Site icon Vistara News

Namma Metro Pillar | ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿತ: ಬೈಕ್‌ನಲ್ಲಿ ತೆರಳುತ್ತಿದ್ದ ಅಮ್ಮ, ಮಗು ದುರ್ಮರಣ

ಬೆಂಗಳೂರು: ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ಮುಂಜಾನೆ ದಿಢೀರ್‌ ಕುಸಿದಿದ್ದು (Namma Metro Pillar) ಬೈಕ್‌ನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಪುಟ್ಟ ಮಗು ಸಾವನ್ನಪ್ಪಿದ್ದಾರೆ.

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗಳ ಮೇಲೆಯೇ ಪಿಲ್ಲರ್‌ ಉರುಳಿತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಬ್ಬರೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತೇಜಸ್ವಿನಿ (೨೮) ಮತ್ತು ಎರಡು ವರ್ಷ ಆರು ತಿಂಗಳ ಮಗು ವಿಹಾನ್‌ ಮೃತಪಟ್ಟ ದುರ್ದೈವಿಗಳು.

ಗಂಭೀರ ಗಾಯಗೊಂಡಿರುವ ತಾಯಿ-ಮಗಳನ್ನು ಸ್ಥಳೀಯರು ಆಲ್ಟಿಯಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ತೇಜಸ್ವಿನಿ ಅವರ ಪತಿಗೂ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Robbery case | ಮಗಳನ್ನು ನೋಡಲೆಂದು ಬಂದು ದರೋಡೆಕೋರನಾದ ತಂದೆ; ಉಂಡೂ ಹೋದ ಕೊಂಡೂ ಹೋದವನು ಜೈಲಿಗೆ!

Exit mobile version