ಮೈಸೂರು: ಅರಣ್ಯ ಇಲಾಖೆಯ ಚಾಲಕನೊಬ್ಬ ಅಧಿಕಾರಿಯ ಕಿರುಕುಳವನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮದ ವಿನೋದ್ (24) ಆತ್ಮಹತ್ಯೆಗೆ (Mysore News) ಯತ್ನಿಸಿದವನು.
ವಿನೋದ್ ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್‌ನ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಕ್ರಿಮಿನಾಶಕ ಸೇವಿಸಿ ನಿತ್ರಾಣಗೊಂಡಿದ್ದ. ಇದನ್ನೂ ಗಮನಿಸಿದ ಇತರೆ ಸಹೋದ್ಯೋಗಿಗಳು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಜೀಪ್ ಡ್ರೈವರ್ ಆಗಿದ್ದ ವಿನೋದ್‌ಗೆ ಜೀಪ್ ಟೈರ್ ಪಂಚರ್ ಆಗಿದ್ದಕ್ಕೆ ಡಿಆರ್‌ಎಫ್‌ಒ ನವೀನ್ ಎಂಬಾತ ಹಲ್ಲೆ ಮಾಡಿದ್ದ. ಈ ಘಟನೆಯಿಂದ ಬೇಸೆತ್ತು ವಿನೋದ್ ಕ್ರಿಮಿನಾಶಕ ಸೇವಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Actor Nagabhushan: ರಕ್ಷಿತ್ ಶೆಟ್ಟಿ ಸಿನಿಮಾ ಬಿಡುಗಡೆ ದಿನವೇ ನಾಗಭೂಷಣ್ ಅಭಿನಯದ ʻಟಗರು ಪಲ್ಯʼ ರಿಲೀಸ್!
ಸರ್ಕಾರದ ಹಣ ದುರುಪಯೋಗ
ಇನ್ನು 15 ಮಂದಿ ಆನೆ ಕಾವಲು ಪಡೆಯಲ್ಲಿ 10 ಮಂದಿಯನ್ನು ನಿಯೋಜಿಸಿ ಉಳಿದ 6 ಮಂದಿ ತಮ್ಮ ಸಂಬಂಧಿಕರನ್ನೇ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದಾರೆ. ಅವರು ಕರ್ತವ್ಯಕ್ಕೆ ಬಾರದೆ ಇದ್ದರೂ ವೇತನ ನೀಡುತ್ತಿದ್ದಾರೆ ಎಂದು ಇತರೆ ತಂಡದ ಸದಸ್ಯರು ಆರೋಪಿಸಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಆನೆ ಕಾವಲು ಪಡೆ ತಂಡದ ಯುವಕರಿಗೆ ನವೀನ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಿ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಕಾವಲು ಪಡೆ ತಂಡದ ಸದಸ್ಯರು ಬೇಸರಗೊಂಡಿದ್ದಾರೆ.
ಈ ಬಗ್ಗೆ ನವೀನ್ ಕೂಡ ಪ್ರತಿಕ್ರಿಯಿಸಿದ್ದು, ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ಹಲ್ಲೆ ಮಾಡುವ ಹಕ್ಕು ನಮ್ಮಗಿಲ್ಲ. ಜೀಪ್ ಟೈರ್ ಪಂಚ್ ಆದಾಗ ನಿನ್ನದೆ ಜವಾಬ್ದಾರಿ ಎಂದು ಹೇಳಿದ್ದೆ ಅಷ್ಟೇ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಲು ಹೋಗಿದ್ದರು. ಆದರೆ ಅಲ್ಲಿ ಏನು ಆಯಿತೋ ಏನೋ, ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಘಟನೆ ಬೆನ್ನಲ್ಲೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