Site icon Vistara News

NIA Raid | ಮುಸ್ಲಿಮರನ್ನು ಗುರಿಯಾಗಿಸಿ ದಾಳಿ: ರಾಮನಗರ, ಕೊಪ್ಪಳದಲ್ಲಿ ರಸ್ತೆಗಿಳಿದು ಪ್ರತಿಭಟನೆ

NIA protest Ramanagara

ರಾಮನಗರ/ಕೊಪ್ಪಳ: ರಾಜ್ಯಾದ್ಯಂತ ಮುಸ್ಲಿಂ ಮುಖಂಡರನ್ನೇ ಗುರಿಯಾಗಿಟ್ಟುಕೊಂಡು ಎನ್‌ಐಎ ದಾಳಿ ನಡೆದಿದೆ ಎಂದು ಆಪಾದಿಸಿ ರಾಮನಗರದಲ್ಲಿ ಗುರುವಾರ ರಸ್ತೆ ತಡೆ ಮೂಲಕ ಪ್ರತಿಭಟನೆ ಸಲ್ಲಿಸಲಾಯಿತು.

ರಾಮನಗರ ಐಜೂರು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು, ಮುಸ್ಲಿಂ ಸಮುದಾಯದ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆದಿದೆ. ತನಿಖೆ ವೇಳೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ದಾಳಿ ಮಾಡಲಾಗಿದೆʼʼ ಎಂದು ಆಪಾದಿಸಿದರು.

ಸರಕಾರಿ ಸಂಘ ಸಂಸ್ಥೆಗಳು ಪಾರದರ್ಶಕವಾಗಿ, ಸ್ವತಂತ್ರವಾಗಿ ಕೆಲಸ ಮಾಡಬೇಕು. ಆದರೆ, ಕೇವಲ ಬಿಜೆಪಿ ಸರ್ಕಾರದ ಒತ್ತಡದಿಂದ ದಾಳಿ ನಡೆಯುತ್ತಿದೆ ಎಂದು ಆಪಾದಿಸಲಾಯಿತು.

ನಗರದ ಐಜೂರು ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರಕ್ಕೆ ಸ್ವಲ್ಪ ಕಾಲ ಅಡ್ಡಿಯಾಯಿತು. ʻಶೇಮ್ ಶೇಮ್ ಐನ್ಐಎ, ಗೋಬ್ಯಾಕ್ ಎನ್ಐಎʼ ಘೋಷಣೆ ಕೂಗಲಾಯಿತು. ಅನುಮತಿ ಪಡೆಯದೆ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದರು.

ಕೊಪ್ಪಳದಲ್ಲಿ ಪಿಎಫ್‌ಐ ಕಾರ್ಯಕರ್ತರಿಂದ ಪ್ರತಿಭಟನೆ

ಕೊಪ್ಪಳದಲ್ಲೂ ಭಾರಿ ಪ್ರತಿಭಟನೆ
ಕೊಪ್ಪಳದಲ್ಲೂ ಎನ್‌ಐಎ ದಾಳಿ ನಡೆದಿದ್ದು, ಪಿಎಫ್‌ಐ ಜಿಲ್ಲಾಧ್ಯಕ್ಷ ಅಬ್ದುಲ್‌ ಫಯಾಜ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಕಾರ್ಯಕರ್ತರು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ನೂರಾರು ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದಾಗ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ವಾಗ್ವಾದ ನಡೆಯಿತು.

ಇದನ್ನೂ ಓದಿ | NIA Raid | ತಲೆಮರೆಸಿಕೊಂಡ ಪಿಎಫ್‌ಐ ಮುಖಂಡನಿಗೆ ಹುಡುಕಾಟ, ಕಾಪುವಿನಲ್ಲಿ ಕಾರ್ಯಕರ್ತರಿಂದ ರಸ್ತೆ ತಡೆ

Exit mobile version