Site icon Vistara News

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

NIA Raid

ಹುಬ್ಬಳ್ಳಿ: ನಗರದಲ್ಲಿ ಶಂಕಿತ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಶಕ್ಕೆ ಪಡೆದಿದೆ. ಕೇಂದ್ರ ಗುಪ್ತಚಾರ ಇಲಾಖೆ ನೀಡಿದ ಮಾಹಿತಿ ಮೇರೆಗೆ ನಗರದ ಗಣೇಶ ಪೇಟೆಯ ನಿವಾಸಿ ಶೋಯೆಬ್‌ ಮಿರ್ಜಾ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯ ಗಣೇಶ ಪೇಟೆಯ ಹೊಟೆಲ್‌ನಲ್ಲಿದ್ದ ಶೋಯೆಬ್ ಮಿರ್ಜಾನನ್ನು ಎನ್‌ಐಎ ವಶಕ್ಕೆ ಪಡೆದಿದ್ದು, ಯಾವ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ | Self Harming: ನೇಣು ಬಿಗಿದು ಮಹಿಳೆ ಆತ್ಮಹತ್ಯೆ; ವರದಕ್ಷಿಣೆ ಕಿರುಕುಳ ಆರೋಪ

ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಬಾಂಬ್‌ ಸ್ಪೋಟಿಸಿದ (Blast in Bengaluru) ಪ್ರಕರಣ ಸಂಬಂಧ ಪ್ರಧಾನ ಆರೋಪಿ, ಬಾಂಬ್‌ ಇಟ್ಟು ತಲೆ ಮರೆಸಿಕೊಂಡು ಓಡಾಡುತ್ತಿದ್ದ ಪಾತಕಿ ಹಾಗೂ ಇದರ ಹಿಂದಿನ ಮಾಸ್ಟರ್‌ ಮೈಂಡ್‌ ಬಂಧನವಾಗಿದೆ. ಪಾತಕಿ ಮುಸಾವೀರ್ ಶಾಜೀಬ್ ಹುಸೇನ್‌ (mussavir shazeeb hussain) ಹಾಗೂ ಬಾಂಬ್‌ ಇಡುವ ಪ್ಲ್ಯಾನ್‌ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್‌ ಮತೀನ್‌ ತಾಹಾನನ್ನು (Abdul Mateen Taha) ರಾಷ್ಟ್ರೀಯ ತನಿಖಾ ದಳ (ಎನ್‌ಐಎ – NIA) ಬಂಧಿಸಿದೆ. ಈ ವೇಳೆ ರಾಜ್ಯದಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಬಗ್ಗೆ ನೋಡುವುದಾದರೆ, ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್, ಮೂರಕ್ಕೂ ಮಲೆನಾಡ ನಂಟು ಇರುವುದು ಗೊತ್ತಾಗಿದೆ.

2021ರಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, 2022ರಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ 2024ರಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ಗಳಲ್ಲೂ ಮಲೆನಾಡ ಯುವಕರದ್ದೇ ಕೃತ್ಯ ಇರುವುದು ಬಯಲಾಗಿದೆ. ಈಗ ಎನ್‌ಐಎ ಲಿಸ್ಟ್‌ನಲ್ಲಿ ಮಲೆನಾಡಿನ 6 ಜನ ಶಂಕಿತ ಉಗ್ರರು ಇದ್ದಾರೆ.

ಹಿಟ್ ಲಿಸ್ಟ್ ನಂಬರ್ 1

ಅಬ್ದುಲ್ ಮತೀನ್ ತಾಹಾ (ಬಂಧಿತ ಆರೋಪಿ) ಈತ ಒಬ್ಬ ಹ್ಯಾಂಡ್ಲರ್..! ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದು ವಿದೇಶದಲ್ಲಿರುವ ಮಾಹಿತಿ ಎನ್.ಐ.ಎಗೆ ಲಭ್ಯವಾಗಿತ್ತು. ಆದರೆ, ಈತ ದೇಶಕ್ಕೆ ಬಂದು ಸ್ಫೋಟದ ರೂವಾರಿಯಾಗಿದ್ದಾನೆ. ಸದ್ಯ ಈತನ ಬಂಧನವಾಗಿದ್ದು, ಎಲ್ಲ ಆಯಾಮದಲ್ಲೂ ಎನ್ ಐ ಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನ ಹ್ಯಾಂಡ್ಲರ್ ಇದೇ ಮತೀನ್ ಆಗಿದ್ದಾನೆ.

