Site icon Vistara News

ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರಲಿದ್ದಾರೆ: ನಳಿನ್‌ ಕುಮಾರ್ ಕಟೀಲ್‌

Nalin kumar Kateel

ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣ ಪುನಃ ತೆರೆದು ತನಿಖೆಯನ್ನು ಮಾಡಿಸಲಾಗುತ್ತದೆ. ಅಕ್ರಮದಲ್ಲಿ ಸಿದ್ದರಾಮಯ್ಯ ಸೇರಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರು ಜೈಲು ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಇಳಕಲ್ ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಅರ್ಕಾವತಿ ಪ್ರಕರಣದ ತನಿಖೆಯನ್ನು ನಾವು ಪೂರ್ಣಗೊಳಿಸುತ್ತೇವೆ. ಆಗ ಯಾರೆಲ್ಲ ಒಳಗೆ ಹೋಗುತ್ತಾರೆ ಎಂಬುವುದು ಬಹಿರಂಗ ಆಗುತ್ತದೆ. ಪ್ರಕರಣದ ತನಿಖೆ ಮಾಡಿಸಲು ನ್ಯಾಯಾಲಯದ ಮೂಲಕ ಹೋಗುತ್ತೇವೆ. ಈ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತದ ಮೂಲಕ 52 ಕೇಸ್‌ಗಳು ಹೊರಗೆ ಬರುತ್ತವೆ. ಈ ಮೂಲಕ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ನನ್ನ ಕಂಡರೆ ಬಿಜೆಪಿಗೆ ಭಯ, ಅದಕ್ಕೆ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಣ್ಣ ಅವರನ್ನು ಕಂಡರೆ ಯಾರಿಗೆ ಭಯ ಆಗಬೇಕು? ಡಿಕೆಶಿ, ಖರ್ಗೆ, ಪರಮೇಶ್ವರ ಅವರಿಗೆ ಭಯ ಆಗಬೇಕು. ನಾವು ಈಗಾಗಲೇ ಇವರ ಮುತ್ತಾತ ನೆಹರು ವಿರುದ್ಧ ಹೋರಾಟ ಮಾಡಿದ್ದೇವೆ. ನಾವೇಕೆ ಭಯಪಡಬೇಕು. ಇವತ್ತು ಕಾಂಗ್ರೆಸ್ ಮುಕ್ತ ಭಾರತ ಆಗಿದೆ. ಸಿದ್ದರಾಮಣ್ಣ ಮುಂದಿನ ಚುನಾವಣೆಯಲ್ಲಿ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಹೇಳಿದರು.‌

ಇದನ್ನೂ ಓದಿ | ಮಂಡ್ಯದಲ್ಲಿ ಶುರುವಾಯ್ತು ಪೇಎಂಎಲ್ಎ, ಪೇ ಎಕ್ಸ್‌ ಎಂಎಲ್ಎ ಅಭಿಯಾನ

Exit mobile version