ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಕಣ ಮತ್ತೊಮ್ಮೆ ರಣರಂಗವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದಲ್ಲೇ ಮುಂದುವರೆಯುತ್ತಿದಂತೆ ಕಂಗಾಲಾದ ವಿರೋಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಜಟಾಪಟಿಗೆ ಇಳಿದಿದ್ದಾರೆ.
ಜಿಟಿಡಿ, ಕುರುಬ ಸಮಾಜದವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಡಿದ್ದನ್ನು ಸಹಿಸದ ಸ್ವಜಾತಿ ಮುಖಂಡರು ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದ್ದಾರೆ. ಇದಕ್ಕೆ ತಿರುಗಿಬಿದ್ದಿರುವ ಗ್ರಾಮಸ್ಥರು, ಅಡ್ಡಿ ಪಡಿಸುತ್ತಿರುವವರಿಗೆ ಛೀಮಾರಿ ಹಾಕಿರುವ ಪ್ರಸಂಗ ಮೈಸೂರು ತಾಲ್ಲೂಕಿನ ದಡದಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು 36 ಸಾವಿರ ಮತಗಳ ಅಂತರದಿಂದ ಸೋಲಿಸಿದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿಯೂ ಜಿದ್ದಾಜಿದ್ದಿಗೆ ಕಾರಣವಾಗುವ ಲಕ್ಷಣಗಳು ಈಗಿನಿಂದಲೇ ಗೋಚರಿಸುತ್ತಿವೆ.
ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸದ ಹಾಗೂ ಕುರುಬ ಸಮಾಜದ ಮಹಿಳೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಡಿದ್ದನ್ನು ಸಹಿಸದೆ ಸ್ವಜಾತಿಯವರೇ ಗ್ರಾಮದ ಅಭಿವೃದ್ಧಿಗೆ ಅಡ್ಡಿಪಡಿದ ಪ್ರಸಂಗ ನಡೆದಿದೆ. ಗ್ರಾಮದ ಚರಂಡಿ, ಕಾಂಕ್ರೀಟ್ ರೋಡ್‌ಗಳ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ 50 ಲಕ್ಷ ರೂ. ಮಂಜೂರು ಮಾಡಲಾಗಿದೆ. ಈ ಕಾಮಗಾರಿಗಳ ಗುದ್ದಲಿಪೂಜೆಗಾಗಿ ಶಾಸಕ ಜಿ.ಟಿ.ದೇವೇಗೌಡ ಶನಿವಾರ ಗ್ರಾಮಕ್ಕೆ ತೆರಳಿದಾಗ ಮೂವರು ಕಾಂಗ್ರೆಸ್ ಸದಸ್ಯರು ಅಡ್ಡಿ ಮಾಡಿದ್ದಾರೆ. ಅದೇ ವೇಳೆಯಲ್ಲಿ ಗ್ರಾಮದ ಇತರರು ತಿರುಗುಬಿದ್ದಿದ್ದು, ಅಡ್ಡಿಪಡಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಮ್ಮತದಿಂದ ಬನ್ನಿ ಎಂದು ಹೇಳಿ ಗ್ರಾಮದಿಂದ ಶಾಸಕರು ತರಳುತ್ತಿದ್ದಂತೆ ಅಭಿವೃದ್ಧಿಗೆ ಅಡ್ಡಿ ಪಡಿಸಿದವರಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.
ಗ್ರಾಮದಲ್ಲಿ 5 ಮಂದಿ ಗ್ರಾಮ ಪಂಚಾಯತಿ ಸದಸ್ಯರಿದ್ದು, ಮೂವರು ಕಾಂಗ್ರೆಸ್ ಹಾಗೂ ಇಬ್ಬರು ಜೆಡಿಎಸ್ ಬೆಂಬಲಿತರು ಇದ್ದಾರೆ. ಕುರುಬ ಸಮಾಜ ಗ್ರಾಮದಲ್ಲಿ ಪ್ರಾಬಲ್ಯವಾಗಿದ್ದು, ಅದೇ ಸಮಾಜದ ಅನ್ನಪೂರ್ಣ ಉಮೇಶ್ ಎಂಬುವವರನ್ನು ಜಿ.ಟಿ.ದೇವೇಗೌಡರು ಅಧ್ಯಕ್ಷೆ ಆಗಿ ಮಾಡಿ ರಾಜಕೀಯ ತಂತ್ರ ಮಾಡಿದ್ದಾರೆ.
ಇದು ಅನ್ನಪೂರ್ಣ ಅವರ ಸ್ವಜಾತಿ ಸದಸ್ಯರ ಕಣ್ಣುಕುಕ್ಕುವಂತೆ ಮಾಡಿದ್ದು, ಅಭಿವೃದ್ಧಿ ಮಾಡಿದರೆ ಹೆಸರು ಬರುತ್ತದೆ ಎಂದು ಗ್ರಾಮದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಇದಕ್ಕೆ ನಾವು ಬಗ್ಗುವುದಿಲ್ಲ ಎಂದು ಅಧ್ಯಕ್ಷೆ ಅನ್ನಪೂರ್ಣ ಸೇರಿ ಗ್ರಾಮಸ್ಥರು ತಿರುಗೇಟು ನೀಡಿದ್ದಾರೆ.
ಈ ಬೆಳವಣಿಗೆಯಿಂದ ಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಜಟಾಪಟಿ ಶುರುವಾಗಿದ್ದು, ಕಾಂಗ್ರೆಸ್ ಮುಖಂಡರ ನಡೆ ಅವರಿಗೇ ತಿರುಗುಬಾಣವಾಗುತ್ತಿದೆ. ರಾಜಕೀಯ ಬಂದಾಗ ರಾಜಕೀಯ, ಅಭಿವೃದ್ಧಿ ಬಂದಾಗ ಅಭಿವೃದ್ಧಿ ಎನ್ನುತ್ತಿರುವ ಗ್ರಾಮಸ್ಥರು ಅಡ್ಡಿ ಪಡಿಸವವರಿಗೆ ಛೀಮಾರಿ ಹಾಕುತ್ತಿದ್ದಾರೆ.
ಇದನ್ನೂ ಓದಿ | Defection politics | ಜಿ.ಟಿ. ದೇವೇಗೌಡರ ಐವರು ಆಪ್ತ ನಾಯಕರು ಜೆಡಿಎಸ್‌ಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ ಫಿಕ್ಸ್