Site icon Vistara News

swabhimani hindu | ಸತೀಶ್‌ ಜಾರಕಿಹೊಳಿ ʻಕೀಳುʼ ಹೇಳಿಕೆ ವಿರುದ್ಧ ಬಿಜೆಪಿಯಿಂದ ನಾನು ಸ್ವಾಭಿಮಾನಿ ಹಿಂದು ಅಭಿಯಾನ

ಬೆಂಗಳೂರು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ಹಿಂದು ಶಬ್ದವನ್ನು ʻಕೀಳಾಗಿʼ ವ್ಯಾಖ್ಯಾನಿಸಿದ್ದಕ್ಕೆ ತಿರುಗೇಟು ನೀಡಲು ಬಿಜೆಪಿ ಅಭಿಯಾನವೊಂದಕ್ಕೆ ಸಿದ್ಧವಾಗಿದೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವರಾಗಿರುವ ಸುನಿಲ್‌ ಕುಮಾರ್‌ ಅವರು ಟ್ವಿಟರ್‌ನಲ್ಲಿ ಪೋಸ್ಟರ್‌ ಒಂದನ್ನು ಹಾಕಿಕೊಂಡಿದ್ದು, ʻನಾನು ಸ್ವಾಭಿಮಾನಿ ಹಿಂದುʼ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದರ ಜತೆಗೆ ಸತೀಶ್‌ ಜಾರಕಿಹೊಳಿ ಹಾಗೂ ಕಾಂಗ್ರೆಸ್‌ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, ʻʻಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದರ ಅರ್ಥ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು. ಎಲ್ಲಿಯದೋ ಶಬ್ದ ತಂದು ಹೇರುತ್ತಿದ್ದೀರ. ಇದರ ಬಗ್ಗೆ ಚರ್ಚೆ ಆಗಬೇಕು. ಇತಿಹಾಸ ತಿಳಿದವರು ಮಾತ್ರ ಇತಿಹಾಸವನ್ನು ರಚಿಸಬಹುದು. ಇತಿಹಾಸವನ್ನು ಮೊದಲು ತಿಳಿಯಿರಿʼʼ ಎಂದು ನೆರೆದಿದ್ದ ಜನರಿಗೆ ಹೇಳಿದ್ದರು. ಅವರ ಈ ಮಾತು ಭಾರಿ ವಿವಾದ ಸೃಷ್ಟಿಸಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಇದನ್ನು ಖಂಡಿಸಿದ್ದಾರೆ. ಇದಾದ ಬಳಿಕ ಸತೀಶ್‌ ಜಾರಕಿಹೊಳಿ ಅವರು ತಮ್ಮ ಮಾತನ್ನು ಹಿಂದಕ್ಕೆ ಪಡೆದಿದ್ದಾರೆ.

ಸುನಿಲ್‌ ಕುಮಾರ್‌ ಹೇಳಿದ್ದೇನು?
೧. ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದ ನೆಹರು ಅವರ ಹಾದಿಯಲ್ಲಿಯೇ ಕಾಂಗ್ರೆಸ್ ಇಷ್ಟು ವರ್ಷದಿಂದ ಸಾಗುತ್ತಿದೆ. ಹಿಂದೂ ಧರ್ಮ,ಹಿಂದೂಗಳು,ಹಿಂದುತ್ವ ಹಾಗೂ ಹಿಂದುತ್ವ ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗ ಹತ್ತಿಕ್ಕಲು ಯತ್ನಿಸಿದೆ. ಸತೀಶ್‌ ಜಾರಕಿಹೊಳಿ ಹೇಳಿಕೆ ಈ ಪರಂಪರೆಯ ಮುಂದುವರಿದ ಭಾಗವಾಗಿದೆ.

೨. ಸತೀಶ್‌ ಜಾರಕಿಹೊಳಿಗೆ ಹಿಂದೂ ಶಬ್ದ ಅಶ್ಲೀಲ, ಸಿದ್ದರಾಮಯ್ಯರಿಗೆ ಕೇಸರಿ-ತಿಲಕ ಕಂಡರೆ ಭಯ, ದೈವಾರಾಧನೆ ಹಾಗೂ ತೀರ್ಥ ಬಿ.ಟಿ. ಲಲಿತಾ ನಾಯಕ್‌ರಿಗೆ ವಾಕರಿಕೆ ತರಿಸಿದರೇ, ಡಿ.ಕೆ. ಶಿವಕುಮಾರ್‌ ಅವರಿಗೆ ಮುಸ್ಲಿಮರು ಸಹೋದರರು, ಎಂ.ಬಿ. ಪಾಟೀಲ್‌ಗೆ ಹಿಂದು ಧರ್ಮದ ಅಖಂಡತೆ ಒಡೆಯುವ ಯೋಚನೆ. ಇದು ಕಾಂಗ್ರೆಸ್ ನಾಯಕರ ಒಳಮನಸ್ಸಿನ ಹಿಂದು ವಿರೋಧಿ ನಿಲುವನ್ನು ಸೂಚಿಸುತ್ತದೆ.

