Site icon Vistara News

NIA Raid: ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ; ಶಿರಸಿಯಲ್ಲಿ ನಿಷೇಧಿತ ಪಿಎಫ್‌ಐ ಸದಸ್ಯನ ಬಂಧನ

NIA Raid

ಕಾರವಾರ: ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಯುವಕನೊಬ್ಬನನ್ನು ಎನ್‌ಐ‌ಎ ತಂಡ ಬಂಧಿಸಿದೆ. ಕೋಮು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಎನ್‌ಐಎ ತಂಡ ದಾಳಿ (NIA Raid) ನಡೆಸಿ ಯುವಕನನ್ನು ಬಂಧಿಸಿದೆ.

ಅಬ್ದುಲ್ ಶಕೂರ್(32) ಬಂಧಿತ ಯುವಕ. ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಕೆಲ ದಿನಗಳ ಹಿಂದಷ್ಟೇ ಬಕ್ರೀದ್ ಆಚರಣೆಗಾಗಿ ದಾಸನಕೊಪ್ಪಕ್ಕೆ ಬಂದಿದ್ದ. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಬನವಾಸಿ ಪೊಲೀಸರ ಸಹಕಾರದಿಂದ ಯುವಕನನ್ನು ಎನ್‌ಎಐ ಬಂಧಿಸಿದೆ.

ಬಂಧಿತ ಯುವಕ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯ ಆಗಿದ್ದು, ಈತ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ, ಶಿವಮೊಗ್ಗದಲ್ಲಿ ಮಸೀದಿ ಹಾಗೂ ಇತರೆ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿರುವ ಆರೋಪ‌ ಈತನ ಮೇಲಿದೆ.

ಇದನ್ನೂ ಓದಿ | Prajwal Revanna Case: ಪ್ರಜ್ವಲ್ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ;‌ ʼಎಸ್‌ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲʼ ಎಂದು ದೂರು

ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹಾಗೂ ಪಾಸ್‌ಪೋರ್ಟ್‌ ನಕಲಿ ದಾಖಲೆ ನೀಡಿದ ಆರೋಪದಡಿ ಆರೋಪಿಯನ್ನು ಬಂಧಿಸಿದ್ದು, ಸದ್ಯ ಆರೋಪಿಗೆ ನೋಟೀಸ್ ನೀಡಿ ಗುಪ್ತ ಸ್ಥಳದಲ್ಲಿ NIA ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಉಡುಪಿಯಲ್ಲಿ ನಿಲ್ಲದ ಗ್ಯಾಂಗ್ ವಾರ್; ಇಬ್ಬರು ಪುಂಡರು ಅಂದರ್‌

Udupi Gang War

ಉಡುಪಿ: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್ (Udupi Gang War) ನಡೆದಿದ್ದು, ಯುವಕನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಉಡುಪಿಯ ಪುತ್ತೂರಿನಲ್ಲಿ ಜೂನ್ 15ರ ರಾತ್ರಿ ಘಟನೆ ನಡೆದಿದೆ.

ಚರಣ್‌ ಎಂಬಾತ ಸೆಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಶಬರಿ ಎಂಬಾತನಿಗೆ ಚರಣ್‌ ಬೈದಿದ್ದ. ಈ ವಿಚಾರಕ್ಕೆ ಮಾತುಕತೆಗೆಂದು ಪ್ರವೀಣ್‌ ಎಂಬಾತ ಉಡುಪಿ ನಗರದ ಪುತ್ತೂರಿ‌ನ ಬಿರಿಯಾನಿ ಪಾಯಿಂಟ್‌ ಬಳಿ ಚರಣ್‌ನನ್ನು ಕರೆದಿದ್ದ. ಇತ್ತ ಚರಣ್‌ ತನ್ನ ಮೂವರು ಸ್ನೇಹಿತರ ಜತೆಗೂಡಿ ಆಗಮಿಸಿದ್ದ.

ಚರಣ್‌ ಬರುತ್ತಿದ್ದಂತೆ ಪ್ರವೀಣ್‌ ಗ್ಯಾಂಗ್‌ ಏಕಾಏಕಿ ತಲವಾರ್‌ ಬೀಸಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್ ಬಿಟ್ಟು ಓಡಿದ್ದಾರೆ. ಇತ್ತ ಚರಣ್ ಸಿಗದಿದ್ದಕ್ಕೆ ಆತನ ಬೈಕ್‌ ಅನ್ನು ಜಖಂಗೊಳಿಸಿದ್ದಾರೆ. ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಪುಂಡರು ಅಟ್ಟಹಾಸ ಮೆರೆದಿದ್ದಾರೆ.

ಉಡುಪಿಯಲ್ಲಿ ಹೆಚ್ಚುತ್ತಿರುವ ಗ್ಯಾಂಗ್ ವಾರ್ ಪ್ರಕರಣಕ್ಕೆ ಉಡುಪಿ ಜನತೆ ಭಯಭೀತರಾಗಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ಮೂರು ಗ್ಯಾಂಗ್ ವಾರ್ ಪ್ರಕರಣ ದಾಖಲಾಗಿದೆ.

ಕೃತ್ಯದ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಅರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಅಭಿ, ಪ್ರವೀಣ್ ಕಟಪಾಡಿ, ದೇಶರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version