Site icon Vistara News

National Flag | ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಪೀಠದಲ್ಲಿ ಹಾರಾಡಿದ ರಾಷ್ಟ್ರ ಧ್ವಜ!

dattapeta_flag

ಚಿಕ್ಕಮಗಳೂರು: ಈ ಬಾರಿಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಲವಾರು ಇತಿಹಾಸಗಳಿಗೆ ಸಾಕ್ಷಿಯಾಗುತ್ತಲೇ ಬಂದಿದ್ದು, ಇಲ್ಲಿನ ದತ್ತಾತ್ರೇಯ ಪೀಠದಲ್ಲಿ ಇದೇ ಮೊದಲ ಬಾರಿಗೆ ತ್ರಿವರ್ಣ ಧ್ವಜ (National Flag) ಹಾರಾಡುವ ಮೂಲಕ ಇತಿಹಾಸವನ್ನು ಬರೆದಿದೆ.

ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಕ್ಕೆ ಕೇಸರಿ ರಕ್ಷೆ ಕಟ್ಟಿದ ಭಜರಂಗದಳ ಕಾರ್ಯಕರ್ತರು ಮೊದಲ ಬಾರಿಗೆ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಿದರು. ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಭಾಗಿಯಾಗಿದ್ದರು.

ಧ್ವಜದ ಕಂಬಕ್ಕೆ ಕೇಸರಿ ರಕ್ಷೆ ಕಟ್ಟಿದ ಹಿಂದುಪರ ಸಂಘಟನೆ ಕಾರ್ಯಕರ್ತರು, ಭಾರತಾಂಬೆಗೆ ಜೈಘೋಷ ಕೂಗಿದರು. ಬಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Amrith Mahotsav | ತ್ರಿವರ್ಣ ಧ್ವಜ ಏಕೆಂದು ಪತ್ರ ಬರೆದಿದ್ದ ಸಿಎಂ; 13 ಪ್ರಶ್ನೆ ಕೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ!

Exit mobile version