Site icon Vistara News

Vistara Top 10 News : ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಹೊಸ ಟ್ವಿಸ್ಟ್​​; ಅಹಿಂದಕ್ಕೆ ಶಾಮನೂರು ಠಕ್ಕರ್​ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Top 10 news

1. Naked parade : ಮಹಿಳೆ ವಿವಸ್ತ್ರ ಪ್ರಕರಣದ ಹಿಂದೆ ಜಾರಕಿಹೊಳಿ; ಬಿಜೆಪಿ ಸಮಿತಿ ಸಂಶಯ
ಬೆಳಗಾವಿ: ಹೊಸ ವಂಟಮೂರಿ ಗ್ರಾಮದಲ್ಲಿ ಡಿ.11ರಂದು ರಾತ್ರಿ ಮಹಿಳೆಯನ್ನು ನಗ್ನಗೊಳಿಸಿ (Naked Parade) ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಯ ಉಳಿದ ಆರೋಪಿಗಳನ್ನೂ ಬಂಧಿಸಬೇಕು ಎಂದು ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಸತ್ಯಶೋಧನಾ ಸಮಿತಿಯ (BJP fact Finding Committee) ಸದಸ್ಯರಾದ ಸಂಸದೆ ಅಪರಾಜಿತಾ ಸಾರಂಗಿ (Aparajitha Sarangi) ಅವರು ಆಗ್ರಹಿಸಿದ್ದಾರೆ. ಜತೆಗೆ ಈ ಕೃತ್ಯದ ಹಿಂದೆ ಲೋಕೋಪಯೋಗಿ ಸಚಿವರಾಗಿರುವ ಸತೀಶ್‌ ಜಾರಕಿಹೊಳಿ (Satish Jarakiholi) ಮತ್ತು ಅವರ ಆಪ್ತರು ಇದ್ದಾರೆ ಎಂಬ ಗಂಭೀರ ಸಂಶಯವನ್ನು ಸಮಿತಿ ವ್ಯಕ್ತಪಡಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : ಸರಕಾರವೇ ಬೆಳಗಾವಿಯಲ್ಲಿದ್ದರೂ ಬರಲಿಲ್ಲವೇಕೆ; ಕಾಂಗ್ರೆಸ್‌ಗೆ ಚಾಟಿ ಬೀಸಿದ ಬಿಜೆಪಿ ಸತ್ಯಶೋಧನಾ ಸಮಿತಿ

2. ಸಿಎಂ ಅಹಿಂದ ಸಮಾವೇಶಕ್ಕೆ ಶಾಮನೂರು ಲಿಂಗಾಯತ ಸಮಾವೇಶ ಠಕ್ಕರ್
ದಾವಣಗೆರೆ: ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು (Caste Census Report) ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿರುವ ಲಿಂಗಾಯತ ಸಮುದಾಯದ (Lingayat Community) ನಾಯಕರು ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಆಯೋಜನೆಯಾಗಿರುವ ಅಹಿಂದ ಸಮಾವೇಶಕ್ಕೆ (Ahinda Samavesha) ಠಕ್ಕರ್‌ ನೀಡಲು ಮುಂದಾಗಿದ್ದಾರೆ. ಅಹಿಂದ ಪಂಗಡಗಳು ಜಾತಿಗಣತಿ ವರದಿ ಬಿಡುಗಡೆಗೆ ಪರವಾಗಿದ್ದು, ಡಿಸೆಂಬರ್‌ 30ರಂದು ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಸಿ ಒತ್ತಡ ಹೇರುವ ತಂತ್ರವೊಂದು ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಲಿಂಗಾಯತ ಸಮಾವೇಶದ (Lingayat Samavesha) ಮೂಲಕ ಠಕ್ಕರ್‌ ಕೊಡಲು ತಾವೂ ಸಿದ್ಧ ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಸುಳಿವು ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

