Site icon Vistara News

Mahisha Dasara : ಮಹಿಷ ದಸರಾ ಮಾಡಲು ಬಿಟ್ರೆ ವೀರಪ್ಪನ್‌ನನ್ನೂ ದೇವರು ಮಾಡ್ತಾರೆ ಎಂದ ಪ್ರತಾಪ್‌

Veerappan Mahishasura

ಮೈಸೂರು: ಮಹಿಷಾ ದಸರಾದಂತಹ (Mahisha Dasara) ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು. ಈಗಲೇ ಇವರನ್ನು ಕಂಟ್ರೋಲ್‌ ಮಾಡಬೇಕು. ಇಲ್ಲದೆ ಇದ್ದರೆ ಮಲೈಮಹದೇಶ್ವರ ಬೆಟ್ಟಕ್ಕೆ ಹೋಗಿ ನರಹಂತಕ ವೀರಪ್ಪನ್ (Killer Veerappan) ನಮ್ಮ ದೇವರು. ನಮ್ಮ ಮೂಲ ಪುರುಷ ಅಂತಾ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ- ಹೀಗೆಂದು ಹೇಳಿದ್ದಾರೆ ಮೈಸೂರು ಸಂಸದ ಪ್ರತಾಪ್‌ಸಿಂಹ.

ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ್‌ 13ರಂದು ನಡೆಯಲಿರುವ ಚಾಮುಂಡಿ ಬೆಟ್ಟ ಚಲೋದ ಮಾಹಿತಿ ನೀಡಿದರು. ಅ. 13ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ನಡೆಸಲಿದೆ. ಐದು ಸಾವಿರಕ್ಕೂ ಹೆಚ್ಚು ಜನ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಚಾಮುಂಡಿ ದೇವಿಗೆ ಪೂಜೆ ಮಾಡಿ ಮಹಿಷಾಸುರನ ಮುಂದೆ ಕುಳಿತು ಕೊಳ್ಳುತ್ತೇವೆ ಎಂದು ಹೇಳಿದರು.

ಲಲಿತಾ ನಾಯಕ್‌ ಮಗ ಅಂಬೇಡ್ಕರ್‌ ಪ್ರತಿಮೆಗೆ ಮದ್ಯ ಹಾಕಿದ್ದ!

ಲಲಿತಾ ನಾಯಕ್ ಸಚಿವೆ ಆಗಿದ್ದಾಗ ಅವರ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಕುಡಿಸಲು ಹೋಗಿದ್ದ. ಈ ರೀತಿ ಅಂಬೇಡ್ಕರ್‌ಗೆ ಅಪಮಾನ ಮಾಡಿದ ವ್ಯಕ್ತಿಯ ತಾಯಿಯನ್ನು ಮಹಿಷಾ ದಸರಾ ಉದ್ಘಾಟನೆಗೆ ಕೆಲವು ದಲಿತರು ಕರೆದು ಕೊಂಡು ಬರುತ್ತಿರುವುದು ಸರಿನಾ? ಎಂದು ಅವರು ಪ್ರಶ್ನೆ ಮಾಡಿದರು.

ʻʻ50 ವರ್ಷದಿಂದ ಯಾವತ್ತಾದರೂ ಮಹಿಷಾ ದಸರಾ ಎಲ್ಲಿ ಮಾಡಿದ್ದಾರೆ? ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ? ಮಹಿಷಾ ದಸರಾದಂಥ ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು. ಈಗಲೇ ಇವರನ್ನು ಸದೆ ಬಡಿಯಬೇಕು. ಇಲ್ಲದೆ ಇದ್ದರೆ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ನಮ್ಮ ದೇವರು. ನಮ್ಮ ಮೂಲ ಪುರಷ ಅಂತಾ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆʼʼ ಎಂದು ಹೇಳಿದರು ಪ್ರತಾಪ್‌ಸಿಂಹ.

