Site icon Vistara News

ಕರ್ನಾಟಕದ ಶ್ರೀಗಂಧದಿಂದ ಕೆತ್ತಿದ ಬುದ್ಧನ ಮೂರ್ತಿಯನ್ನು ಜಪಾನ್‌ ಪ್ರಧಾನಿಗೆ ಉಡುಗೊರೆ ನೀಡಿದ ಮೋದಿ, ಏನಿದರ ವೈಶಿಷ್ಟ್ಯ?

Narendra Modi Modi Gifts Japan PM Sandalwood Lord Buddha Statue From Karnataka

Narendra Modi Modi Gifts Japan PM Sandalwood Lord Buddha Statue From Karnataka

ನವದೆಹಲಿ: ಭಾರತಕ್ಕೆ ಆಗಮಿಸಿರುವ ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಉಡುಗೊರೆ ನೀಡಿದ್ದಾರೆ. ಅದರಲ್ಲೂ, ಕರ್ನಾಟಕದ ಶ್ರೀಗಂಧದ ಮರದಿಂದ ಕೆತ್ತನೆ ಮಾಡಲಾದ ಗೌತಮ ಬುದ್ಧನ ಮೂರ್ತಿಯನ್ನು ನರೇಂದ್ರ ಮೋದಿ ಅವರು ಉಡುಗೊರೆ ನೀಡಿರುವುದು ವಿಶೇಷವಾಗಿದೆ. ಕದಮ್‌ವುಡ್‌ ಜಾಲಿ ಬಾಕ್ಸ್‌ನಲ್ಲಿ ಉಡುಗೊರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಶತಮಾನಗಳಿಂದಲೂ ಶ್ರೀಗಂಧದ ಮರದಿಂದ ಮೂರ್ತಿಗಳನ್ನು ಕೆತ್ತುವುದು ರೂಢಿಯಿದೆ. ಈ ಕಲೆಗೆ, ಶ್ರೀಗಂಧದ ಮರದಲ್ಲಿ ಕೆತ್ತಿದ ಮೂರ್ತಿಗೆ ವಿಶೇಷ ಗೌರವವೂ ಇದೆ. ಹಾಗಾಗಿಯೇ, ಮೋದಿ ಅವರು ಕಿಶಿದಾ ಅವರಿಗೆ ಶ್ರೀಗಂಧದ ಮರದಲ್ಲಿ ಕೆತ್ತಿದ, ಧ್ಯಾನದ ಭಂಗಿಯಲ್ಲಿರುವ ಬುದ್ಧನ ಮೂರ್ತಿಯನ್ನು ಉಡುಗೊರೆ ನೀಡಿದ್ದಾರೆ. ಮೂರ್ತಿಯ ಹಿಂಬದಿಯೂ ಕೆತ್ತನೆ ಮಾಡಲಾಗಿದ್ದು, ಕರ್ನಾಟಕದ ಕಲೆಯ ಶ್ರೇಷ್ಠ ಕುಸುರಿಯಾಗಿದೆ.

ಉಡುಗೊರೆಯ ವೈಶಿಷ್ಟ್ಯವೇನು?

ಜಪಾನ್‌ ಪ್ರಧಾನಿಗೆ ನರೇಂದ್ರ ಮೋದಿ ನೀಡಿರುವ ಉಡುಗೊರೆಯು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಶುದ್ಧವಾದ ಶ್ರೀಗಂಧದಿಂದ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ತಜ್ಞ ಕುಶಲಕರ್ಮಿಗಳು ಇದನ್ನು ಕೆತ್ತನೆ ಮಾಡಿದ್ದಾರೆ. ಧ್ಯಾನದ ಭಂಗಿಯಲ್ಲಿ ಕುಳಿತ, ಮೂರ್ತಿಯ ಹಿಂಬದಿಯಲ್ಲಿ ಬೋಧಿ ವೃಕ್ಷವನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದೆ. ಕರ್ನಾಟಕವು ಶ್ರೀಗಂಧದ ನೆಲೆವೀಡಾಗಿದ್ದು, ಶತಮಾನಗಳ ಹಿಂದಿನಿಂದಲೂ ಶ್ರೀಗಂಧದ ಮರಗಳಿಂದ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಲಾಗುತ್ತಿದೆ.

ಮೋದಿ ನೀಡಿದ ಉಡುಗೊರೆಯ ಮತ್ತಷ್ಟು ಮಾಹಿತಿ

ಗೋಲ್‌ಗಪ್ಪ ಸವಿದ ಮೋದಿ-ಕಿಶಿದಾ

ನರೇಂದ್ರ ಮೋದಿ ಹಾಗೂ ಫುಮಿಯೊ ಕಿಶಿದಾ ಅವರ ದೆಹಲಿಯಲ್ಲಿರುವ ಬುದ್ಧ ಜಯಂತಿ ಪಾರ್ಕ್‌ಗೆ ಭೇಟಿ ನೀಡಿದ್ದು, ಇದೇ ವೇಳೆ ಇಬ್ಬರೂ ಗೋಲ್‌ಗಪ್ಪ ಸವಿದಿದ್ದಾರೆ. ಈ ಫೋಟೊಗಳನ್ನು ನರೇಂದ್ರ ಮೋದಿ ಅವರೇ ಟ್ವೀಟ್‌ ಮಾಡಿದ್ದಾರೆ. ಭಾರತ ಹಾಗೂ ಜಪಾನ್‌ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಫುಮಿಯೊ ಕಿಶಿದಾ ಅವರು ಭಾರತಕ್ಕೆ ಆಗಮಿಸಿದ್ದಾರೆ. ಭಾರತ ಮತ್ತು ಜಪಾನ್‌ ನಡುವಿನ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮೋದಿ ಹಾಗೂ ಕಿಶಿದಾ ಅವರು ಪರಸ್ಪರ ಸಹಕಾರದೊಂದಿಗೆ ಮುಂದುವರಿಯುವ ವಾಗ್ದಾನ ಮಾಡಿದ್ದಾರೆ.

ಫುಮಿಯೊ ಅವರು ಸೋಮವಾರ ಬೆಳಗ್ಗೆ ದೆಹಲಿಗೆ ಬಂದಿದ್ದು, ಸುಮಾರು 27 ಗಂಟೆಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿರಲಿದ್ದಾರೆ.

ಗೋಲ್‌ಗಪ್ಪ ತಿಂದ ವಿಡಿಯೊ

ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧ ವೃದ್ಧಿ ದೃಷ್ಟಿಯಿಂದ ಉಭಯ ನಾಯಕರ ಭೇಟಿಯು ಮಹತ್ವ ಪಡೆದಿದೆ.

ಕರ್ನಾಟಕ ಬಿಜೆಪಿ ಟ್ವೀಟ್

ಇದನ್ನೂ ಓದಿ: India and Japan: ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ವಿಸ್ತರಿಸಲು ಒಂದಾದ ಜಪಾನ್ ಮತ್ತು ಭಾರತ ಪ್ರಧಾನಿಗಳು

Exit mobile version