Site icon Vistara News

New Education Policy: ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ನೀತಿ: ಎನ್‌ಇಪಿ ತಿರಸ್ಕಾರ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್‌

DK Shivakumar

#image_title

ಬೆಳಗಾವಿ: ಇದೀಗ ದೇಶಾದ್ಯಂತ ಜಾರಿಯಲ್ಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿರುವ ಡಿ.ಕೆ. ಶಿವಕುಮಾರ್‌, ಈಗಾಗಲೆ ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದೇವೆ.

ಕರ್ನಾಟಕದಲ್ಲಿ ಶಿಕ್ಷಣ ನೀತಿ ಇರಲಿದೆ. ನಮಗೆ ನಾಗಪುರ ಶಿಕ್ಷಣ ನೀತಿಯ ಅಗತ್ಯವಿಲ್ಲ. ಇದನ್ನು ನಾವು ವಿಸ್ತೃತವಾಗಿ ಚರ್ಚೆ ನಡೆಸಿ ಜಾರಿ ಮಡುತ್ತೇವೆ. ಇಷ್ಟು ದಿನ ಇದ್ದ ನೀತಿಯಿಂದ ಏನೇನಾಯಿತು ಎಂದು ಪರಿಶೀಲಿಸುತ್ತೇವೆ. ಕರ್ನಾಟಕವು ದೇಶದಲ್ಲೆ ಅತ್ಯುತ್ತಮ ಶಿಕ್ಷಣ ವಾತಾವರಣವನ್ನು ಹೊಂದಿದೆ ಎಂದಿದ್ದಾರೆ.

ಇದನ್ನೂ ಓದಿ: NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ

Exit mobile version