ಬೆಂಗಳೂರು: ಸಂಸ್ಕೃತಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಸೆ.18ರಂದು ಸಂಜೆ 6 ಗಂಟೆಗೆ ʼಹರಿದಾಸ ನೃತ್ಯ ಸಂಪದʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಯನಗರ 8ನೇ ಬ್ಲಾಕ್‌ನ ಜೆಎಸ್‌ಎಸ್ ಸ್ಕೂಲ್ ಆವರಣದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಕೇಂದ್ರದಲ್ಲಿ (ಜೆಎಸ್‌ಎಸ್ ಸಭಾಂಗಣ) ವಾರ್ಷಿಕ ಕಾರ್ಯಕ್ರಮವಾದ ʼನಾದ ನೂಪುರʼ ಹದಿನೇಳನೇ ಆವೃತ್ತಿ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಹರಿದಾಸರು ನೀಡಿರುವ ಕೊಡುಗೆಯ ಗೌರವಾರ್ಥವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಡಾ. ವಿದ್ಯಾ ರಾವ್ ಅವರ ಹರಿದಾಸ ಸಾಹಿತ್ಯದ ಸಂಶೋಧನೆಯ ಸಾರವನ್ನು ಆಧರಿಸಿ ಪ್ರತ್ಯೇಕವಾಗಿ ಕನ್ನಡ ಸಂಯೋಜನೆಗಳೊಂದಿಗೆ “ನಾದ ನೂಪುರ-ಹರಿದಾಸ ಸಂಪದ” ವಚನ ನೃತ್ಯ ರೂಪಕ (ಮಾರ್ಗ)ವನ್ನು ಆಯೋಜಿಸಲಾಗಿದೆ. ಸಂಸ್ಕೃತಿ ಕೇಂದ್ರದ ಸಂಸ್ಥಾಪಕ ನಿರ್ದೇಶಕಿ ಸುಚಿತ್ರಾ ಅಲಕಾನಂದ ನಿರ್ದೇಶನ ಮತ್ತು ನೃತ್ಯ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಅನೂರು ಅನಂತಕೃಷ್ಣ, ಯುನೆಸ್ಕೊ ಫೆಲೋಶಿಪ್ ಪುರಸ್ಕೃತ ಕಲಾ ಇತಿಹಾಸಕಾರರಾದ ಡಾ. ಚೂಡಾಮಣಿ ನಂದಗೋಪಾಲ್, ಸಮನ್ವಯ ಕಲಾ ಕೇಂದ್ರದ ಸಂಗೀತಗಾರ, ನಿರ್ದೇಶಕ, ತಿರುಮಲೆ ಶ್ರೀನಿವಾಸ್, ಜೈನ್ ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗದ ಮುಖ್ಯಸ್ಥೆ, ಸಂಶೋಧನಾ ವಿದ್ವಾಂಸೆ ಡಾ.ವಿದ್ಯಾ ರಾವ್, ಕೈಶಿಕಿ ನಾಟ್ಯವಾಹಿನಿ ಸ್ಥಾಪಕ ನಿರ್ದೇಶಕಿ ಕಲಾಯೋಗಿ ಗುರು ಡಾ. ಮಾಲಾ ಶಶಿಕಾಂತ್ ಆಗಮಿಸಲಿದ್ದಾರೆ.
ಇದನ್ನೂ ಓದಿ | Command Center | ಬಿಬಿಎಂಪಿಯ ಬಹು ನಿರೀಕ್ಷಿತ ಐಸಿಸಿಸಿ ಸೇವೆ ಅಕ್ಟೋಬರ್ 1ಕ್ಕೆ ಆರಂಭ!