ʻʻವೀರಪ್ಪನ್ ನಮ್ಮ‌ ಮೂಲ ನಿವಾಸಿ, ಅವನು ಪ್ರಕೃತಿ ರಕ್ಷಕ ಅಂತಾ ಕಥೆ ಕಟ್ಟಿ ದೇವರು ಮಾಡಿಬಿಡುತ್ತಾರೆ. ಮಲೈ ಮಹದೇಶ್ವರನನ್ನು ದೆವ್ವ ಮಾಡಿ ಬಿಡುತ್ತಾರೆʼʼ ಎಂದು ಹೇಳಿದರು.

ಸಂಘರ್ಷಕ್ಕೂ ಸೈ ಹೊಡೆದಾಟಕ್ಕೂ ಸೈ

ಚಾಮುಂಡಿ ಚಲೋ ವಿಚಾರದಲ್ಲಿ ನಾವು ಸಂಘರ್ಷಕ್ಕೂ ಸೈ ಹೊಡೆದಾಟಕ್ಕೂ ಸೈ. ಎಲ್ಲದಕ್ಕೂ ಸಿದ್ಧರಾಗೇ ಚಾಮುಂಡಿ ಬೆಟ್ಟ ಚಲೋ ಮಾಡ್ತಿರೋದು. ಸಂಘರ್ಷ ಆದರೂ ಪರವಾಗಿಲ್ಲ ಇವರನ್ನು ಹೊಸಕಿ ಹಾಕಲೇ ಬೇಕು. ನಾವು ತೀರ್ಮಾನ ಮಾಡಿಯೆ ಚಾಮುಂಡಿ ಚಲೋ ಮಾಡುತ್ತಿರುವುದುʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು ಪ್ರತಾಪ್‌ ಸಿಂಹ.

ʻʻದೇಶ, ಧರ್ಮ ರಕ್ಷಣೆಗೆ ನಾವು ಸಂಘರ್ಷಕ್ಕೆ ಸಿದ್ಧ. ನಮ್ಮ‌ ಪಕ್ಷವೂ ಅದೇ ರೀತಿ ಬೆಳೆದಿದ್ದು. ಚಾಮುಂಡಿ ತಾಯಿಗೆ ಅವಮಾನ ಮಾಡುವುದನ್ನು ನಿಲ್ಲಿಸಲು ಸಂಘರ್ಷ ಹಾಗೂ ಹೊಡೆದಾಟಕ್ಕೂ ಸಿದ್ಧ. ಸಂಘರ್ಷದಿಂದಲೇ ನಾವು ಪಕ್ಷ ಕಟ್ಟಿರೊದು. ಚೀನಾ, ಪಾಕಿಸ್ತಾನ ಬಾರ್ಡರ್ ನಲ್ಲಿ ದೇಶ ಉಳಿಸಲು ಸಂಘರ್ಷ ಮಾಡಬೇಕು. ಇಲ್ಲಿ ಧರ್ಮ ಉಳಿಸಲು ಸಂಘರ್ಷ ಮಾಡಬೇಕುʼʼ ಎಂದು ಹೇಳಿದರು ಪ್ರತಾಪ್‌ ಸಿಂಹ.

ಇದನ್ನೂ ಓದಿ: Mahisha Dasara : ಚಾಮುಂಡಿ ಬೆಟ್ಟ ಪ್ರತಾಪಸಿಂಹನ ಅಪ್ಪನ ಆಸ್ತಿಯೇ; ಸಮಿತಿ ಕೆಂಡಾಮಂಡಲ

ʻʻಧರ್ಮ ರಕ್ಷಣೆ‌ ವಿಚಾರದಲ್ಲಿ ಯಾವುದೂ ತಪ್ಪಲ್ಲ. ಚಾಮುಂಡಿ ಬೆಟ್ಟದಲ್ಲಿ ನಾವು ಯಾವುದೇ ಅನಾಚಾರ ನಡೆಯಲು ಬಿಡುವುದಿಲ್ಲʼʼ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

Exit mobile version