3. ಜೀವಂತ ದಹನ, ರಾಜಕೀಯ ಪಕ್ಷ ಸ್ಥಾಪನೆ; ಆರೋಪಿಗಳ ಯೋಜನೆ!
ಹೊಸದಿಲ್ಲಿ: ಹೊಸದಿಲ್ಲಿಯ ಸಂಸತ್‌ ಭವನದಲ್ಲಿ ಲೋಕಸಭೆಯ ಭದ್ರತೆ ಉಲ್ಲಂಘಿಸಿ (Security Breach In Lok Sabha) ಒಳಗೆ ಪ್ರವೇಶಿಸಿ ಹಳದಿ ಹೊಗೆ ಎರಚಿದ ಆರೋಪಿಗಳು, ಇದಕ್ಕೂ ಮುನ್ನ ಸಂಸತ್ತಿನ ಹೊರಗೆ ತಮ್ಮನ್ನು ಸುಟ್ಟುಕೊಳ್ಳಲು (Set ablaze) ಯೋಜಿಸಿದ್ದರು ಹಾಗೂ ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಲು ಬಯಸಿದ್ದರು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ: Lok Sabha : ಉನ್ನತ ಸಮಿತಿಯಿಂದ ಸಂಸತ್​ ಭದ್ರತೆ ಉಲ್ಲಂಘನೆಯ ಪ್ರಕರಣ ತನಿಖೆ
ಈ ಸುದ್ದಿಯನ್ನೂ ಓದಿ: Lok Sabha : ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ 6ನೇ ಆರೋಪಿ ಮಹೇಶ್ ಕುಮಾವತ್ ಸೆರೆ

4.ಹೈಕಮಾಂಡ್‌ಗೆ ಎಲ್ಲ ಹೇಳ್ತೇನೆ, ಆಮೇಲೆ ಮುಂದಿನ ನಿರ್ಧಾರ ಎಂದ ಸೋಮಣ್ಣ
ಮೈಸೂರು: ಒಮ್ಮೆ ಬಿಜೆಪಿಯ ಕಡು ವಿರೋಧಿಯಂತೆ, ಇನ್ನೊಮ್ಮೆ ಪ್ರಖರ ಪ್ರತಿಪಾದಕನಂತೆ ಮಾತನಾಡುವ ಮಾಜಿ ಸಚಿವ ವಿ. ಸೋಮಣ್ಣ (V Somanna), ಬಿಜೆಪಿ ಹೈಕಮಾಂಡ್ (BJP High command) ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ಪ್ರಕಟಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

5. ಅಯೋಧ್ಯೆ ರಾಮ ಮಂದಿರದಲ್ಲಿ ಕೇಳಿಸಲಿದೆ ಬೆಂಗಳೂರಿನ ಘಂಟಾ ನಾದ
ಬೆಂಗಳೂರು: 2024ರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿರುವ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ (Ayodhya Rama Mandir) ಬೆಂಗಳೂರಿನ ಘಂಟಾನಾದ (Temple bell from Bangalore) ಕೇಳಿಸಲಿದೆ ಎಂದರೆ ನಂಬುತ್ತೀರಾ? ಹೌದು, ಅಯೋಧ್ಯೆಯ ರಾಮ ಮಂದಿರ (Ayodhya Temple) ಎನ್ನುವುದು ಶತಕೋಟಿ ಹಿಂದೂಗಳ ಕನಸು. ಆ ಕನಸು ನನಸಾಗುವ ಕ್ಷಣ ಸನ್ನಿಹಿತವಾಗುತ್ತಿದೆ. ಹೀಗೆ ಲೋಕಾರ್ಪಣೆಗೊಳ್ಳಲಿರುವ ದೇಗುಲದಲ್ಲಿ ಮುಂದೆ ನಿತ್ಯ ನಡೆಯುವ ಪೂಜೆಯ ವೇಳೆ ಕೇಳಿಬರುವ ಘಂಟಾನಾದದಲ್ಲಿ ಬೆಂಗಳೂರಿನಿಂದ ಕಳುಹಿಸಲಾಗುತ್ತಿರುವ ಘಂಟೆಗಳ ನಾದವೂ ಇರುತ್ತದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

6. ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ ಒಂದೇ ವಿಷಯದ ಎರಡೆರಡು ಪಠ್ಯ ಪುಸ್ತಕ!
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮುಂದಿನ ವರ್ಷದಿಂದ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡೆರಡು ಪುಸ್ತಕ ಸರಬರಾಜಾಗಲಿದೆ. ಹೌದು, 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬ್ಯಾಗ್‌ ಹೊರೆಯನ್ನು (government school bag weight) ಕಡಿಮೆ ಮಾಡಲು ಶಾಲಾ ಶಿಕ್ಷಣ ಇಲಾಖೆ (education department) ಈ ಕ್ರಮ ತೆಗೆದುಕೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

7. ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದ ಪಿಚ್​ ರಿಪೋರ್ಟ್, ಬಲಾಬಲ ಹೇಗಿದೆ?
ಜೊಹಾನ್ಸ್​ಬರ್ಗ್​: ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ(ಡಿ.17) ನಡೆಯಲಿದೆ. ಈ ಪಂದ್ಯಕ್ಕೆ ಜೊಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂ ಅಣಿಯಾಗಿದೆ. ಪಂದ್ಯ ಪಿಚ್​ ರಿಪೋರ್ಟ್​, ಇತ್ತಂಡಗಳ ಏಕದಿನ ಮುಖಾಮುಖಿಯ ಇತಿಹಾಸ, ಹವಾಮಾನ ವರದಿಯ ಸಂಪೂರ್ಣ ಮಾಹಿತಿ ಇಂತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

8. IPO Upcoming : ಐಪಿಒ ಹೂಡಿಕೆ ಆಸಕ್ತರಿಗೆ ಮುಂದಿನ ವಾರ ಸಿಗಲಿದೆ ಭರಪೂರ ಅವಕಾಶ
ಬೆಂಗಳೂರು: ವರ್ಷದ ಕೊನೆಯ ತಿಂಗಳಾಗಿರುವ ಡಿಸೆಂಬರ್​ನಲ್ಲಿ ಬಿಡುಗಡೆಗೊಂಡಿರುವ ಐಪಿಎಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೂಡಿಕೆದಾರರು ಬಿಡ್ಡಿಂಗ್ ನಲ್ಲಿ ಆಸಕ್ತಿ ತೋರಿಸುವ ಜತೆಗೆ ಹೆಚ್ಚಿನ ಐಪಿಒಗಳು ತಮ್ಮ ವಿತರಣಾ ಬೆಲೆಯಲ್ಲೂ ದೊಡ್ಡ ಗಳಿಕೆಯನ್ನು ಮಾಡಿದೆ. ಈ ಐಪಿಒಗಳಲ್ಲಿ ಬಿಡ್ ಮಾಡುವ ಅವಕಾಶಗಳನ್ನು ನೀವು ಕಳೆದುಕೊಂಡಿದ್ದರೆ ಮುಂದಿನ ವಾರ (IPO Upcoming) ನಿಮಗೆ ಬಿಡ್ ಮಾಡಲು ಅನೇಕ ಆಯ್ಕೆಗಳು ಸಿಗಲಿವೆ. ಹಾಗಾದರೆ ಮುಂದಿನ ವಾರ ತೆರೆಯಲಿರುವ ಐಪಿಒಗಳನ್ನು ನೋಡೋಣ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

9. ಉಗ್ರರೆಂದು ಭಾವಿಸಿ ಇಸ್ರೇಲ್‌ ಸೈನ್ಯದಿಂದ 3 ಒತ್ತೆಯಾಳುಗಳ ಹತ್ಯೆ, ಪ್ರಮಾದ ಎಂದ ನೆತನ್ಯಾಹು
ಟೆಲ್‌ ಅವಿವ್‌: ಹಮಾಸ್‌ ಉಗ್ರರ (Hamas Terrorists) ಜೊತೆಗಿನ ಸಂಘರ್ಷದ ವೇಳೆ (Israel Palestine war) ಇಸ್ರೇಲ್‌ನ ಮೂವರು ಒತ್ತೆಯಾಳುಗಳನ್ನು (Hamas Hostages) ಇಸ್ರೇಲ್‌ ಮಿಲಿಟರಿ ಕೊಂದುಹಾಕಿದೆ. ಇದು ತಿಳಿಯದೆ ನಡೆದ ದೊಡ್ಡ ಪ್ರಮಾದವೆಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Israel PM Benjamin Netanyahu) ಹೇಳಿಕೊಂಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

10. Viral Video: ಒಳಗೆ ಸೇರಿದರೆ ಗುಂಡು, ಬೆಕ್ಕೂ ಆಗುವುದು ಗಂಡು!
ಚೆನ್ನೈ: ಇಂಟರ್‌ನೆಟ್‌ನಲ್ಲಿ ಪ್ರತಿದಿನ ಒಂದಲ್ಲ ಒಂದು ಪ್ರಾಣಿಗಳ ವಿಡಿಯೊ ವೈರಲ್‌ ಆಗುತ್ತಿರುತ್ತದೆ. ಸದ್ಯ ವೈರಲ್‌ ಆಗುವ ಸರದಿ ಈ ಬೆಕ್ಕಿನದ್ದು. ಇದು ಮಾದಕ ವ್ಯಸನಿಯಂತೆ ಓಲಾಡುತ್ತ ನಡೆಯುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

Exit mobile version