Site icon Vistara News

NIA Chargesheet: ಪಿಎಫ್ಐ ವಿರುದ್ಧ ಎನ್ಐಎ 5ನೇ ಚಾರ್ಜ್‌ಶೀಟ್, 12 ಮಂದಿ ವಿರುದ್ಧ ಆರೋಪ

NIA Chargesheet against pfi and 12 members named

ನವದೆಹಲಿ: ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ(PFI) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(NIA) 5ನೇ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಹೊಸ ದೋಷಾರೋಪ ಪಟ್ಟಿಯಲ್ಲಿ ಪಿಎಫ್ಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 12 ಸದಸ್ಯರನ್ನು ಹೆಸರಿಸಿದೆ. ಇದೇ ವೇಳೆ, ಪಿಎಫ್ಐಗೆ ಸೇರಿದ 37 ಖಾತೆ ಸೇರಿದಂತೆ 77 ಖಾತೆಗಳನ್ನು ರದ್ದು ಮಾಡಿದೆ. ಈ ಖಾತೆಗಳ ಮೂಲಕ ಉಗ್ರ ಕೃತ್ಯಗಳಿಗೆ ಹಣ ರವಾನೆಯಾಗುತ್ತಿತ್ತು ಎಂದು ಎನ್ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ(NIA Chargesheet).

ಇದರೊಂದಿಗೆ ಪಿಎಫ್ಐ ತರಬೇತಿ ಪಡೆದ ಸೇನಾಪಡೆಯನ್ನು ರಚಿಸುವ ಮತ್ತು ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸುವ ಯೋಜನೆಗಳನ್ನು ವಿಫಲಗೊಳಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ. 12 ಎನ್‌ಇಸಿ ಸದಸ್ಯರು, ಸ್ಥಾಪಕ ಸದಸ್ಯರು ಮತ್ತು ಹಿರಿಯ ನಾಯಕರು ಸೇರಿದಂತೆ ಪಿಎಫ್‌ಐನ 19 ಜನರ ವಿರುದ್ಧ ಆರೋಪಗಳನ್ನು ಎನ್ಐಎ ಹೊರಿಸಿದೆ.

ದೇಶವನ್ನು ಅಸ್ಥಿರಗೊಳಿಸುವ ಮತ್ತು ಛಿದ್ರಗೊಳಿಸುವ ಅಪರಾಧದ ಸಂಚನ್ನು ಈ ಸಂಘಟನೆ ಹೊಂದಿತ್ತು. ಸಂಘಟನೆಯು ಉಗ್ರ ಕೃತ್ಯಗಳಿಗೆ ಧನ ಸಹಾಯ ಮಾಡುತ್ತಿತ್ತು. ದೇಶಾದ್ಯಂತ ಶಸ್ತ್ರಾಸ್ತ್ರ ತರಬೇತುದಾರನ್ನು ಒಳಗೊಂಡಿತ್ತು. ಈ ಎಲ್ಲದಕ್ಕೆ ಸಂಘಟನೆಯು ಸ್ಯಾಲರಿ ರೂಪದಲ್ಲಿ ಹಣವನ್ನು ನಗದು ರೂಪದಲ್ಲಿ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಪಾವತಿಸುತ್ತಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೇರಳ, ಕರ್ನಾಟಕದಲ್ಲಿ ಐವರು ನಿಷೇಧಿತ ಪಿಎಫ್ಐ ಸದಸ್ಯರನ್ನು ಬಂಧಿಸಿದ ಎನ್ಐಎ

ಈ ಎಲ್ಲ ಪಿಎಫ್ಐ ತರಬೇತುದಾರರು ಎನ್ಐಎನಿಂದ ಇಲ್ಲವೇ ಆಯಾ ರಾಜ್ಯಗಳ ಪೊಲೀಸರಿಂದ ಬಂಧಿತರಾಗಿದ್ದಾರೆ. ಪಿಎಫ್‌ಐನ 37 ಬ್ಯಾಂಕ್ ಖಾತೆಗಳನ್ನು ಮತ್ತು ಸಂಸ್ಥೆಗೆ ಸಂಬಂಧಿಸಿದ 19 ವ್ಯಕ್ತಿಗಳಿಗೆ ಸೇರಿದ 40 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಗುವಾಹಟಿ(ಅಸ್ಸಾಮ್, ಸುದಿಪುರ್(ಪಶ್ಚಿಮ ಬಂಗಾಳ), ಇಂಫಾಲ್(ಮಣಿಪುರ್), ಕೊಯಿಕ್ಕೋಡ್(ಕೇರಳ), ಚೆನ್ನೈ(ತಮಿಳುನಾಡು), ನವದೆಹಲಿ, ಜೈಪುರ(ರಾಜಸ್ಥಾನ), ಬೆಂಗಳೂರು(ಕರ್ನಾಟಕ), ಹೈದ್ರಾಬಾದ್(ತೆಲಂಗಾಣ) ಮತ್ತು ಕರ್ನೂಲ್(ಆಂಧ್ರಪ್ರದೇಶ) ಸೇರಿದಂತೆ ವಿವಿಧಡೆ ಇರುವ ಬ್ಯಾಂಕ್‌ ಖಾತೆಗಳನ್ನು ಸ್ಥಗಿತೊಳಿಸಲಾಗಿದೆ.

Exit mobile version