ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ… ಪಕ್ಷದ ಕಾಂಗ್ರೆಸ್ನ ದರ್ಶನ್ (108582) ಗೆಲುವು ಸಾಧಿಸಿದ್ದಾರೆ. ಅವರು ನಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹರ್ಷವರ್ಧನ್ (61114) ವಿರುದ್ಧ 47468 ಮತಗಳ ಅಂತರದಿಂದ ವಿಜಯ ಸಾಧಿಸಿದರು. 2018ರ ಚುನಾವಣೆಯಲ್ಲಿ ಹಾಲಿ ಶಾಸಕ ಹರ್ಷವರ್ಧನ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆ ಮೂಲಕ, ನಂಜನಗೂಡಿನಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿತ್ತು.
2017ರಲ್ಲಿ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಳಲೆ ಕೇಶವಮೂರ್ತಿ ಎದುರು ಶ್ರೀನಿವಾಸ ಪ್ರಸಾದ್ 21334 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದುವರೆಗೂ 14 ಶಾಸಕರನ್ನು ಆಯ್ಕೆ ಮಾಡಿರುವ ನಂಜನಗೂಡು ಕ್ಷೇತ್ರವನ್ನು 09 ಬಾರಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸಿದ್ದಾರೆ. ಜನತಾ ಪಕ್ಷ, ಜನತಾ ದಳ, ಜೆಡಿಎಸ್, ಬಿಜೆಪಿ ಹಾಗೂ ಸ್ವತಂತ್ರ ಶಾಸಕರು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ.
ಕ್ಷೇತ್ರದಲ್ಲಿ ಮೊದಲ ಬಾರಿಗೆ 1957ರಲ್ಲಿ ಚುನಾವಣೆ ನಡೆದಿತ್ತು. ಅಂದಿನಿಂದ 2008ರವರೆಗೂ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಉಳಿದಿತ್ತು. 1957ರ ಮೊದಲ ಚುನಾವಣೆಯಲ್ಲಿ ದೇಶದಲ್ಲಿಯೇ ಸಾರ್ವಭೌಮ ಪಕ್ಷವಾಗಿದ್ದ ಕಾಂಗ್ರೆಸ್ ಗೆದ್ದುಕೊಂಡಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ ಮಹದೇವಯ್ಯ ಗೆಲುವು ಸಾಧಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನಿಂದ ಎನ್ ರಾಚಯ್ಯ, 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಎಲ್ ಶ್ರೀಕಂಠಯ್ಯ ಗೆದ್ದಿದ್ದರು. 1972 ಮತ್ತು 78ರಲ್ಲಿ ಕೆ.ಬಿ ಶಿವಯ್ಯ, 1983ರಲ್ಲಿ ಎಂ ಮಹದೇವ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಗೆದ್ದು ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ನಂಜನಗೂಡು ಕ್ಷೇತ್ರದಲ್ಲಿ ದಲಿತ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸಿದೆ. ಕ್ಷೇತ್ರದಲ್ಲಿ ಸುಮಾರು 2,22,457 ಮತದಾರರಿದ್ದಾರೆ. ಅವರಲ್ಲಿ 87 ಸಾವಿರ ದಲಿತರು, 53 ಸಾವಿರ ಪರಿಶಿಷ್ಟ ಪಂಗಡದವರು, 31 ಸಾವಿರ ಮುಸ್ಲಿಮರು ಮತ್ತು ಇತರ ಜಾತಿಗಳ 25 ಸಾವಿರ ಮಂದಿ ಮತದಾರರಿದ್ದಾರೆ.