Site icon Vistara News

Mysuru Pak : ಸಿದ್ದರಾಮಯ್ಯಗೆ ಸಿದ್ಧವಾಗುತ್ತಿದೆ 1,000 ಕೆ.ಜಿ. ತೂಕದ ಮೈಸೂರು ಪಾಕ್‌ ಹಾರ

mysuru-pak-Garland for siddaramaiah

ಮೈಸೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ನಾಯಕರಿಗೆ ವಿಭಿನ್ನ ಬಗೆಯ ಹಾರಗಳನ್ನು ಹಾಕುವ ಸಂಪ್ರದಾಯ ಜೋರಾಗಿದೆ. ಬೃಹತ್‌ ಹಾರಗಳಿಂದಲೇ ದಾಖಲೆ ಬರೆದಿರುವ ಜೆಡಿಎಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಇದೀಗ ಮೈಸೂರು ಪಾಕ್‌ ( Mysuru Pak) ಹಾರ ಸಿದ್ಧಪಡಿಸುತ್ತಿದ್ದಾರೆ.

ಸದ್ಯ ಮೈಸೂದು ಹಾಗೂ ಚಾಮರಾಜನಗರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ಈ ಬೃಹತ್‌ ಹಾರವನ್ನು ಮೈಸೂರಿನ ಧನರಾಜ್‌ ಎನ್ನುವವರು ಮಾಡಿಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಕಾಳಿಸಿದ್ದನ ಹುಂಡಿಯ ವ್ಯಾಪಾರಿ ಜೈ ಸ್ವಾಮಿಯವರ ತಂಡ ಸಿದ್ಧಪಡಿಸುತ್ತಿದೆ.

ಬೃಹತ್ ಹಾರಕ್ಕಾಗಿ ಬರೊಬ್ಬರಿ 750 ಕೆ.ಜಿ. ಮೈಸೂರು ಪಾಕ್ ಬಳಕೆ ಮಾಡಲಾಗಿದೆ. ಜತೆಗೆ 250ಕೆ.ಜಿ. ಹೂವು ಸೇರಿ 1,000 ಕೆ.ಜಿ. ತೂಕದ ಬೃಹತ್ ಹಾರ ಸಿದ್ಧವಾಗುತ್ತಿದೆ. ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಈ ಮೈಸೂರು ಪಾಕ್ ಹಾರ ನಿರ್ಮಾಣವಾಗುತ್ತಿದೆ. 20 ಜನರ ತಂಡದಿಂದ ಸುಮಾರು 15 ಗಂಟೆಗಳ ಪರಿಶ್ರಮದಿಂದ ಮೈಸೂರು ಪಾಕ್ ಹಾರ ತಯಾರಿಯಾಗಲಿದೆ.

ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಹಾರವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿ ನೆರೆಯುವ ಕಾರ್ಯಕರ್ತರಿಗೆ ಮೈಸೂರು ಪಾಕನ್ನು ಹಂಚಲಾಗುತ್ತದೆ.

Exit mobile version