ಹಿಟ್ ಲಿಸ್ಟ್ ನಂಬರ್ 2

ಅರಾಫತ್ ಅಲಿ. ಈತನನ್ನು ದೆಹಲಿಯಲ್ಲಿ ಬಂಧನ ಮಾಡಲಾಗಿತ್ತು. ಅರಾಫತ್ ಅಲಿ ಮೂಲತಃ ತೀರ್ಥಹಳ್ಳಿಯವನು ಪ್ರಕರಣದಲ್ಲಿ ಭಾಗಿಯಾಗಿ ಕೀನ್ಯಾದಿಂದ ಬರುವಾಗ ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧನವಾಗಿದ್ದ. ಈತ ಮಾಜ್ ಹಾಗೂ ಶಾರಿಕ್‌ಗೆ ಹ್ಯಾಂಡ್ಲರ್ ಆಗಿ ಕೆಲಸ ಮಾಡುತ್ತಲಿದ್ದ.

ಹಿಟ್ ಲಿಸ್ಟ್ ನಂಬರ್ 3

ಮಂಗಳೂರಿನ ಕುಕ್ಕರ್‌ ಬ್ಲಾಸ್ಟ್‌ ಶಾರಿಕ್ ಇನ್ನೊಬ್ಬ ಶಂಕಿತ ಉಗ್ರ. ಈತ ಮಂಗಳೂರಿನಲ್ಲಿ ಬಂಧನವಾಗಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ನ ರೂವಾರಿಯಾಗಿದ್ದ ಶಾರಿಕ್, ಕದ್ರಿ ದೇವಾಲಯದಲ್ಲಿ ಕುಕ್ಕರ್ ಬ್ಲಾಸ್ಟ್ ಮಾಡಲು ಹೋಗುತ್ತಿದ್ದ. ಆದರೆ, ಆಟೋದಲ್ಲಿಯೇ ಬಾಂಬ್‌ ಸ್ಫೋಟಗೊಂಡಿತ್ತು. ಇದು ಮಾತ್ರವಲ್ಲದೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನಲ್ಲೂ ಶಾರಿಕ್ ಪಾತ್ರವಿತ್ತು ಎಂದು ಎನ್‌ಐಎ ತನಿಖೆ ವೇಳೆ ತಿಳಿದುಬಂದಿದೆ.

ಹಿಟ್ ಲಿಸ್ಟ್ ನಂಬರ್ 4

ಶಾರಿಕ್ ಜತೆ ಮಂಗಳೂರು ಗೋಡೆ ಬರಹ ಪ್ರಕರಣದ ಆರೋಪಿಯಾಗಿರುವ ಮಾಜ್‌ ಮುನೀರ್ ಸಹ ಹಿಟ್‌ ಲಿಸ್ಟ್‌ನಲ್ಲಿದ್ದಾನೆ. ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನಲ್ಲಿಯೂ ಭಾಗಿಯಾಗಿದ್ದ. ಅರಾಫತ್ ಅಲಿ ಮಾಜ್‌ನ ಹ್ಯಾಂಡ್ಲರ್ ಆಗಿದ್ದ.

