ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವಜನೋತ್ಸವ (National Youth Festival) ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದು, ಭವ್ಯ ಸ್ವಾಗತ ಕೋರಲಾಯಿತು. ಮೋದಿ ಅವರನ್ನು ನೋಡಲು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಕ್ಷಯ ಪಾರ್ಕ್‌ವರೆಗೆ ೮ ಕಿ.ಮೀ. ವರೆಗೆ ಜನಸ್ತೋಮವೇ ಸೇರಿದೆ. ಪ್ರಧಾನಿ ಸಹ ರೋಡ್ ಶೋ ನಡೆಸುತ್ತಿದ್ದು, ಇವರನ್ನು ನೋಡಲು ೮೦ ವರ್ಷದ ವೃದ್ಧರೊಬ್ಬರು ಮರವನ್ನೇ ಏರಿ ಕುಳಿತು ಗಮನ ಸೆಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಆಗಮಿಸಿದ್ದು, ಬಾಗಲಕೋಟೆಯ ಫಕ್ಕೀರಪ್ಪ ಎಂಬ ೮೦ ವರ್ಷದ ವಯೋವೃದ್ಧರೊಬ್ಬರು ಮೋದಿ ನೋಡಲೆಂದು ಮರವನ್ನೇ ಏರಿ ಕುಳಿತಿದ್ದರು. ಅಕ್ಷಯ ಪಾರ್ಕ್ ವೃತ್ತದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಆಗಲೇ ಜನರೆಲ್ಲರೂ ಅಲ್ಲಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ಫಕ್ಕೀರಪ್ಪ ಅವರಿಗೆ ಅಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಇದರಿಂದ ಸುತ್ತಮುತ್ತ ನೋಡಿದವರಿಗೆ ಮರ ಕಂಡಿದೆ.
ಮರ ಏರಿದ ಫಕ್ಕೀರಪ್ಪ
ಅಕ್ಷಯ್ ಪಾರ್ಕ್‌ನ ವೃತ್ತದ ಪಕ್ಕದಲ್ಲಿಯೇ ಇದ್ದ ಮರವೇರಿದ ಫಕ್ಕೀರಪ್ಪ, “ನಾನು ಮೋದಿ ಅಭಿಮಾನಿ.. ನನ್ನ ಕಣ್ಣಾರೆ ಮೋದಿ ನೋಡುವ ಆಸೆ ಇದೆ. ಹಾಗಾಗಿ ಬಂದಿದ್ದೇನೆ ಎಂದು ಚಕ ಚಕನೆ ಮರವನ್ನು ಏರಿ ಕುಳಿತಿದ್ದಾರೆ. ಹಳದಿ ರುಮಾಲು ಹಾಕಿರುವ ಫಕ್ಕೀರಪ್ಪ, ಗ್ಲಾಸ್ ಹಾಕಿಕೊಳ್ಳುವ ಮೂಲಕ ಮಿಂಚಿದ್ದಾರೆ.
ಇದೇ ವೇಳೆ ಮೋದಿ ರೋಡ್ ಶೋವನ್ನು ನೋಡಲು ಲಕ್ಷಾಂತರ ಮಂದಿ ಸೇರಿದ್ದು, ದಾರಿಯುದ್ದಕ್ಕೂ ಪ್ರಧಾನಿಗೆ ಹೂಮಳೆಗೈದಿದ್ದಾರೆ.
ಇದನ್ನೂ ಓದಿ | Ram Setu | ರಾಮಸೇತು ರಾಷ್ಟ್ರೀಯ ಸ್ಮಾರಕ, ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ, ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