ಹಾಸನ: ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರಿ ಅಪಾಯ ಕಾದಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾತನಾಡಿದ ಅವರು, ಕಾರ್ತಿಕ, ಮಾರ್ಗಶಿರದಿಂದ ತೊಡಗಿ ಜನವರಿ ಪ್ರಥಮ ಭಾಗದವರೆಗೆ ಭಾರಿ ಲೋಕ ಕಂಟಕವಿದೆ ಎಂದು ಹೇಳಿದರು.
ಈ ಕಂಟಕಗಳು ಭೂ ಕಂಟಕದ ರೂಪದಲ್ಲಿರಬಹುದು, ಪ್ರಾದೇಶಿಕವಾಗಿಯೂ ಸಂಘರ್ಷವಿರಬಹುದು, ಪ್ರಾಕೃತಿಕವಾಗಿಯೂ ಇರಬಹುದು ಎಂದ ಅವರು, ರಾಜ ಬೀದಿಯೂ ಇರಬಹುದು ಎಂದು ಹೇಳಿದರು. ಆದರೆ, ರಾಜ ಬೀದಿಯ ವಿವರಣೆ ನೀಡಲಿಲ್ಲ.
ಜಾಗತಿಕವಾಗಿ ಬಾಂಬ್‌ಗಳು, ಭೂಕಂಪ, ಯುದ್ಧ ಭೀತಿ ಇದೆ. ಇದು ಕೇವಲ ಜಗತ್ತಿಗೆ ಸಂಬಂಧಿಸಿದ್ದಲ್ಲ, ದೇಶೀಯವಾಗಿ ಕೆಲವೊಂದು ಕಂಟಕಗಳಿವೆ ಎಂದು ಹೇಳಿದ್ದಾರೆ. ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ಹೆಚ್ಚಿನವರಿಗೆ ದೈಹಿಕ ಅಶಕ್ತಿ ಕಾಡಲಿದ್ದು, ಕೆಲವರು ದಾರಿಯಲ್ಲಿ ಬಿದ್ದು ಸಾಯುವ ಪ್ರಕರಣಗಳೂ ನಡೆದಾವು ಎಂದಿದ್ದಾರೆ ಅವರು. ಅಂದರೆ, ಮುಂದಿನ ಮೂರು ತಿಂಗಳು ಅಂಗಾಂಗಗಳ ಮೇಲೆ ಪ್ರಭಾವ ಜೋರಾಗಿರುವ ಸಾಧ್ಯತೆ ಇದೆ.
ಜಾಗತಿಕ ದೋಷದ ಜತೆ ರಾಷ್ಟ್ರೀಯ ದೋಷವೂ ಹೆಚ್ಚಾಗಿರುವುದರಿಂದ ಮುಂದಿನ ಎರಡು, ಮೂರು ತಿಂಗಳು ಮನುಷ್ಯರು ದೈವ, ಭಕ್ತಿಯಿಂದ, ನಂಬಿಕೆಯಿಂದ ಇರುವುದು ಬಹಳ ಮುಖ್ಯ ಎಂದಿದ್ದಾರೆ. ಇನ್ನೂ ಸ್ವಲ್ಪ ಕಾಲ ಮಳೆ ಬರುತ್ತದೆ ಎಂದರು.
ಇದನ್ನೂ ಓದಿ | ಧರ್ಮ ಸಂಘರ್ಷ ಉಲ್ಬಣ, ಬೆಂಕಿ, ವಿಕೋಪ, ಪಕ್ಷಗಳು ಇಬ್ಭಾಗ: ಕೋಡಿ ಮಠ ಶ್ರೀಗಳು ಹೇಳಿದ ಆತಂಕಕಾರಿ ಭವಿಷ್ಯ