Site icon Vistara News

NIA Court | ಭಯೋತ್ಪಾದಕ‌ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು

NIA Court

ಬೆಂಗಳೂರು: ಭಯೋತ್ಪಾದಕ‌ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಉಗ್ರ ಕೃತ್ಯಗಳಿಗಾಗಿ (NIA Court) ಡಕಾಯಿತಿ ಮುಖಾಂತರ ಹಣ ಸಂಗ್ರಹಣೆ ಮಾಡುತ್ತಿದ್ದ ಆರೋಪದಲ್ಲಿ 11 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ನಾಲ್ವರಿಗೆ 7 ವರ್ಷ ಜೈಲುಶಿಕ್ಷೆ ನೀಡಲಾಗಿದೆ.

ಕಡೋರ್ ಕಾಜಿ ಅಲಿಯಾಸ್ ಮಿಜನೂರ್ ರಹಮಾನ್, ಆದಿಲ್ ಶೇಖ್ ಅಲಿಯಾಸ್ ಅಸಾದುಲ್ಲಾ,
ಅಬ್ದುಲ್ ಕರೀಮ್ ಅಲಿಯಾಸ್ ಕೊರಿಮ್,‌ ಲಾಲ್ಜನ್ ಶೇಖ್ ಎಂಬುವವರು ಆರೋಪಿಗಳಾಗಿದ್ದಾರೆ. 2019ರ ಜುಲೈ ೭ರಂದು ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. 2019ರ ಜುಲೈ ೨೯ರಂದು ಪ್ರಕರಣದ ತನಿಖೆ ಹೊಣೆ ಎನ್ಐಎಗೆ ವರ್ಗಾವಣೆಗೊಂಡಿತ್ತು. ಬಳಿಕ ಎನ್.ಐ.ಎ ತಂಡ ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿತ್ತು.

ಬಾಂಬ್‌ಗಳ ತಯಾರಿಕೆಗೆ ಬಳಸುವ ಅಪಾರ ಪ್ರಮಾಣದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು, ರಾಸಾಯನಿಕ ಸ್ಫೋಟಕಗಳನ್ನು ಆರೋಪಿಗಳು ಸಂಗ್ರಹ ಮಾಡಿದ್ದರು. ಜತೆಗೆ ರಾಕೆಟ್ ಲಾಂಚರ್ ಅನ್ನು ಪರೀಕ್ಷೆ ಮಾಡಿದ್ದರು. ಈ ಸಂಬಂಧ ಬೆಂಗಳೂರಿನ ಅತ್ತಿಬೆಲೆ, ಕೆ.ಆರ್.ಪುರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ಎನ್.ಐ.ಎ.ವಿಶೇಷ ನ್ಯಾಯಾಲಯ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

ಇದನ್ನೂ ಓದಿ | Santro Ravi case | ಮಧುಮೇಹದಿಂದ ಬಳಲುತ್ತಿರುವ ಸ್ಯಾಂಟ್ರೋ ರವಿಗೆ ಗಂಟೆಗೊಮ್ಮೆ ಇನ್ಸುಲಿನ್‌ ಕೊಡಬೇಕು!

Exit mobile version