Site icon Vistara News

Shelter gumbaz |‌ ಗುಂಬಜ್‌ ಮಾದರಿ ಬಸ್‌ ನಿಲ್ದಾಣ ವಿವಾದಕ್ಕೆ ಅಂತ್ಯ ಹಾಡಲು ಶಾಸಕ ಎಸ್.ಎ ರಾಮ್‌ದಾಸ್‌ ಯತ್ನ

gumbaz

ಮೈಸೂರು: ಮೈಸೂರಿನಲ್ಲಿ ವಿವಾದಕ್ಕೀಡಾಗಿದ್ದ ಗುಂಬಜ್ ಮಾದರಿ ಬಸ್‌ ನಿಲ್ದಾಣ ವಿವಾದಕ್ಕೆ (Shelter gumbaz) ಅಂತ್ಯ ಹಾಡಲು ಶಾಸಕ ಎಸ್.ಎ.ರಾಮ್‌ದಾಸ್ ಯತ್ನಿಸಿದ್ದಾರೆ.
ಬಸ್ ಶೆಲ್ಟರ್ ಮೇಲಿದ್ದ ಮೂರು ಗುಂಬಜ್‌ ಮಾದರಿಗಳ ಪೈಕಿ ಒಂದನ್ನು ಉಳಿಸಿಕೊಂಡು, ಮತ್ತೆರಡು ಗುಂಬಜ್‌ಗಳನ್ನು ತೆರವುಗೊಳಿಸಲಾಗಿದೆ. ರಾತ್ರೋರಾತ್ರಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಶಾಸಕರ ಅನುದಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ಆದರೆ ನಿಲ್ದಾಣದ ವಿನ್ಯಾಸ ವಿವಾದ ಸೃಷ್ಠಿಸಿತ್ತು.
ಇದು ಮುಂದೆ ವಿವಾದಿತ ಜಾಗ ಆಗಬಾರದು. ಇದಕ್ಕಾಗಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಮಧ್ಯದ ಡೂಮ್ ಅನ್ನು ಉಳಿಸಿಕೊಳ್ಳಲು ಒಪ್ಪಿಗೆ ಪಡೆಯಲಾಗಿದೆ. ಸಾರ್ವಜನಿಕರು ನನ್ನ ಅಭಿವೃದ್ಧಿ ಮಂತ್ರವನ್ನು ಅನ್ಯತಾ ಭಾವಿಸಬಾರದು, ವಿವಾದ ಸಲ್ಲದು ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.

ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್‌.ಎ.ರಾಮದಾಸ್ ನಡುವೆ ಶೀತಲ ಸಮರ ಏರ್ಪಟ್ಟಿತ್ತು.

ಈ ನಡುವೆ ಸಂಸದ ಪ್ರತಾಪ್‌ ಸಿಂಹ ಅವರು ಮಾಡಿರುವ ಟ್ವೀಟ್‌ನಲ್ಲಿ, ಮಧ್ಯದಲ್ಲೊಂದು ದೊಡ್ಡ ಗುಂಬಜ್‌, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್‌ ಇದ್ದರೆ ಅದು ಮಸೀದಿನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದ ಜಿಲ್ಲಾಧಿಕಾರಿಗಳಿಗೆ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್‌ ಜಿ ಅವರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

Exit mobile version