೩. ಭಾರತ್ ಜೋಡೊ ಯಾತ್ರೆ ಹೆಸರಿನಲ್ಲಿ ರಾಹುಲ್‌ ಗಾಂಧಿ ನಡೆಸಿದ ಪಾದಯಾತ್ರೆ ಬಳಿಕ ಕಾಂಗ್ರೆಸ್ ನಾಯಕರ ಹಿಂದು ವಿರೋಧಿ ಹೇಳಿಕೆಗಳು ಮಿತಿ ಮೀರಿವೆ. ಕಾಂಗ್ರೆಸ್ ನಡೆಸುವ ಎಲ್ಲಾ ಯಾತ್ರೆಗಳ ಹಿಂದಿನ ಉದ್ದೇಶ ಹಿಂದು ದ್ವೇಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಅಧಿನಾಯಕರ ಒಳಮನಸ್ಸಿನ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ನೀಡಿದ್ದಾರೆ.
೪, ಹಿಂದುತ್ವ ಎಂಬ ಜೀವನ ಪದ್ದತಿಯನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಸಂಪೂರ್ಣ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು.ಇದು ವೈಯುಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ಸುರ್ಜೆವಾಲಾ ರವರ ನಾಟಕವನ್ನು ಹಿಂದುಗಳು ಒಪ್ಪುವುದಿಲ್ಲ. ಭಾರತೀಯತೆಗೆ ಅಪಮಾನ ಮಾಡಿರುವ ನಿಮ್ಮ ನಾಟಕಕ್ಕೆ ಎಂದಿಗೂ ಕ್ಷಮೆ ಇಲ್ಲ.

ಚಿಕ್ಕೋಡಿ: ಹಿಂದು ಶಬ್ದ ಪರ್ಷಿಯಾದಿಂದ ಬಂದಿರುವುದು ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಇದಕ್ಕೆ ಅತ್ಯಂತ ಕೀಳು ಅರ್ಥವಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಹಿಂದಿಯಲ್ಲಿ ಈ ಕುರಿತು ಮಾತನಾಡಿರುವ ಜಾರಕಿಹೊಳಿ, ಇತಿಹಾಸದ ಕುರಿತು ಮಾತನಾಡಲು ಸಿನಿಮಾ ಉದಾಹರಣೆ ನೀಡಿದರು. ಸಿನಿಮಾದಲ್ಲಿ ಒಬ್ಬೊಬ್ಬರು ಒಂದೊಂದು ಕಡೆ ಬಂದಿರುತ್ತಾರೆ. ಒಬ್ಬರು ಪ್ರಾರಂಭದಲ್ಲಿ ಬಂದಿರುತ್ತಾರೆ, ಕೆಲವರು ಮಧ್ಯದಲ್ಲಿ ಬಂದಿರುತ್ತಾರೆ. ಅದಕ್ಕೇ ಸಿನಿಮಾವನ್ನು ಮೊದಲಿನಿಂದ ನೋಡಬೇಕು. ಆಗ, ಮೂಲನಿವಾಸಿ ಯಾರು, ನಂತರ ಬಂದವರು ಯಾರು? ಎಂದು ತಿಳಿಯುತ್ತದೆ ಎಂದರು.

ಹಿಂದು ಧರ್ಮ, ಆ ಧರ್ಮ ಈ ಧರ್ಮ ಎನ್ನುತ್ತಾರೆ. ಹಿಂದು ಶಬ್ದ ಎಲ್ಲಿಂದ ಬಂತು? ಪರ್ಷಿಯನ್‌ನಿಂದ ಬಂತು. ಅಂದರೆ ಇರಾನ್‌, ಇರಾಕ್‌, ಕಜಖ್‌ಸ್ತಾನದಿಂದ ಬಂದಿದ್ದು. ಭಾರತದ ಜತೆಗೆ ಇದಕ್ಕೆ ಏನು ಸಂಬಂಧ? ಇದರ ಬಗ್ಗೆ ಚರ್ಚೆ ಆಗಬೇಕು. ಈ ಶಬ್ದ ಎಲ್ಲಿಂದ ಬಂತು ಎಂಬುದರ ಕುರಿತು ವಾಟ್ಸ್‌ಆ್ಯಪ್‌, ಯೂಟ್ಯೂಬ್‌ನಲ್ಲಿ ನೋಡಿ.

ಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದರ ಅರ್ಥ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು. ಎಲ್ಲಿಯದೋ ಶಬ್ದ ತಂದು ಹೇರುತ್ತಿದ್ದೀರ. ಇದರ ಬಗ್ಗೆ ಚರ್ಚೆ ಆಗಬೇಕು. ಇತಿಹಾಸ ತಿಳಿದವರು ಮಾತ್ರ ಇತಿಹಾಸವನ್ನು ರಚಿಸಬಹುದು. ಇತಿಹಾಸವನ್ನು ಮೊದಲು ತಿಳಿಯಿರಿ ಎಂದು ನೆರೆದಿದ್ದ ಜನರಿಗೆ ತಿಳಿಸಿದರು.

ಇದನ್ನೂ ಓದಿ | ʼಹಿಂದು ಪದಕ್ಕೆ ಕೀಳು ಅರ್ಥವಿದೆʼ: ಬೇಕಿದ್ದರೆ ವಾಟ್ಸ್‌ಆ್ಯಪ್‌, ಯೂಟ್ಯೂಬ್‌ ನೋಡಿ ಎಂದ ಸತೀಶ್‌ ಜಾರಕಿಹೊಳಿ

Exit mobile version