Site icon Vistara News

Mysore Dasara 2022 | ಅರಮನೆ ನಗರಿಯಲ್ಲಿ ಇಂದಿನಿಂದ ಯುವ ಸಂಭ್ರಮ: ನಟ ಡಾಲಿ ಧನಂಜಯ್ ಅತಿಥಿ

Mysore Dasara 2022

ಮೈಸೂರು : ಅರಮನೆ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ (Mysore Dasara 2022) ಹಿನ್ನೆಲೆಯಲ್ಲಿ ಯುವ ಸಂಭ್ರಮ ಕಾರ್ಯಕ್ರಮ ಶುಕ್ರವಾರ (ಸೆ.16) ಪ್ರಾರಂಭಗೊಳ್ಳಲಿದೆ. ಈ ಬಾರಿ ದಸರಾಗೂ ಮುನ್ನ ಯುವ ಸಂಭ್ರಮ ಪ್ರಾರಂಭಗೊಳ್ಳುತ್ತಿದ್ದು, ದಸರೆಯ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಪ್ರತಿದಿನ ಸಂಜೆ 5:30ರಿಂದ ರಾತ್ರಿ 10 ಗಂಟೆಯ ವರಗೆ 9 ದಿನಗಳ ಕಾರ್ಯಕ್ರಮ ನೆರವೇರಲಿದೆ. ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟ ಡಾಲಿ ಧನಂಜಯ್ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ | Mysore Dasara 2022 | ದಸರಾ ಕುಸ್ತಿಗೆ ಅಖಾಡ ಸಜ್ಜು, ಈ ಬಾರಿ ಅದ್ಧೂರಿ ಪಂದ್ಯಾವಳಿ ಆಯೋಜನೆಗೆ ಸಿದ್ಧತೆ

ಸಂಜೆ 5:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ಆಗಲಿದ್ದು, 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಯುವ ಪಡೆ ಈ ಸಂಭ್ರಮಕ್ಕೆ ಹುಚ್ಚೆದ್ದು ಕುಣಿದು ಧೂಳೆಬ್ಬಿಸಲಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಮಾಡಲಾಗಿದೆ.

Exit mobile version