Site icon Vistara News

Independence Day | ಅರುಂಧತಿ ನಕ್ಷತ್ರ ನೋಡಿ ರಾಷ್ಟ್ರ ಧ್ವಜ ಹಾರಿಸಿದ ಮದುಮಕ್ಕಳು

independs day

ಬೆಂಗಳೂರು: 75ರ ಸ್ವಾತಂತ್ರ್ಯ ದಿನವನ್ನು (Independence Day) ಬೆಂಗಳೂರಿನ ನವಜೋಡಿ ವಿಶೇಷವಾಗಿ ಆಚರಿಸಿದೆ. ಮದುವೆ ಸಂಭ್ರಮದ ಗಡಿಬಿಡಿಯಲ್ಲೂ ದೇಶಪ್ರೇಮವನ್ನು ಮರೆಯದ ಈ ಮದುಮಕ್ಕಳು ಕಲ್ಯಾಣ ಮಂಟಪದ ಆವರಣದಲ್ಲಿಯೇ ಧ್ವಜಾರೋಹಣ ನೆರವೇರಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದೇ ವಿವಾಹವಾಗಿರುವ ಶ್ರೀಪ್ರೀತಾ ಹಾಗೂ ರಾಘವೇಂದ್ರ ಎಂಬುವವರು ಅರುಂಧತಿ ನಕ್ಷತ್ರ ನೋಡಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಕೆಂಗೇರಿ ಬಳಿಯಿರುವ ಎಸ್‌ಎಸ್‌ಜೆ ಕಲ್ಯಾಣ ಮಂಟಪದಲ್ಲಿ ಶ್ರೀಪ್ರೀತಾ ಹಾಗೂ ರಾಘವೇಂದ್ರ ನವಜೋಡಿಗಳು ಮದುವೆ ಶಾಸ್ತ್ರಗಳೆಲ್ಲವೂ ಮುಗಿಸಿ ಬಳಿಕ ಬಂಧು ಮಿತ್ರರೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.

ಇದನ್ನೂ ಓದಿ | Independence Day | ಬೌದ್ಧ ಭಿಕ್ಷುಗಳಿಂದ ಅದ್ಧೂರಿ ಸ್ವಾತಂತ್ರ್ಯ ಸಂಭ್ರಮ: ನಿರಾಶ್ರಿತರಲ್ಲಿ ದೇಶ ಭಕ್ತಿ

Exit mobile version