ಮೈಸೂರು: ಕೊಡಗು ಮೈಸೂರು ಗಡಿಭಾಗವಾದ ಪೊನ್ನಪೇಂಟೆ ಸಮೀಪದ ಆಡುಗುಂಡಿ ಸಮೀಪ ಕಳೆದ ಹಲವು ವರ್ಷಗಳಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ನಿವಾಸಿಗಳು ಇದೀಗ ಪ್ರತಿಭಟನೆ ಮುಕ್ತಾಯಗೊಳಿಸಿದ್ದಾರೆ.
ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದೆಂದು ನಾಲ್ಕು ವರ್ಷಗಳ ಹಿಂದೆ ಆಡುಗುಂಡಿಯ ಅರಣ್ಯ ಪ್ರದೇಶದಲ್ಲಿದ ಆದಿವಾಸಿಗಳನ್ನ ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಅದರಂತೆ ಹಲವು ಭರವಸೆಗಳ ಮೂಲಕ ಅವರ ಮನವೊಲಿಸಿ ನೆರೆಯ ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲ್ಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿತು. ಆದರೆ ಸರಿಯಾದ ವ್ಯವಸ್ಥೆಗಳಿಲ್ಲದೆ, ಹಕ್ಕು ಪತ್ರಗಳನ್ನು ಕೊಡದ ಕಾರಣ ಆದಿವಾಸಿಗಳು ಮತ್ತೆ ತಮ್ಮ ಮೂಲ ನೆಲೆಯತ್ತ ಬಂದಿದ್ದರು.
ಇದನ್ನೂ ಓದಿ | ಶಾಲಾ ಪಾಠದಲ್ಲಿ RSS: ವಿವಾದಕ್ಕೊಳಗಾಗಿರುವ ಹೆಡಗೇವಾರ್ ಕುರಿತ ಪೂರ್ಣ ಪಠ್ಯ ಇಲ್ಲಿದೆ ನೋಡಿ!
ಅವರನ್ನು ಆಡುಗುಂಡಿ ಗೇಟ್ ಬಳಿ ಅಧಿಕಾರಿಗಳು ತಡೆಹಿಡಿದರು. ಆದರೂ ತಮ್ಮ ಮೂಲ ಸ್ಥಳಕ್ಕೆ ತೆರಳಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾಡಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಹಲವು ದಿನಗಳ ಕಾಲ ಟಾರ್ಪಲ್ ಹೊದಿಕೆ ಕಟ್ಟಿಕೊಂಡು ಹಗಲು ರಾತ್ರಿ ಎನ್ನದೆ ಮಳೆ ಗಾಳಿಯನ್ನು ಲೆಕ್ಕಿಸದೆ ರಾತ್ರಿ ಬೆಳಗೂ ಪ್ರತಿಭಟನೆಯನ್ನು ಮುಂದುವರಿಸಿದ್ದರು. ಮೊದಲು ಎರಡು ದಿನ ಯಾವುದೇ ಅಹಾರದ ಸಮಸ್ಯೆ ಎದುರಾಗಲಿಲ್ಲ. ತದ ನಂತರದಲ್ಲಿ ಪಕ್ಕದ ತೋಟಗಳಿಂದ ಹಲಸಿನ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡು ಹೋರಾಟ ನಡೆಸಿದ್ದರು. ಜಾಗ ಬಿಟ್ಟು ಕದಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಪೊಲೀಸರ ಮನವಿಗೂ ಬಗ್ಗಲಿಲ್ಲ.
ಇದೀಗ ಹುಣಸೂರಿನ ಮಾಸ್ತಿಗುಡಿಯ ಪುನರ್ವಸತಿ ಕೇಂದ್ರದಲ್ಲಿ 613 ಎಕರೆ ಕೃಷಿಜಾಗ ಸಮತಟ್ಟು ಮಾಡಲಾಗಿದ್ದು, ಪುನರ್ವಸತಿ ಕೇಂದ್ರದಲ್ಲಿರುವ 117 ಕುಟುಂಬಗಳಿಗೆ 3 ಎಕರೆ ಜಾಗಕ್ಕೆ ಆರ್.ಟಿ.ಸಿ ಕೊಡಲು ಮುಂದಾಗಿರುವುದರಿಂದ ಇದೀಗ ಆದಿವಾಸಿಗಳು ಹೊರಾಟವನ್ನು ಕೈ ಬಿಟ್ಟಿದ್ದಾರೆ. ಇದೀಗ ಮಾಸ್ತಿಗುಡಿ ಪುನರ್ವಸತಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ | 25ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪುರ ತಾಲೂಕು ಹೋರಾಟ: ಬೆಂಗಳೂರಲ್ಲಿ ಇಂದು ಸಿಎಂ ಭೇಟಿ