Site icon Vistara News

Mahisha Dasara : ಚಾಮುಂಡಿ ಬೆಟ್ಟ ಪ್ರತಾಪಸಿಂಹನ ಅಪ್ಪನ ಆಸ್ತಿಯೇ; ಸಮಿತಿ ಕೆಂಡಾಮಂಡಲ

Mahisha Dasara Pratap, Purushottama

ಮೈಸೂರು: ಅಕ್ಟೋಬರ್‌ 13ರಂದು ಆಯೋಜನೆಗೊಂಡಿರುವ ಮಹಿಷ ದಸರಾವನ್ನು (Mahisha Dasara) ತಡೆಯಲು ಚಾಮುಂಡಿ ಚಲೋ (Chamundi Chalo) ಆಯೋಜನೆ ಮಾಡಿರುವ ಬಿಜೆಪಿ ವಿರುದ್ಧ ಮಹಿಷ ದಸರಾ ಆಚರಣೆ ಸಮಿತಿ (Mahisha Dasara Acharane Samiti) ಫುಲ್‌ ಗರಂ ಆಗಿದೆ. ಅದರಲ್ಲೂ ಈ ಚಲೋದ ನೇತೃತ್ವದ ವಹಿಸಿರುವ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರನ್ನು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ (Purushotham Statement) ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಮುಂಡಿ ಬೆಟ್ಟ ಪ್ರತಾಪ ಸಿಂಹನ ಅಪ್ಪನ ಆಸ್ತಿಯಾ (Is Chamundi hill is Pratapsimhas Fathers asset?) ಎಂದು ಕೇಳಿದ್ದಾರೆ.

ʻʻನಿಗದಿತ ದಿನದಂದೇ ಮಹಿಷ ದಸರಾ ಆಚರಣೆ ಮಾಡಿಯೇ ಮಾಡುತ್ತೇವೆ. ಹೇಗೆ ತಡೆಯುತ್ತಾರೋ ನೋಡಿಯೇ ಬಿಡುತ್ತೇವೆ. ನಾವೂ ಸಂಘರ್ಷಕ್ಕೆ ತಯಾರಾಗಿಯೇ ಇದ್ದೇವೆʼʼ ಎಂದು ಪುರುಷೋತ್ತಮ್‌ ಅವರು ಗುರುವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ʻʻʻನಾವು ಯಾವುದೇ ಸಂಘರ್ಷಕ್ಕೂ ಸಿದ್ಧರಿದ್ದೇವೆ. ಆದರೆ ಸಂಘರ್ಷಕ್ಕೆ ಬೇರೆ ವೇದಿಕೆಗಳಿವೆ. ಪ್ರತಾಪ್ ಸಿಂಹ ಅಲ್ಲಿಗೆ ಬರಲಿ. ಧಾರ್ಮಿಕ ಆಚರಣೆ ಹೆಸರಲ್ಲಿ ಸಂಘರ್ಷ ಮಾಡುವುದು ಬೇಡʼʼ ಎಂದು ಅವರು ಹೇಳಿದರು.

ʻʻಮಹಿಷ ದಸರಾ ಆಚರಣೆಗೆ ನಾವು ಮುಂಚಿತವಾಗಿ ಅನುಮತಿ ಕೇಳಿದ್ದೇವೆ. ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುರಭವನದ ಆವರಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಇದನ್ನು ತಡೆಯಲು ಪ್ರತಾಪ್ ಸಿಂಹ ಯಾರು? ಚಾಮುಂಡಿಬೆಟ್ಟ ಪ್ರತಾಪ್ ಸಿಂಹನ ಅಪ್ಪನ ಆಸ್ತಿಯೇ?ʼʼ ಎಂದು ಹೇಳಿರುವ ಪುರುಷೋತ್ತಮ್‌ ಅವರು, ʻʻದೇಶದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಇದೆ. ನೀವು ಬೇಕಿದ್ದರೆ ಚಾಮುಂಡಿಬೆಟ್ಟ ಚಲೋ ಮಾಡಿಕೊಳ್ಳಿ.
ನಮ್ಮ ಆಚರಣೆ ತಡೆಯಲು ಬರಬೇಡಿʼʼ ಎಂದು ಗುಡುಗಿದ್ದಾರೆ.

ಪ್ರತಾಪಸಿಂಹ ಕೂಡಾ ಮಹಿಷ ವಂಶಸ್ಥರೇ ಎಂದ ಹ.ರಾ ಮಹೇಶ್‌

ಈ ನಡುವೆ, ಚಾಮರಾಜನಗರದಲ್ಲಿ ಮಾತನಾಡಿರುವ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಹ.ರಾ.ಮಹೇಶ್ ಅವರು, ಪ್ರತಾಪ್ ಸಿಂಹ ಅವರು ಸಹ ಮಹಿಷನ ವಂಶಸ್ಥರೆ. ಆದರೆ, ಅವರು ಈಗ ಬಿಜೆಪಿಯ ಮನುವಾದ, ಬ್ರಾಹ್ಮಣವಾದದೊಳಗೆ ಸಿಲುಕಿದ್ದಾರೆ. ಪ್ರತಾಪ್ ಸಿಂಹಗೆ ನಿಜವಾದ ಇತಿಹಾಸ ಗೊತ್ತಿಲ್ಲ. ಅದು ಅರಿವಾದರೆ ಮಹಿಷ ದಸರಾಗೆ ಅವರೇ ಮುಂದಾಗ್ತಾರೆ. ಮೈಸೂರು ಸಂಸದರಿಗೆ ಇತಿಹಾಸ ಅರ್ಥೈಸುವ ಕೆಲಸ ಮಾಡುತ್ತೇವೆ ಎಂದು ಟಾಂಗ್ ನೀಡಿದರು.

ʻʻಮೈಸೂರು ಶಾಸಕ ಶ್ರೀವತ್ಸ ಅವರು ಯಾವತ್ತೂ ಬದಲಾಗಲ್ಲ. ಯಾಕೆಂದರೆ ಅವರು ಮಹಿಷ ರಾಕ್ಷಸ ಎಂದು ಪ್ರತಿಬಿಂಬಿಸಿದ ಸಮುದಾಯಕ್ಕೆ ಸೇರಿದವರು. ಹಾಗಾಗಿ ಅವರು ಬದಲಾಗೋದು ಡೌಟ್. ಆದರೆ ಪ್ರತಾಪ್ ಸಿಂಹ ಇವತ್ತಲ್ಲ ನಾಳೆ ಬದಲಾಗ್ತಾರೆ.. ಯಾಕೆಂದರೆ ಅವರು ಮೂಲ ಶೂದ್ರ ಸಮುದಾಯದವರು. ಮುಂದಿನ ದಿನಗಳಲ್ಲಿ ಸಂಸದರಿಗೆ ಮಹಿಷನ ಇತಿಹಾಸ ತಿಳಿಸುತ್ತೇವೆ. ಆ ಮೂಲಕ ಸಂಸದರ ವಿಶ್ವಾಸ ತೆಗೆದುಕೊಂಡು ಮಹಿಷ ದಸರಾ ಆಚರಿಸುತ್ತೇವೆʼʼ ಎಂದು ಚಾಮರಾಜನಗರದಲ್ಲಿ ಹ.ರಾ.ಮಹೇಶ್ ಹೇಳಿದರು.

ʻʻʻಈಗ ಅವರು ಒಂದು ರಾಜಕೀಯ ಪಕ್ಷದಲ್ಲಿರುವುದರಿಂದ ಅಲ್ಲಿನ ಸಿದ್ಧಾಂತ ನಂಬಬೇಕಾಗುತ್ತದೆ. ಆದರೂ ಪ್ರತಾಪ್ ಸಿಂಹ ಬದಲಾಗುತ್ತಾರೆʼʼ ಎಂದು ಪ್ರತಿಪಾದಿಸಿದರು ಹ.ರಾ. ಮಹೇಶ್.

ಪ್ರತಾಪ್‌ ಸಿಂಹ ಅವರು ಕೆ.ಎಸ್. ಭಗವಾನರ ಒಕ್ಕಲಿಗರೆಲ್ಲ ಬೌದ್ಧರೇ ಎಂಬ ಪುಸ್ತಕ ಓದಬೇಕು. ಓದಿದರೆ ಅರ್ಥ ಆಗುತ್ತೆ, ಇತಿಹಾಸ ತಜ್ಞರ ಪುಸ್ತಕ ಓದಿದ್ರೆ ಖಂಡಿತ ಪ್ರತಾಪ್ ಸಿಂಹ ಬದಲಾಗ್ತಾರೆʼʼ ಎಂದರು.

ʻʻಮಹಿಷ ದಸರಾ ವಿರೋಧಿಸಲು ಅವ್ರಿಗೆ ಹಕ್ಕಿದೆ. ಅದೇ ರೀತಿ ಆಚರಣೆ ಮಾಡೋಕೆ ನಮಗೂ ಹಕ್ಕಿದೆ. ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡ್ತೀವಿʼʼ ಎಂದು ಹ.ರಾ. ಮಹೇಶ್‌ ಹೇಳಿದರು.

ಇದನ್ನೂ ಓದಿ: Mahisha Dasara : ಮಹಿಷ Vs ಚಾಮುಂಡಿ ; ಅ. 13ರಂದು ಬಿಜೆಪಿಯಿಂದ ಚಾಮುಂಡಿ ಚಲೋ

ಪ್ರತಾಪ್‌ ಸಿಂಹ ಸವಾಲು ಹಾಕಿದ್ದು ನಮಗಲ್ಲ, ಸರ್ಕಾರಕ್ಕೆ ಎಂದ ಕೃಷ್ಣಮೂರ್ತಿ

ಮಹಿಷ ದಸರಾ ತಡೆಯುತ್ತೇವೆ ಎಂಬ ಸಂಸದ ಪ್ರತಾಪ್‌ಸಿಂಹ ಅವರ ಹೇಳಿಕೆಗೆ ಪ್ರಗತಿಪರ ಚಿಂತಕ ಡಾ.ಕೃಷ್ಣಮೂರ್ತಿ ಚಮರಾಂ ತಿರುಗೇಟು ನೀಡಿದ್ದಾರೆ.

ʻʻಪ್ರತಾಪ್ ಸಿಂಹ ನಮಗೆ ಸವಾಲು ಹಾಕಿಲ್ಲ. ಜಿಲ್ಲಾಡಳಿತ, ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಪರ್ಮಿಷನ್ ಕೊಡ್ತಾರೋ ಇಲ್ವೋ ನೋಡೋಣ ಅಂತ ಪ್ಲ್ಯಾನ್ ಮಾಡಿದ್ದಾರೆ. ಆದ್ದರಿಂದ ಪ್ರತಾಪ್ ಸಿಂಹ ಸವಾಲನ್ನು ನಾವು ಸ್ವೀಕಾರ ಮಾಡುವ ಅಗತ್ಯವಿಲ್ಲʼʼ ಎಂದು ಡಾ. ಕೃಷ್ಣಮೂರ್ತಿ ಹೇಳಿದರು.

ʻʻ ಅ. 13ರಂದು ಮಹಿಷ ದಸರಾ ಮಾಡುತ್ತೇವೆ ಅಂತ ತಿಂಗಳಿಂದಲೂ ಹೇಳುತ್ತಲೇ ಇದ್ದೇವೆ. ಅದೇ ದಿನ ಚಾಮುಂಡಿ ಚಲೋ ಯಾಕೆ ಮಾಡಬೇಕು? ಚಾಮುಂಡಿ ಶಕ್ತಿ ದೇವತೆ, ದುರ್ಗಿ. ಅಂತಹ ದುರ್ಗಿಯನ್ನು ಹುಲು ಮಾನವರು ರಕ್ಷಣೆ ಮಾಡುವ ಅಗತ್ಯ ಇದೆಯಾ? ಚಾಮುಂಡೇಶ್ವರಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುತ್ತಾರೆ. ಸಂಸದರು ತಮ್ಮ ಕೆಲಸಗಳತ್ತ ಗಮನ ಕೊಡಲಿʼʼ ಎಂದರು.

Exit mobile version