ನೆಲಮಂಗಲ: ಬೆಂಗಳೂರು ನಗರದಕ್ಕೆ ಅಂಟಿಕೊಂಡಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಶ್ರೀನಿವಾವಾಸಮೂರ್ತಿ (52251) ಮತಗಳ 52251 ಅಂತರದಿಂದ ಜಯ ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಪಕ್ಷದ ಆರ್ ನಾರಾಯಣಸ್ವಾಮಿಯನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ನೆಲಮಂಗಲ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು 1951ರಲ್ಲಿ. ಅಂದಿನಿಂದ ನಡೆದ 17 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದ್ದರೆ, ಜನತಾ ಪಕ್ಷ ಎರಡು ಬಾರಿ ಗೆದ್ದಿದೆ. ಜನತಾ ದಳ ಎರಡು ಬಾರಿ, ಬಿಜೆಪಿ ಒಂದು ಬಾರಿ ಗೆದ್ದಿದೆ. ಕೆ ಪ್ರಭಾಕರ್ ಕಾಂಗ್ರೆಸ್‌ನಿಂದ ಎರಡು ಬಾರಿ ಗೆದ್ದಿದ್ದರು. ಆಲೂರು ಹನುಮಂತಪ್ಪ ಎರಡು ಬಾರಿ, ಅಂಜನಮೂರ್ತಿ ಮೂರು ಬಾರಿ, ಶ್ರೀನಿವಾಸಮೂರ್ತಿ ಎರಡು ಬಾರಿ ಗೆದ್ದಿದ್ದಾರೆ.
ಜಾತಿವಾರು ಜನಸಂಖ್ಯೆ ನೋಡಿದರೆ, ಪರಿಶಿಷ್ಟ ಜಾತಿ/ಪಂಗಡದ 68000 ಮತದಾರರು ಇದ್ದರೆ, ಲಿಂಗಾಯತರು 40000 ಇದ್ದಾರೆ. ಒಕ್ಕಲಿಗರು 35000, ವಿಶ್ವಕರ್ಮರು 20000 ಇದ್ದಾರೆ.
ಇದನ್ನೂ ಓದಿ : Hebbal Election Results : ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ನ ಭೈರತಿ ಸುರೇಶ್ಗೆ ಜಯ
ಜೆಡಿಎಸ್‌ಗೆ ಬಲ ತುಂಬಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ನೆಲಮಂಗಲವೂ ಒಂದು. ಕಾಂಗ್ರೆಸ್ ಮತ್ತು ಜನತಾ ಪಕ್ಷ, ಜನತಾ ದಳದ ಉಮೇದುವಾರರು ಬಹುತೇಕ ಸಮಬಲದೊಂದಿಗೆ ಅಧಿಕಾರ ಹಂಚಿಕೊಂಡಿರುವ ಕ್ಷೇತ್ರ ಇದು. ಇಲ್ಲಿ ಬಿಜೆಪಿ ಒಂದು ಬಾರಿ ಗೆದ್ದಿದೆ.