, ತುಪ್ಪ, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಪ್ರತಿ ನಿತ್ಯ ನೀಡಲಾಗುತ್ತಿದೆ.
ಜಂಬೂ ಸವಾರಿಯ ಗಜಪಡೆಗಳು – ವಯಸ್ಸು – ಆನೆ ಶಿಬಿರ – ಎತ್ತರ ಮತ್ತು ತೂಕ
1) ಅಭಿಮನ್ಯ – 57 ವರ್ಷ- ಮತ್ತಿಗೋಡು ಆನೆ ಶಿಬಿರ – 274 ಮೀ ಎತ್ತರ – 4,700ರಿಂದ 5,000 ಕೆಜಿ
2) ವಿಜಯ – 63 ವರ್ಷ – ದುಬಾರೆ ಆನೆ ಶಿಬಿರ – 244ಮೀ ಎತ್ತರ – 3,250ರಿಂದ 3,500 ಕೆಜಿ
3) ವರಲಕ್ಷ್ಮಿ – 67 ವರ್ಷ – ಭೀಮನಕಟ್ಟೆ ಆನೆ ಶಿಬಿರ – 236ಮೀ ಎತ್ತರ – 3,300ರಿಂದ 3,500 ಕೆಜಿ
4) ಅರ್ಜುನ – 65 ವರ್ಷ – ಬಳ್ಳೆ ಆನೆ ಶಿಬಿರ – 288ಮೀ ಎತ್ತರ, 5,800ರಿಂದ 6,000 ಕೆಜಿ
5) ಧನಂಜಯ – 43 ವರ್ಷ – ದುಬಾರೆ ಆನೆ ಶಿಬಿರ – 280 ಮೀ. ಎತ್ತರ – 4,000ರಿಂದ 4,200 ಕೆಜಿ
6) ಮಹೇಂದ್ರ – 40 ವರ್ಷ – ಮತ್ತಿಗೋಡು ಆನೆ ಶಿಬಿರ – 275ಮೀ ಎತ್ತರ – 3,800ರಿಂದ 4,000 ಕೆಜಿ
7) ಭೀಮ – 23 ವರ್ಷ – ಮತ್ತಿಗೋಡು ಆನೆ ಶಿಬಿರ – 285 ಮೀ ಎತ್ತರ – 3,800ರಿಂದ 4,000 ಕೆಜಿ
8) ಗೋಪಿ – 41 ವರ್ಷ – ದುಬಾರೆ ಆನೆ ಶಿಬಿರ – 286 ಮೀ ಎತ್ತರ – 3,700ರಿಂದ 3,800 ಕೆಜಿ
9) ಪ್ರಶಾಂತ್ – 50 ವರ್ಷ – ದುಬಾರೆ ಆನೆ ಶಿಬಿರ – 300 ಮೀ ಎತ್ತರ – 4000ರಿಂದ 4,200 ಕೆಜಿ
ಇದನ್ನೂ ಓದಿ: Mysore Dasara : ಜನಪರ ಸಿನಿಮಾಗಳಿಗೆ ಸರ್ಕಾರದ ಸಹಾಯಹಸ್ತ; ಮೆರಗು ತಂದ ಚಂದ್ರಯಾನ-3 ಫಲಪುಷ್ಪ
10) ಸುಗ್ರೀವ – 41 ವರ್ಷ – ದುಬಾರೆ ಆನೆ ಶಿಬಿರ – 277ಮೀ ಎತ್ತರ – 4,000ರಿಂದ 4,100 ಕೆಜಿ
11) ಕಂಜನ್ – 24 ವರ್ಷ – ದುಬಾರೆ ಆನೆ ಶಿಬಿರ – 262ಮೀ ಎತ್ತರ – 3,700ರಿಂದ 3,900 ಕೆಜಿ
12) ರೋಹಿತ್ – 21 ವರ್ಷ – ರಾಮಾಪುರ ಆನೆ ಶಿಬಿರ – 270 ಮೀ ಎತ್ತರ – 2,900ರಿಂದ 3,000 ಕೆಜಿ
13) ಲಕ್ಷ್ಮಿ – 52 ವರ್ಷ, ದೊಡ್ಡಹರವೆ ಆನೆ ಶಿಬಿರ – 252 ಮೀ. ಎತ್ತರ – 3,000ರಿಂದ 3,200 ಕೆಜಿ
14) ಹಿರಣ್ಯ – 46 ವರ್ಷ, ರಾಮಾಪುರ ಆನೆ ಶಿಬಿರ – 250ಮೀ ಎತ್ತರ – 3,000ರಿಂದ 3,200 ಕೆಜಿ