ಹಿಟ್ ಲಿಸ್ಟ್ ನಂಬರ್ 5

ಶಿವಮೊಗ್ಗದಲ್ಲಿ ನಡೆದಿದ್ದ ಟ್ರಯಲ್ ಬ್ಲಾಸ್ಟ್‌ನಲ್ಲಿ ಎನ್ಐಎನಿಂದ ಬಂಧನವಾಗಿರುವ ಸೈಯದ್ ಯಾಸಿನ್ ಮತ್ತೊಬ್ಬ ಪ್ರಮುಖ ಶಂಕಿತ ಉಗ್ರ. ಟ್ರಯಲ್ ಬ್ಲಾಸ್ಟ್ ಆದ ಬಳಿಕ ಎನ್ ಐ ಎ ಗೆ ಮೊದಲು ಸಿಕ್ಕಿಬಿದ್ದಿರುವ ಆರೋಪಿ ಈತ. ಈತನಿಗೆ ಅಬ್ದುಲ್ ಮತೀನ್ ತಾಹಾ ಹ್ಯಾಂಡ್ಲರ್ ಆಗಿದ್ದ.

ಹಿಟ್ ಲಿಸ್ಟ್ ನಂಬರ್ 6

ಇನ್ನೊಬ್ಬ ಮುಸಾಬಿರ್ ಹುಸೇನ್ ಶಾಜಿಬ್ ಬಂಧಿತ ಆರೋಪಿಯಾಗಿದ್ದಾನೆ. 2020ರ ಅಲ್ ಇದ್ ಮಾಡಲ್ ಕೇಸ್‌ನ ಆರೋಪಿಯಾಗಿದ್ದು, ಗುರಪ್ಪನಪಾಳ್ಯದಲ್ಲಿ ದಾಖಲಾಗಿದ್ದ ಕೇಸಲ್ಲಿ A17 ಆರೋಪಿಯಾಗಿದ್ದಾನೆ. ತಮಿಳುನಾಡು ಪೊಲೀಸರ ದಾಳಿ ವೇಳೆ ಮುಸಾಬಿರ್ ಹುಸೇನ್ ಹಾಗೂ ಅಬ್ದುಲ್ ಮತೀನ್ ತಾಹಾ ನಾಪತ್ತೆಯಾಗಿದ್ದರು. ಗುರಪ್ಪನಪಾಳ್ಯದಲ್ಲಿ ಮನೆ ಮಾಡಿಕೊಂಡು ವಿದ್ವಂಸಕ ಕೃತ್ಯಗಳಿಗೆ ಪ್ಲಾನ್ ಮಾಡಿದ್ದರು. ಸದ್ಯ ಈತನೇ ಈಗ ರಾಮೇಶ್ವರಂ ಕೆಫೆ ಬ್ಲಾಸ್ಟ್ ನ ರೂವಾರಿಯಾಗಿದ್ದಾನೆ.

ಇದನ್ನೂ ಓದಿ: Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಒಟ್ಟು 6 ಆರೋಪಿಗಳಲ್ಲಿ ಸೈಯದ್ ಯಾಸಿನ್ ಶಿವಮೊಗ್ಗ ನಗರದವನು. ಈತನನ್ನು ಹೊತರುಪಡಿಸಿದರೆ ಇನ್ನುಳಿದ ಐವರು ತೀರ್ಥಹಳ್ಳಿ ಮೂಲದವರಾಗಿದ್ದಾರೆ.

ಟ್ರಾನ್ಸಿಸ್ಟ್ ವಾರೆಂಟ್ ಅನುಮತಿ ಕೇಳಿರುವ ಎನ್‌ಐಎ

ಬಂಧಿತ ಶಂಕಿತ ಉಗ್ರರಿಬ್ಬರಾದ ಪಾತಕಿ ಮುಸಾವೀರ್ ಶಾಜೀಬ್ ಹುಸೇನ್‌ ಹಾಗೂ ಅಬ್ದುಲ್‌ ಮತೀನ್‌ ತಾಹಾನನ್ನು ವಶಕ್ಕೆ ತೆಗೆದುಕೊಂಡಿರುವ ಎನ್‌ಐಎ ತಂಡವು, ಮೂರು ದಿನಗಳ ಟ್ರಾನ್ಸಿಸ್ಟ್ ವಾರೆಂಟ್ ಅನುಮತಿ ಪಡೆದಿದ್ದು, ಕೋಲ್ಕೊತಾದಿಂದ ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತರಲು ಕ್ರಮ ಕೈಗೊಂಡಿದೆ.

Exit mobile version