ಹಾಸನ: ಹಾಸನ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿದಿನ ರಾಷ್ಟ್ರಗೀತೆಯನ್ನು (National Anthem) ಹಾಡಲೇಬೇಕು. ಬೆಳಗ್ಗೆ 9.30ರೊಳಗೆ ರಾಷ್ಟ್ರಗೀತೆ ಹಾಡಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಹಾಸನ ಡಿವೈಎಸ್‌ಪಿ ಉದಯ್ ಭಾಸ್ಕರ್ ಆದೇಶ ಹೊರಡಿಸಿದ್ದು, ಪೊಲೀಸರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಾಸನ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಪ್ರತಿದಿನ ರಾಷ್ಟ್ರಗೀತೆಯನ್ನು ಹಾಡಲು ಸೂಚನೆ ನೀಡಲಾಗಿದ್ದು, ಮಂಗಳವಾರ (ಆ.೧೬) ದಿಂದ ಪ್ರಾರಂಭವಾಗಲಿದೆ.
ಹಾಸನ ಉಪವಿಭಾಗದ 9 ಪೊಲೀಸ್ ಠಾಣೆಗಳಲ್ಲಿ ಪೊಲೀಸರು ರಾಷ್ಟ್ರಗೀತೆ ಹಾಡಲಾಗಿದೆ. ಡಿವೈಎಸ್ಪಿ ಆದೇಶವನ್ನು ಪಾಲಿಸುತ್ತಿದ್ದು, ರಾಷ್ಟ್ರಗೀತೆ ಹಾಡಿದ್ದಾರೆ.
ಇದನ್ನೂ ಓದಿ | Independence day | ಕೆರೆ ಮಧ್ಯೆ ಧ್ವಜ ನೆಟ್ಟು ತೆಪ್ಪದಲ್ಲಿ ನಿಂತು ಸೆಲ್ಯೂಟ್ ಮಾಡಿದ ಮೀನುಗಾರರು