Site icon Vistara News

ಪ್ರಲ್ಹಾದ ಜೋಶಿ, ಪ್ರತಾಪ್ ಸಿಂಹ ಸುಳ್ಳು Phd ಹೋಲ್ಡರ್ಸ್‌: ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಕಿಡಿ

ಎಂ. ಲಕ್ಷ್ಮಣ್‌

ಮೈಸೂರು: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ನಮ್ಮ ಅಭ್ಯರ್ಥಿ ಗೆದ್ದರೆ ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಮೋದಿ ಹೇಳಿದ್ದರ ಕುರಿತು ಸಂಸದರಾದ ಪ್ರಲ್ಹಾದ ಜೋಶಿ ಹಾಗೂ ಪ್ರತಾಪ್‌ ಸಿಂಹ ಉತ್ತರಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಕಿಡಿಕಾರಿದ್ದಾರೆ.

ದಕ್ಷಿಣ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು. ಮೋದಿ ಹೇಳಿರುವ ವಿಡಿಯೋ ನಮ್ಮ ಬಳಿಯೂ ಇದೆ. ಪ್ಯಾರಿಸ್ ಮಾಡಲು ಮೈಸೂರಿಗೆ ಮೋದಿ ಅವರ 8 ವರ್ಷದ ಕೊಡುಗೆ ಏನು ಎಂದು ಬಜೆಪಿಯ ಸುಳ್ಳು ಪಿಎಚ್‌ಡಿ ಹೋಲ್ಡರ್ಸ್‌ ಪ್ರಲ್ಹಾದ ಜೋಶಿ, ಪ್ರತಾಪ್ ಸಿಂಹ ಉತ್ತರಿಸಲಿ. ಹೆಚ್ಚುವರಿ ಟ್ರೈನ್ ತಂದಿರುವುದು ಕೊಡುಗೆ ಎಂದು ಹೇಳಿದ್ದಾರೆ. ಮೈಸೂರು- ಬೆಂಗಳೂರು ರಸ್ತೆ ಮೋದಿ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸ್ಪೀಚ್ ಅಂಡ್ ಹಿಯರಿಂಗ್ ₹150 ಕೋಟಿ ಕೊಟ್ಟಿದ್ದೀನಿ ಎನ್ನುತ್ತಾರೆ. ಇದೆಲ್ಲ ಸುಳ್ಳು ಮಾಹಿತಿಗಳು. ಮೈಸೂರಿಗೆ ಯೋಗ ಮಾಡಲು ಬರುವ ಮೋದಿ ಇವೆಲ್ಲದಕ್ಕೂ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದು ಮೋದಿ ಹೇಳಿಯೇ ಇಲ್ಲ ಎಂದ ಪ್ರತಾಪ್ ಸಿಂಹ

ಅಭಿವೃದ್ದಿ ವಿಚಾರದಲ್ಲಿ ಮೈಸೂರು 10 ವರ್ಷ ಹಿಂದಕ್ಕೆ ಹೋಗಿದೆ. ಇದೀಗ, ಪ್ಯಾರಿಸ್ ಮಾಡುತ್ತೇನೆ ಎಂದು ಮೋದಿ ಹೇಳಲೇ ಇಲ್ಲ ಎಂದು ಪ್ರತಾಪ್ ಸಿಂಹ ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನೂ ನಾವು ಹೇಳಿಲ್ಲ ಎಂದು ಹೇಳುತ್ತಾರೆ. ಇವರಿಗೆಲ್ಲಾ ಸುಳ್ಳು ಹೇಳುವುದೇ ಅಭ್ಯಾಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸಚಿವರಿಂದ ಬೆಂಬಲ?

ದಕ್ಷಿಣ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ನಾಲ್ಕು ಉಸ್ತುವಾರಿ ಸಚಿವರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಲಕ್ಷ್ಮಣ್ ಹೇಳಿರುವುದು ಅಚ್ಚರಿ ಮೂಡಿಸಿದೆ. ಸಚಿವ ನಾರಾಯಣಗೌಡ, ಎಸ್.ಟಿ. ಸೋಮಶೇಖರ್ ಅವರಿಂದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲ ಸಿಗಲಿದ್ದು, ಜಿ.ಮಾದೇಗೌಡ ಅವರ ಪುತ್ರ ಎನ್ನುವ ಕಾರಣಕ್ಕೆ ಸಚಿವರ ಮುಂದಿನ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದ್ದಾರೆ. ಈ ಇಬ್ಬರು ಸಚಿವರ ಜತೆಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಸಚಿವರಿಂದಲೂ ಕಾಂಗ್ರೆಸ್‌ಗೆ ಬೆಂಬಲ ಸಿಗುತ್ತಿದ್ದು, ಇನ್ನೂ ಕಾಂಗ್ರೆಸ್ ಸಂಪರ್ಕದಲ್ಲಿ ಅನೇಕ ನಾಯರಿದ್ದಾರೆ ಎಂದು ಲಕ್ಷ್ಮಣ್ ಹೇಳಿಕೆ ನೀಡಿದರು.

ಇದನ್ನೂ ಓದಿ | ಯೋಗದಿನದಲ್ಲಿ ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ: ಸಂಸದ ಪ್ರತಾಪ್‌ ಸಿಂಹ

Exit mobile version