Site icon Vistara News

New Year 2023 | ಹೊಸ ವರ್ಷಾಚರಣೆಗೆ ಸಾಲು ಸಾಲು ವಾಹನಗಳಲ್ಲಿ ಗೋವಾದತ್ತ ತೆರಳುತ್ತಿರುವ ಪ್ರವಾಸಿಗರು

New Year Celebrations goa Tourists

ಸಂದೀಪ ಸಾಗರ, ಕಾರವಾರ

ನೂತನ ವರ್ಷವನ್ನು ಸಂಭ್ರಮದಿಂದ (New Year 2023) ಬರ ಮಾಡಿಕೊಳ್ಳಲು ಜನರು ಪ್ರವಾಸಿ ತಾಣಗಳತ್ತ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಗೋವಾಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕರ್ನಾಟಕ – ಗೋವಾ ಗಡಿಯಲ್ಲಿ ವಾಹನಗಳು ಬೆಳಗ್ಗೆಯಿಂದಲೇ ಸಾಲುಗಟ್ಟಿ ತೆರಳುತ್ತಿವೆ.

ಇದನ್ನೂ ಓದಿ | New year 2023 | ಹೊಸ ವರ್ಷದಲ್ಲಿ ವಿವಿಧ ದೇಶಗಳ ವಿಚಿತ್ರ ಆಚರಣೆಗಳು: ಇಲ್ಲಿನ ಮಂದಿಗೆ ಚಡ್ಡಿಬಣ್ಣವೂ ಮುಖ್ಯ!

ಗಡಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು
ಪ್ರವಾಸಿಗರು ತಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ತಂಡೋಪತಂಡವಾಗಿ ಗೋವಾಕ್ಕೆ ಧಾವಿಸುತ್ತಿದ್ದಾರೆ. ಕಳೆದ ಬಾರಿ ಕೊರೊನಾ ಕಾರಣದಿಂದಾಗಿ ಮೋಜು ಮಸ್ತಿಗೆ ಕಡಿವಾಣ ಹಾಕಿದ್ದರಿಂದ ಪ್ರವಾಸಿಗರು ಬೇಸರಗೊಂಡಿದ್ದರು. ಈ ಬಾರಿ ಆಚರಣೆಗೆ ಅವಕಾಶ ಇರುವುದರಿಂದ ಜನರಲ್ಲಿ ಸಂಭ್ರಮ ಹೆಚ್ಚಾಗಿದೆ. ಕರ್ನಾಟಕ – ಗೋವಾ ಗಡಿ ಪ್ರದೇಶವಾದ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಶನಿವಾರ (ಡಿ.೩೧) ಬೆಳಗ್ಗೆಯಿಂದಲೇ ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೇರಳ, ಮಂಗಳೂರು, ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧೆಡೆಗಳ ಪ್ರವಾಸಿಗರು ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದಾರೆ. ಕಾರುಗಳ ಜತೆಗೆ ಬೈಕ್‌ಗಳ ಓಡಾಟ ಕೂಡ ಜೋರಾಗಿವೆ. ಗೋವಾ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಗಡಿಯಲ್ಲಿಯೇ ಕಟ್ಟುನಿಟ್ಟಿನ ತಪಾಸಣೆಯನ್ನು ನಡೆಸುತ್ತಿದ್ದಾರೆ. ಗೋವಾ, ಕಾರವಾರ ಹೊರತುಪಡಿಸಿ ಬೇರೆಡೆಗಳಿಂದ ಬರುತ್ತಿರುವ ಪ್ರತಿಯೊಂದು ಪ್ರವಾಸಿ ವಾಹನವನ್ನೂ ಪರಿಶೀಲಿಸಿ ಪ್ರವಾಸಿಗರ ಮಾಹಿತಿ ಪಡೆದು ಬಿಡುತ್ತಿದ್ದಾರೆ.

ಇದನ್ನೂ ಓದಿ | Amit Shah | ರಾಹುಲ್‌ ಗಾಂಧಿ ಸೋಲಿನ ಸರದಾರ, ಕಾಂಗ್ರೆಸ್‌ ದಿಕ್ಕಾಪಾಲ; ಸಿದ್ದು ಮನೆಗೆ, ಕನಕಪುರಕ್ಕೆ ಮಾತ್ರ ಡಿಕೆಶಿ ಲೀಡರ್‌: ಅಶೋಕ್


ಈ ಬಾರಿ ಹೊಸ ವರ್ಷಾಚರಣೆಗೆ ಗೋವಾಕ್ಕೆ ತೆರಳಲು ಅವಕಾಶ ಸಿಕ್ಕಿರುವುರಿಂದ ಸ್ನೇಹಿತರೊಂದಿಗೆ ತೆರಳುತ್ತಿದ್ದೇವೆ ಎನ್ನುತ್ತಾರೆ ಬೆಂಗಳೂರಿನ ಪ್ರವಾಸಿಗ ಹರೀಶ್‌.

ದೇಶದಲ್ಲಿ ಕೊರೊನಾ ರೂಪಾಂತರಿ ತಳಿಯ ಆತಂಕ ಇಲ್ಲದಿರುವುದರಿಂದ ಹೆಚ್ಚು ಕಟ್ಟುನಿಟ್ಟಿನ ಕ್ರಮಗಳು ಇಲ್ಲ ಎಂದು ತಿಳಿದುಬಂದಿದೆ. ಆದರೂ ನಮ್ಮ ಮುಂಜಾಗ್ರತೆಗಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದಲ್ಲಿ ಅದನ್ನು ಪಾಲನೆ ಮಾಡಿಕೊಂಡು ಹೊಸ ವರ್ಷವನ್ನು ಸಂಭ್ರದಿಂದ ಆಚರಿಸುತ್ತೇವೆ ಎನ್ನುತ್ತಾರೆ ಹೈದರಾಬಾದ್‌ ನ ಪ್ರವಾಸಿಗ ಹೇಮಂತ್.

ಇದನ್ನೂ ಓದಿ | Indian Cricket Team | ವರ್ಷಾಂತ್ಯದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಭಾರತ ಕ್ರಿಕೆಟ್​ ತಂಡ

Exit mobile version