Site icon Vistara News

Navalgund Election Results: ನವಲಗುಂದಲ್ಲಿ ಮುನೇನಕೊಪ್ಪಗೆ ಸೋಲು, ಗೆದ್ದು ಬೀಗಿದ ಎನ್‌ ಎಚ್ ಕೋನರೆಡ್ಡಿ

N H Konaraddi won her navalgund constituency

ಬೆಂಗಳೂರು, ಕರ್ನಾಟಕ: ರೈತ ಹೋರಾಟದ ಮೂಲಕ ಗುರುತಿಸಿಕೊಂಡಿರುವ ನವಲಗುಂದ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯದ ನಗೆ ಬೀರಿದೆ. ಜೆಡಿಎಸ್‌ನಲ್ಲಿದ್ದ ಎನ್ ಎಚ್ ಕೋನರೆಡ್ಡಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಸ್ಪರ್ಧಿಸಿದ್ದರು. ಅವರಿಗೆ ಮತದಾರರು ತಮ್ಮ ಮುದ್ರೆಯನ್ನು ಒತ್ತಿದ್ದು, ಗೆಲುವಿನ ಉಡುಗೊರೆ ನೀಡಿದ್ದಾರೆ. ಎನ್‌ ಕೋನರೆಡ್ಡಿ ಅವರು ಬಿಜೆಪಿಯ ಶಂಕರ್ ಮನೇನಕೊಪ್ಪ ಅವರ ವಿರುದ್ಧ 6914 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಶಂಕರ್ ಮುನೇನಕೊಪ್ಪ 63882 ಮತಗಳನ್ನು ಪಡೆದುಕೊಂಡು ಸೋತಿದ್ದಾರೆ. ಇದೇ ವೇಳೆ, ಗೆದ್ದ ಅಭ್ಯರ್ಥಿಗೆ 86081 ಮತಗಳು ಸಂದಿವೆ(Navalgund Election Results).

2023ರ ಚುನಾವಣೆಯ ಅಭ್ಯರ್ಥಿಗಳು: ಹಾಲಿ ಶಾಸಕ ಬಿಜೆಪಿಯ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಮತ್ತೆ ಕಣದಲ್ಲಿದ್ದರು. ಕಾಂಗ್ರೆಸ್‌ನಿಂದ ಎನ್ ಎಚ್ ಕೋನರೆಡ್ಡಿ ಹಾಗೂ ಜೆಡಿಎಸ್‌ನಿಂದ ಕಲ್ಪಪ್ಪ ನಾಗಪ್ಪ ಗಡ್ಡಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ನವಲಗುಂದ ವಿಧಾನಸಭೆ ಕ್ಷೇತ್ರವು ಧಾರವಾಡ ಜಿಲ್ಲೆಯ ವಿಶಿಷ್ಟ ಕ್ಷೇತ್ರಗಳಲ್ಲಿ ಒಂದಾಗಿದೆ. ಬಂಡಾಯದ ನಾಡು ಅಂತಲೇ ಗುರುತಿಸಿಕೊಂಡಿರುವ ನವಲಗುಂದ ವಿಧಾನಸಭಾ ಕ್ಷೇತ್ರ ರೈತ ಹೋರಾಟದ ಮೂಲಕ ನಾಡಿಗೆ ರೈತರ ಶಕ್ತಿ ತೋರಿಸಿದೆ. 2018ರಲ್ಲಿ ಬಿಜೆಪಿಯ ಶಂಕರ್ ಮುನೇನಕೊಪ್ಪ ಅವರು ಆಯ್ಕೆಯಾಗಿದ್ದರು. ಮುನೇನಕೊಪ್ಪ ಅವರು ಒಟ್ಟು 65,718 ಮತಗಳನ್ನು ಪಡೆದುಕೊಂಡರೆ, ಅವರ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಎನ್ ಎಚ್ ಕೋನರೆಡ್ಡಿ ಅವರು 45197 ಮತಗಳನ್ನು ಪಡೆದುಕೊಂಡರು. ಗೆಲುವಿನ ಅಂತ 20521 ಮತಗಳಿದ್ದವು. ಕಾಂಗ್ರೆಸ್‌ನ ಅಸುಟಿ ವಿನೋದ್ ಕಾಶಿನಾಥ್ ಅವರು 38,906 ಮತಗಳನ್ನು ಪಡೆದುಕೊಂಡರೆ, ಸ್ವತಂತ್ರ ಅಭ್ಯರ್ಥಿ ಶಿವಾನಂದ ಬಸಪ್ಪ ಕರಿಗಾರ್ ಅವರು 4,555 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು.

Exit mobile version