Site icon Vistara News

Rangayana row | ಸಿದ್ದರಾಮಯ್ಯ ಅವಹೇಳನ, ಇಂದು ರಂಗಾಯಣ ಮುಂದೆ ಪ್ರತಿಭಟನೆ

Rangayana row

ಮೈಸೂರು: ರಂಗಾಯಣದಲ್ಲಿ ನಡೆದ ನಾಟಕದಲ್ಲಿ ಮಾಜಿ‌ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಪ್ರದರ್ಶಿಸಿದ ಸಂಬಂಧ ಇಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಂಗಾಯಣದಲ್ಲಿ ನಡೆದ ʼಸಾಂಬಶಿವ ಪ್ರಹಸನʼ ನಾಟಕದಲ್ಲಿ ಅವಹೇಳನ ನಡೆಸಲಾಗಿತ್ತು. ಇದನ್ನು ವಿರೋಧಿಸಿ ರಾಜ್ಯ ಕುರುಬರ ಸಂಘ, ಜಿಲ್ಲಾ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ರಂಗಾಯಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.

ಬೆಳಗ್ಗೆ 10.30ಕ್ಕೆ ಓವಲ್ ಗ್ರೌಂಡ್‌ನಿಂದ ಮೆರವಣಿಗೆ ಮೂಲಕ ಹೊರಟು ರಂಗಾಯಣ ಮುತ್ತಿಗೆಗೆ ಯೋಜಿಸಲಾಗಿದೆ. ಸುಮಾರು 10 ಸಾವಿರ ಮಂದಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕೈ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಕಲಾಮಂದಿರ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 6ರಿಂದ‌ ಸಂಜೆ 6 ಗಂಟೆಯವರೆಗೆ 144 ಸಿಆರ್‌ಪಿಸಿ 1973 ರೀತ್ಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕಲಾಮಂದಿರದ ಬಳಿ ಪ್ರತಿಭಟನೆಗೆ ಅವಕಾಶವನ್ನು ಪೊಲೀಸರು ನಿರಾಕರಿಸಿದ್ದಾರೆ.

ಇದನ್ನೂ ಓದಿ | Rangayana row | ರಂಗಾಯಣಕ್ಕೆ ಡಬಲ್‌ ಟ್ರಬಲ್‌: ಒಂದೆಡೆ ಕಾಂಗ್ರೆಸ್‌ ಪ್ರತಿಭಟನೆ, ಇನ್ನೊಂದೆಡೆ ಸಿಡಿದೆದ್ದ ಕಂಬಾರ!

Exit mobile version