Site icon Vistara News

Nagamangala Election Results: ನಾಗಮಂಗಲದಲ್ಲಿ ಕಾಂಗ್ರೆಸ್​ನ ಎನ್.ಚಲುವರಾಯಸ್ವಾಮಿಗೆ ಜಯ

nagamangala-nagamangala-assembly-election-results-nagamangala-assembly-results-chaluvanarayanaswamy

nagamangala-nagamangala-assembly-election-results-nagamangala-assembly-results-chaluvanarayanaswamy

ನೆಲಮಂಗಲ: ಮಂಡ್ಯ ಜಿಲ್ಲೆ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ನಾಗಮಂಗಲದಲ್ಲಿ (Nagamangala Election Results) ಕಾಂಗ್ರೆಸ್​ ಪಕ್ಷದ ಎನ್.ಚಲುವರಾಯಸ್ವಾಮಿ ಅವರು 7,800 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ಜೆಡಿಸ್​ ಪಕ್ಷದ ಸುರೇಶ್ ಕುಮಾರ್​ ಅಭ್ಯರ್ಥಿ ವಿರುದ್ಧ 7,800 ಮತಗಳ ಅಂತರದಿಂದ ಅವರು ಜಯಭೇರಿ ಬಾರಿಸಿದ್ದಾರೆ.

ಕಳೆದ ಬಾರಿಯ ಜೆಡಿಎಸ್‌ನ ಸುರೇಶ್ ಗೌಡ 1,12,396 ಮತ್ತು ಕಾಂಗ್ರೆಸ್‌ನ ಎನ್ ಚೆಲುವರಾಯಸ್ವಾಮಿ 64,729 ಮತಗಳನ್ನು ಪಡೆದಿದ್ದರು. 47,667 ಮತಗಳ ಅಂತರದಲ್ಲಿ ಸುರೇಶ್ ಗೌಡ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಮೊಗಸಾಲೆ ಅಂಕಣ: ನಿನ್ನೆವರೆಗೂ ಮತದಾರರೇ ಗತಿ, ಇಂದು ದೇವರೇ ಗತಿ

ಜೆಡಿಎಸ್‌ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ತಮ್ಮ ಪತ್ನಿ ಸುಧಾ ಶಿವರಾಮೇಗೌಡರನ್ನ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಸ್ವಲ್ಪ ಜೆಡಿಎಸ್ ಆತಂಕಕ್ಕೆ ಕಾರಣವಾಗಿತ್ತು. ಜತೆಗೆ ಫೈಟರ್ ರವಿ ಕೂಡ ಪಕ್ಷೇತರರಾಗಿ ಕಣದಲ್ಲಿದ್ದರು.

ನಾಗಮಂಗಲದಲ್ಲಿ ಒಟ್ಟು 2,14,202 ಮತದಾರರಿದ್ದಾರೆ. ಇವರಲ್ಲಿ 1,07,115 ಪುರುಷರು ಹಾಗೂ 1,07,075 ಮಹಿಳೆಯರಿದ್ದಾರೆ.

Exit mobile version