ಮೈಸೂರು: ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರಿಂದ ಮೈಕ್ ಕಿತ್ತುಕೊಂಡ ಪ್ರಕರಣದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕನಕ ಪೀಠದ ಮೈಕ್ ಕಿತ್ತುಕೊಳ್ಳುವ ಬೊಮ್ಮಾಯಿ, ದೊಡ್ಡ ಮಠದ ಶ್ರೀಗಳಿಂದಲೂ ಹೀಗೆಯೇ ಮೈಕ್ ಕಿತ್ತುಕೊಳ್ಳುತ್ತಾರೆಯೇ ಎಂಬ ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಸ್ವಾಮೀಜಿ, ಮೈಕ್ ಕಿತ್ತುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಶ್ರೀಗಳು. ಒಂದು ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಿದೆ, ನಾನು ಮಾತನಾಡಿದ ನಂತರ ಶ್ರೀಗಳೂ ಮಾತನಾಡಿದ್ದಾರೆ. ವಿಶ್ವನಾಥ್ ಅಲ್ಲಿರಲಿಲ್ಲ, ಅವರಿಗೆ ವಿಷಯ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ | CM Bommai : ಮಾತಿನ ಮಧ್ಯೆಯೇ ಕನಕಪೀಠ ಶ್ರೀಗಳಿಂದ ಮೈಕ್ ತೆಗೆದುಕೊಂಡ ಸಿಎಂ ಬೊಮ್ಮಾಯಿ
ಗೋಧ್ರೋತ್ತರ ಗಲಭೆಗಳ ಕುರಿತು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದು ಇಡೀ ದೇಶದ ಗೌರವದ ಪ್ರಶ್ನೆ. ಉದ್ದೇಶಪೂರ್ವಕವಾಗಿ ಚರಿತ್ರೆ ಬದಲಾವಣೆ ಮಾಡಿ, ದೇಶದ ಚಾರಿತ್ರ್ಯ ಹರಣ ಮಾಡುವಾಗ ಜನ ಸಹಜವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸತ್ಯ ತಿರುಚಿ ಮಾಡಿರುವ ಈ ಸಾಕ್ಷ್ಯಚಿತ್ರವನ್ನು ಸಿದ್ದರಾಮಯ್ಯನವರೂ ವಿರೋಧ ಮಾಡಬೇಕು. ರಾಜಕೀಯವಾಗಿ ಭಿನ್ನಾಭಿಪ್ರಾಯ ಇದ್ದರೂ, ದೇಶದ ಗೌರವದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎಂದರು.