Site icon Vistara News

Murder Case : ಯುವಕರ ಫೈಟ್‌ಗೆ ಅಮಾಯಕ ಬಲಿ; ಬ್ಯಾಟ್‌ ಏಟಿಗೆ ವೃದ್ಧನ ತಲೆ ಪೀಸ್‌ ಪೀಸ್‌

Murder with bat

ಮೈಸೂರು: ಯುವಕರ ನಡುವೆ ನಡೆದ ಹೊಡೆದಾಟದಲ್ಲಿ (fight between youths) ಅಮಾಯಕ ವೃದ್ಧರೊಬ್ಬರು (Innocent Old man dead) ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ (Murder case) ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿದ್ಯಾರಣ್ಯಪುರಂ (Mysore News) ಪೊಲೀಸ್ ಠಾಣಾ ವ್ಯಾಪ್ತಿಯ ಸೂಯೆಜ್ ಫಾರಂ ಬಳಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಅಗ್ರಹಾರದ ನಿವಾಸಿ ಲಿಂಗಣ್ಣ(70) ಎಂದು ಗುರುತಿಸಲಾಗಿದೆ.

ಸೂಯೆಜ್ ಫಾರಂ ಗೇಟ್ ಬಳಿ ವೆಂಕಟೇಶ್ ಹಾಗೂ ಆಕಾಶ್ ಎಂಬುವರು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಇಬ್ಬರ ನಡುವಿನ ಗಲಾಟೆ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಬಂದ ವೆಂಕಟೇಶ್ ಜೋರಾಗಿ ಆಕಾಶ್ ಮೇಲೆ ಬೀಸಿದ್ದಾನೆ.

ಈ ವೇಳೆ ಆಕಾಶ್ ತಲೆ ಬಗ್ಗಿಸಿ ತಪ್ಪಿಸಿಕೊಂಡಿದ್ದಾನೆ. ಗುರಿ ತಪ್ಪಿದ ಬ್ಯಾಟ್ ಗಲಾಟೆ ನೋಡುತ್ತಾ ನಿಂತಿದ್ದ ವೃದ್ದ ಲಿಂಗಣ್ಣ ಮೇಲೆ ಬಿದ್ದಿದೆ. ಸ್ಥಳದಲ್ಲೇ ಕುಸಿದುಬಿದ್ದ ಲಿಂಗಣ್ಣ ಅವರನ್ನು ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಿಂಗಣ್ಣ ಮೃತಪಟ್ಟಿದ್ದಾರೆ.

ಬ್ಯಾಟ್ ಬೀಸಿದ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: New year Celebration : ಹೊಸ ವರ್ಷದ ಪಾರ್ಟಿಗೆ ಹೋಗಲು ಬಿಡದ್ದಕ್ಕೆ ಬೇಸರ; ಯುವಕ ಆತ್ಮಹತ್ಯೆ!

ವರ್ಷಾಚರಣೆ ಮುಗಿಸಿ ಮನೆಗೆ ಹೊರಟವ ಮಸಣಕ್ಕೆ

ಬೆಳಗಾವಿ: ವರ್ಷಾಚರಷೆ ಮುಗಿಸಿ ಮನೆಗೆ ಹೊರಟ ಯುವಕನೊಬ್ಬ ಕುಡಿತದ ಮತ್ತಿನಲ್ಲಿ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಅಮಲಿನಲ್ಲಿ ಬೈಕ್ ಓಡಿಸಿದ ಆತನ ಡಿವೈಡರ್‌ಗೆ ಡಿಕ್ಕಿ ಹೊಡೆಸಿದ್ದಾನೆ.

ಮಚ್ಚೆ ಗ್ರಾಮದ ನಿವಾಸಿ ಪಂಕಜ್ ಸ್ಥಳದಲ್ಲಿಯೇ ಮೃತಪಟ್ಟ ಯುವಕನಾಗಿದ್ದಾನೆ. ಆತನ ತಲೆಗೆ ಗಂಭೀರ ಗಾಯವಾಗಿ ಗಾಯಗಳಾಗಿದ್ದು ಆತ ನಡು ರಸ್ತೆಯಲ್ಲಿಯೇ ಉಸಿರು ಚೆಲ್ಲಿದ್ದಾನೆ. ಹಿಂಬದಿ ಸವಾರ ಸಂತೋಷ್ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ತಡರಾತ್ರಿ ನಡೆದ ಘಟನೆ ಇದಾಗಿದ್ದು, ಬೆಳಗಾವಿ ಉತ್ತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್‌ ಡಿಕ್ಕಿಯಾಗಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಸಾವು

ಚಿಕ್ಕಬಳ್ಳಾಪುರ: ಇಲ್ಲನ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್ ಢಿಕ್ಕಿಯಾಗಿ ಕೆಎಸ್ಆರ್ಟಿಸಿ ಸಿಬ್ಬಂದಿಯೇ ಮೃತಪಟ್ಟಿದ್ದಾರೆ. ಬಾಗೇಪಲ್ಲಿ ಕೆಎಸ್ಆರ್ಟಿಸಿ ಡಿಪೊದಲ್ಲಿ ನಡೆದ ದುರಂತದಲ್ಲಿ ಮಂಜುನಾಥ್ ಸ್ಥಳದಲ್ಲೇ ಮೃಪಟ್ಟಿದ್ದಾರೆ.

ಬಾಗೇಪಲ್ಲಿ ಡಿಫೋದಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡ್ತಿದ್ದ ಮಂಜುನಾಥ್ ಅವರು ಬಸ್ ತೊಳೆಯುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ಸಾವು ಸಂಭವಿಸಿದೆ.

ಮೃತ ಮಂಜುನಾಥ್ ಬಾಗೇಪಲ್ಲಿ ತಾಲ್ಲೂಕು ತೊಳ್ಳಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ಹೊಸ ವರ್ಷದ ಮೊದಲ ದಿನವೇ ದುರಂತ ಸಂಭವಿಸಿದೆ.

Exit mobile version