ಬೆಂಗಳೂರು: ಅಕ್ಟೋಬರ್ 15ರಿಂದ 24ರವರೆಗೆ ನಡೆಯಲಿರುವ ಮೈಸೂರು ದಸರಾ (Mysore Dasara) ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ (Urdu Kavigoshti) ಆಯೋಜಿಸಿರುವುದು ಆಕ್ಷೇಪಕ್ಕೆ ಒಳಗಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯ ಮಾಜಿ ಸಚಿವ ವಿ. ಸುನಿಲ್ ಕುಮಾರ್ (V Sunil Kumar) ಅವರು ಸರ್ಕಾರದ ನಡೆಯನ್ನು ಖಂಡಿಸಿದ್ದು, ಇದು ಟಿಪ್ಪು ಸಂಸ್ಕೃತಿಯ ವೈಭವೀಕರಣದ ಪ್ರಯತ್ನ ಎಂದು ಹೇಳಿದ್ದಾರೆ.
ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿರುವ ಅವರು, ಕನ್ನಡ ಸಂಸ್ಕೃತಿ ಮೆರೆಯಬೇಕಾದ ಜಾಗದಲ್ಲಿ ಉರ್ದು ಹೇರಿಕೆ ಯಾಕೆ? ಇದರ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ.
ವಿ. ಸುನಿಲ್ ಕುಮಾರ್ ಎಕ್ಸ್‌ನಲ್ಲಿ ಹೇಳಿದ್ದೇನು?
ಮತ ಬ್ಯಾಂಕ್ ಓಲೈಕೆಗಾಗಿ ಉರ್ದು ಹೇರಿಕೆ
ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕ್ರತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ ? ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ.
ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕ್ರತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ ?
— Sunil Kumar Karkala (@karkalasunil) October 9, 2023
ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ. (1/3)
ಟಿಪ್ಪು ನಿಜಗನಸು ಸಾಕಾರಕ್ಕೆ ಸಿದ್ದರಾಮಯಕ್ಕೆ ಹೆಜ್ಜೆ
ಟಿಪ್ಪು ನಿಜಗನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಮಹಿಷ ದಸರಾ, ಉರ್ದು ಕವಿಗೋಷ್ಠಿ ಜತೆಗೆ ಇನ್ನೆಷ್ಟು ಸಾಂಸ್ಕ್ರತಿಕ ದೌರ್ಜನ್ಯಕ್ಕೆ ನಿಮ್ಮ ಸಹಮತ ?
ದಸರಾದಲ್ಲಿ ನಾಡದೇವಿ ಚಾಮುಂಡಿ ಹಾಗೂ ಮೈಸೂರು ಒಡೆಯರ್ ಅವರ ವೈಭವವಾಗಬೇಕೇ ವಿನಾ ಟಿಪ್ಪು ಸಂಸ್ಕ್ರತಿಯಲ್ಲ.
ಸೂಕ್ಷ್ಮತೆ ಮರೆತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಸೂಕ್ಷ್ಮತೆ ಹಾಗೂ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವರ್ಷಪೂರ್ತಿ ಕರ್ನಾಟಕ ಸಂಭ್ರಮ ಆಚರಿಸಲು ಹೊರಟವರು ದಸರಾದಲ್ಲಿ ಉರ್ದು ಸಂಭ್ರಮ ನಡೆಸಿದರೆ ಹೇಗೆ?
ಮುಶೈರಾ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಯಾರು?
ಮೊಟ್ಟಮೊದಲ ಬಾರಿಗೆ ದಸರಾ ಕವಿಗೋಷ್ಠಿಯಲ್ಲಿ ಈ ವರ್ಷ ಉರ್ದು (ಮುಶೈರಾ) ಕವಿಗೋಷ್ಠಿ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಪ್ರಸಿದ್ಧ ಉರ್ದು ಕವಿಗಳು ತಮ್ಮ ಗಜಲ್‌ಗಳು ಮತ್ತು ಶಾಯರಿ (ಕವಿತೆ) ಪ್ರಸ್ತುತ ಪಡಿಸಲಿದ್ದಾರೆ ಎಂದು ದಸರಾ ಕವಿಗೋಷ್ಠಿ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಭಾನುವಾರ ನಡೆದ ಮಾದ್ಯಮ ಗೋಷ್ಠಿಯಲ್ಲಿ ತಿಳಿಸಿದ್ದರು. ನಾಡಿನ ವಿವಿಧ ಭಾಗಗಳ ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದರಲ್ಲದೆ, ಹಾಸ್ಯ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ ಮತ್ತು ಪ್ರಧಾನ ಕವಿಗೋಷ್ಠಿಯ ನಡೆಯಲಿದೆ ಎಂದರು.
ಇದನ್ನೂ ಓದಿ: Mysuru Dasara: ಮೈಸೂರು ದಸರಾ; ಟೂರ್ ಪ್ಯಾಕೇಜ್ ಘೋಷಣೆ, ‘ಡಬಲ್ ಡೆಕ್ಕರ್’ ಆಕರ್ಷಣೆ, ಬೆಲೆ ಇಷ್ಟು
ಉರ್ದು ಕವಿಗಳಾದ ಜೈಪುರದ ಲತಾ ಹಯಾ, ಕಡಪಾದಿಂದ ರಾಹಿ ಫಿದಾಯಿ, ದೆಹಲಿಯ ರಾಜು ರಿಯಾಜ್, ಹೈದರಾಬಾದ್‌ನ ಜಗ್ತಿಯಾಲ್ ಮತ್ತು ಶಹೀದ್ ಆದಿಲ್, ಭೋಪಾಲ್‌ನ ಶಬಾನಾ ಶಬಾನಂ, ತಮಿಳುನಾಡಿನ ರಾಹತ್ ಹಜರತ್ ಮತ್ತು ಮಹಾರಾಷ್ಟ್ರದ ಫಿರಾಜ್ ಶೋಲಾಪುರಿ ಭಾಗವಹಿಸಲಿದ್ದಾರೆ.