ಕಾರವಾರ/ಕೊಪ್ಪಳ/ಮೈಸೂರು: ಗುರುವಾರ ಮುಂಜಾನೆ ರಾಜ್ಯದ ಹತ್ತಾರು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದ್ದು, ಮೈಸೂರು, ಶಿರಸಿ ಹಾಗೂ ಕೊಪ್ಪಳದಲ್ಲೂ ದಾಳಿ ನಡೆಸಿ ಮೂವರನ್ನು ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದೆ.
ಮೈಸೂರಿನಲ್ಲಿ ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಖಲಿಂ ಉಲ್ಲಾನನ್ನು ಶಾಂತಿನಗರ ನಿವಾಸದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಧ್ಯರಾತ್ರಿ 3.30ರ ವೇಳೆ ದಾಳಿ ನಡೆಸಿದ 8 ಜನ ಎನ್‌ಐಎ ಅಧಿಕಾರಿಗಳ ತಂಡ, ಬೆಳಗ್ಗೆ 6 ಗಂಟೆವರೆಗೆ ಮನೆಯಲ್ಲಿ ವಿಚಾರಣೆ ನಡೆಸಿ ನಂತರ ಅಲ್ಲಿಂದ ಸಿಸಿಬಿ ಕಚೇರಿಗೆ ಕರೆದೊಯ್ದು ಬಳಿಕ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಶಿರಸಿಯ ವಿವಿಧೆಡೆ ಸ್ಥಳೀಯ ಪೊಲೀಸರೊಂದಿಗೆ ಎನ್‌ಐಎ ದಾಳಿ ನಡೆಸಿದ್ದು ಶಿರಸಿಯ ಟಿಪ್ಪು ನಗರದ ಒಬ್ಬ ಎಸ್‌ಡಿಪಿಐ ಮುಖಂಡನನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದೆ. ಎಸ್‌ಡಿಪಿಐ ಮುಖಂಡ ಅಬ್ದುಲ್ ಹೊನ್ನಾವರ್(45) ಬಂಧಿತ ವ್ಯಕ್ತಿ. ಬೆಳಗಿನ ಜಾವ 3.30ರ ವೇಳೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ಒಂದು ಲ್ಯಾಪ್‌ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ.
ಪಿಎಫ್ಐ ಸಂಘಟನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಬ್ದುಲ್ ಫೈಯಾಜ್‌ನನ್ನು ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿನ ಮನೆಯಲ್ಲಿ ಈತನನ್ನು ಬೆಂಗಳೂರಿನ ಕೆ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ಮನೆಗೆ ದಾಳಿ ಮಾಡಿ ಬಂಧಿಸಿ ಕರೆದೊಯ್ಯಲಾಗಿದೆ.
ಇದನ್ನೂ ಓದಿ | NIA raid | ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ, 100ಕ್ಕೂ ಹೆಚ್ಚು ಮಂದಿ ವಶಕ್ಕೆ